ACCIDENT ವರ್ತಕ ಮರಣ 
ಗದಗ

ACCIDENT ಆಟೋ ಡಿಕ್ಕಿಯಾಗಿ ಎಪಿಎಂಸಿ ವರ್ತಕ ಮರಣ

ರವಿ ಎಸ್. ಬಳೂಟಗಿ
ಲಕ್ಷ್ಮೇಶ್ವರ: ಆಟೋ ಡಿಕ್ಕಿಯಾಗಿ ಬೈಕ್ ಸವಾರ (ACCIDENT), ಎಪಿಎಂಸಿ ವರ್ತಕ ಸಿದ್ದನಗೌಡ ಬಳ್ಳೊಳ್ಳಿ (62) ಸೋಮವಾರ ಮೃತಪಟ್ಟಿದ್ದಾರೆ.
ಘಟನೆ ವಿವರ: ಸಿದ್ದನಗೌಡ ಬಳ್ಳೊಳ್ಳಿ ಅವರು ಶಿಗ್ಲಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ಒಳ ರಸ್ತೆಯಲ್ಲಿ ಬೈಕ್ ಮೇಲೆ ಬರುವಾಗ, ಬಿಸಿಎನ್ ಕಾಲೇಜಿನ ಹತ್ತಿರ ಗೋವನಾಳ ಕಡೆಯಿಂದ ವೇಗವಾಗಿ ಬಂದ ಆಟೋ ರಭಸವಾಗಿ ಗುದ್ದಿದೆ. ಆಟೋ ಗುದ್ದಿದ ರಭಸಕ್ಕೆ ಸಿದ್ದನಗೌಡ ಬಳ್ಳೊಳ್ಳಿ ಅವರು ಬೈಕ್‌ನಿಂದ ಬಿದ್ದು ತಲೆಗೆ ಬಲವಾದ ಏಟು ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಸ್ಥಳೀಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿಂದ ಹುಬ್ಬಳ್ಳಿಯ ಕೆಎಂಸಿಗೆ ದಾಖಲು ಮಾಡಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಆಟೋ ಚಾಲಕ ಪರಾರಿ ಆಗಿದ್ದು, ಅಪಘಾತದ ದೃಶ್ಯಗಳು ಸಿಸಿಟವಿ ಕ್ಯಾಮರಾದಲ್ಲಿ ದಾಖಲಾಗಿವೆ. ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.