Anganwadiಲಕ್ಷ್ಮೇಶ್ವರದ ಕೆಂಚಲಾಪುರ ಓಣಿಯ ನೂತನ ಅಂಗನವಾಡಿ ಕೇಂದ್ರವನ್ನು ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಉದ್ಘಾಟಿಸಿದರು. ನಂದಾ ನವಲೆ, ನಾಗರತ್ನಾ ಬುರಡಿ, ಹೇಮಣ್ಣ ಬುರಡಿ, ಗಿರಿಜವ್ವ ಅಂಬಲಿ, ಭಾಗ್ಯಶ್ರೀ ಎಲ್., ಮಂಜುಳಾ ಗುಂಜಳ, ಇತರರಿದ್ದರು. 
ಗದಗ

Anganwadi ಅಂಗನವಾಡಿ ಮಕ್ಕಳ ಭವಿಷ್ಯ ರೂಪಿಸುವ ಬುನಾದಿ

ಲಕ್ಷ್ಮೇಶ್ವರ: ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಲಭಿಸಿದರೆ ಮಕ್ಕಳ ಬದುಕು, ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಅಂತಹ  ಕಾರ್ಯವನ್ನು ಅಂಗನವಾಡಿ ಕೇಂದ್ರಗಳು (Anganwadi ) ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿವೆ ಎಂದು ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಹೇಳಿದರು.
 ಪಟ್ಟಣದ ಕೆಂಚಲಾಪುರ ಓಣಿಯ ಅಂಗನವಾಡಿ ಕೇಂದ್ರ ಸಂಖ್ಯೆ 246ರ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿ ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯ ರೂಪಿಸಲು ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ ಮಾತನಾಡಿದರು. ನಾಗರತ್ನಾ ಬುರಡಿ, ಹೇಮಣ್ಣ ಬುರಡಿ, ಗಿರಿಜವ್ವ ಅಂಬಲಿ, ಭಾಗ್ಯಶ್ರೀ ಎಲ್., ಮಂಜುಳಾ ಗುಂಜಳ, ಪ್ರಕಾಶ ಗುತ್ತಲ, ಈರಣ್ಣ ನಾಗಲೋಟಿ, ಪ್ರಬಣ್ಣ ಚಾವಡಿ, ಶಂಕ್ರಪ್ಪ ಬುರಡಿ, ಮಹಾಂತೇಶ ಜಾಲಗಾರ, ರವಿ ಗುಂಜಳ, ಕಾರ್ಯಕರ್ತೆಯರಾದ ನಿರ್ಮಲಾ ಪಶುಪತಿಹಾಳ, ವಿಜಯಲಕ್ಷ್ಮೀ ನವಲಗುಂದ, ಬಾಳಮ್ಮ ಭಜಂತ್ರಿ, ಸಹಾಯಕಿಯರಾದ ರಕ್ಷಿತಾ ಭಜಂತ್ರಿ, ಶೋಭಾ ಶಿರಹಟ್ಟಿ, ಪ್ರಮಿಳಾ ಬಾರಕೇರ, ಮುಂತಾದವರಿದ್ದರು. ವೀಣಾ ಹಿತ್ತಲಮನಿ ನಿರ್ವಹಿಸಿದರು.