ಮುಂಡರಗಿ ತಾಲೂಕಿನ ಡಂಬಳ ಗ್ರಾ.ಪಂ. ಆವರಣದಲ್ಲಿ (AMBEDKAR)ಶನಿವಾರ ಶಾಸಕ ಜಿ.ಎಸ್.ಪಾಟೀಲ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿದರು. ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಮರಿಯಪ್ಪ ಶಿದ್ದಣ್ಣವರ, ಮರತೆಮಪ್ಪ ಆದಮ್ಮನವರ ಇತರರಿದ್ದರು.
ಮುಂಡರಗಿ: (AMBEDKAR) ನಮ್ಮ ದೇಶದಲ್ಲಿ ಹಲವು ಧರ್ಮಗಳು, ನೂರಾರು ಜಾತಿಗಳಿದ್ದರೂ ದೇಶದ ಅಖಂಡತೆ, ಏಕತೆಯನ್ನು ಕಾಪಾಡಿಕೊಂಡು ಒಗ್ಗಟ್ಟಿನಿಂದ ಬಾಳುತ್ತಿದ್ದೇವೆ. ಅದಕ್ಕೆ ಮೂಲಕಾರಣವೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡಮಾಡಿದ ಸಂವಿಧಾನ. ಅಂಬೇಡ್ಕರ್ ಅವರು ದೇಶದಲ್ಲಿ ಸಮಾನತೆ ತರಲು ಶ್ರಮಿಸಿದರು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 6.8 ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೇ ದೊಡ್ಡ ಶಕ್ತಿಯಾಗಿದ್ದು ಶಿಕ್ಷಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಬದುಕು, ಬರಹ, ಜ್ಞಾನವು ನಮಗೆಲ್ಲ ಬೆಳಕಾಗಬೇಕು. ಬುದ್ಧ ತನುವಾಗಬೇಕು. ಬಸವಣ್ಣನವರು ಪ್ರಾಣವಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಆತ್ಮವಾಗಬೇಕು. ಅಂದಾಗ ಸಮ ಸಮಾಜ ಕಟ್ಟುವುದಕ್ಕೆ ಸಾಧ್ಯ. ಸಂವಿಧಾನ ದೇಶದ ಪ್ರತಿಯೊಬ್ಬರ ಜೀವಾಳ. ಸಮಾಜದಲ್ಲಿ ಸಜ್ಜನತೆಯನ್ನು ಅಳವಡಿಸಿಕೊಳ್ಳಬೇಕಾದರೆ ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಜೀವನ ಅನುಭಾವ ನಾವಾಗಬೇಕು ಎಂದು ಹೇಳಿದರು.
ಜಗದ್ಗುರು ತೋಂಟದಾರ್ಯ ವಿದ್ಯಾ ಸಮಿತಿ ಆಡತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಧಮನಿತರ, ಶೋಷಿತರ ಧ್ವನಿಯಾಗಿದ್ದರು. ಅವರ ಆಶಯದಂತೆ ಡಾ.ಅಂಬೇಡ್ಕರ್ ಮೂರ್ತಿ ಅನಾವರಣ ಮಾಡಿದ್ದು ಮಹತ್ವಪೂರ್ಣ ಕಾರ್ಯ ಎಂದರು.
ಮೂರ್ತಿ ಪ್ರತಿಷಷ್ಠಾಪನೆ ಸಮಿತಿ ಅಧ್ಯಕ್ಷ ಮರಿಯಪ್ಪ ಶಿದ್ದಣ್ಣವರ, ಎಚ್.ಡಿ.ಪೂಜಾರ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ, ಮಿಥುನಗೌಡ ಪಾಟೀಲ, ಮರತೆಮಪ್ಪ ಆದಮ್ಮನವರ, ಮೋಹನ ಆಲಮೇಲ್ಕರ್, ಡಿ.ಡಿ. ಮೋರನಾಳ, ಎಸ್.ಎನ್. ಬಳ್ಳಾರಿ, ಸೋಮಣ್ಣ ಹೈತಾಪೂರ, ಡಿ.ಜಿ.ಪೂಜಾರ, ಸತೀಶ ಪಾಸಿ, ರಾಮಣ್ಣ ಮೇಗಲಮನಿ, ಮಂಜಯ್ಯಸ್ವಾಮಿ ಅರವಟಗಿಮಠ, ಮಾರುತಿ ಜೋಗದಂಡಕರ, ಮಲ್ಲಪ್ಪ ಯರಾಶಿ, ಗವಿಸಿದ್ದಪ್ಪ ಹಾದಿಮನಿ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಗವಿಸಿದ್ದಪ್ಪ ಬಿಸನಳ್ಳಿ, ಮಲ್ಲಿಕಾರ್ಜುನ ಗೌಡಣ್ಣವರ, ಲಕ್ಷ್ಮಣ ತಗಡಿನಮನಿ, ಮುತ್ತು ಹಿರೇಮಠ, ಜಾಕೀರ ಮೂಲಿಮನಿ, ವೆಂಕಟೇಶ, ಬಾಲರಾಜ ಹಾರವರ, ಉಡಚಪ್ಪ ಹಳ್ಳಿಕೇರಿ, ಇತರರು ಇದ್ದರು.