ಗದಗ

ತಿಂಗಳಾದರು ಪತ್ತೆ ಆಗದ ಏಇಇ ಫರ್ವೇಜ

ಶಿವಾನಂದ ಹಿರೇಮಠ ಗದಗ

ಇಲಾಖೆಯಲ್ಲಿ ಅನುದಾನ ಕೊರತೆಯಾಗಿ, ಸರ್ಕಾರಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿರುವುದರಿಂದ ಗುತ್ತಿಗೆದಾರರಿಂದ ಒತ್ತಡಕ್ಕೆ ಕೆಆರ್​ಡಿಎಲ್​ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ (ಎಇಇ) ಫರ್ವೇಜ್​ ಧಾರವಾಡ ನಾಪತ್ತೆ ಆಗಿ ಇಂದಿಗೆ ಒಂದು ತಿಂಗಳು ಗತಿಸಿದರೂ ಸಹ ಇನ್ನೂ ಪತ್ತೆಯಾಗಿಲ್ಲ.

ಕಳೆದ ಒಂದು ತಿಂಗಳಿಂದ ಪೊಲೀಸ್​ ಇಲಾಖೆ ರ್ವೇಜ ಅವರನ್ನು ಹುಡುಕುತ್ತಲೇ ಇದ್ದರೂ ಏಇಇ ರ್ವೇಜ ಧಾರವಾಡ ಮಾತ್ರ ನಾಪತ್ತೆ ಆಗಿದ್ದಾರೆ. ಜಿಲ್ಲೆ ಮತ್ತು ಬೆಂಗಳೂರು ವಿಭಾಗದ ಪೊಲೀಸ ವಿಭಾಗ 5 ತಂಡಗಳನ್ನು ರಚಿಸಿ ರಾಜ್ಯ ಮತ್ತು ಪರರಾಜ್ಯಗಳನ್ನು ಸಂಚರಿಸುತ್ತಲೇ ಇದ್ದರೂ ರ್ವೇ ಸಿಗದಿರುವುದ ಅನುಮಾನ ಮೂಡುವಂತಿದೆ. ಅಥವಾ ಸಿಕ್ಕರೂ ವಿಚಾರಣೆ ಕಾರಣದಿಂದ ಪೊಲೀಸ್​ ಇಲಾಖೆ ಪತ್ತೆ ಮಾಡಿರುವ ವಿಷಯ ಮುಚ್ಚಿಟ್ಟಿದೆಯೇ ಎಂಬ ಮಾತುಗಳು ನಗರಾದ್ಯಂತ ಸುಳಿದಾಡುತ್ತಿವೆ.

ಏನಿದು ಪ್ರಕರಣ?

ಕೆಆರ್​ಐಡಿಎಲ್​ ಎಇಇ ಫರ್ವೇಜ್​ ಧಾರವಾಡ ಸೆ. 12ರಂದು ಬೆಂಗಳೂರಿನ ಕೆಆರ್​ಡಿಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ತಮ್ಮ ಉಪವಿಭಾಗದ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿರುವುದರಿಂದ ತೀವ್ರ ಒತ್ತಡ ಎದುರಿಸುತ್ತಿರುವುದಾಗಿ ಡೆತ್​ನೋಟ್​ನಲ್ಲಿ ತಿಳಿಸಿದ್ದರು. ಕೋಟ್ಯಂತರ ರೂ.ಮೊತ್ತದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಾಗೂ ಉಪ ಗುತ್ತಿಗೆದಾರರು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಮನೆ ಬಳಿಗೂ ಬಂದು ಪ್ರಶ್ನಿಸುತ್ತಿದ್ದು, ಅನುದಾನ ಬಿಡುಗಡೆ ಕುರಿತು ದೂರವಾಣಿ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಸೆ. 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ಫರ್ವೇಜ್​ ಮನೆಯಿಂದ ಹೊರಟಿದ್ದರು. ಸೆ. 14ರವರೆಗೆ ಅವರ ಮೊಬೈಲ್​ ಸಂಪರ್ಕದಲ್ಲಿತ್ತು. ಸೆ. 16ರಂದು ಫರ್ವೇಜ್​ ನಾಪತ್ತೆ ಆಗಿರುವ ಕುರಿತು ಗದಗ- ಬೆಟಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ 5 ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತದ ನಂತರ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ೋನ್​ ಆನ್​ ಗಿ ಸ್ವಿಚ್​ ಆ್​ ಆಗಿತ್ತು. ಮೂರ್ನಾಲ್ಕು ದಿನಗಳ ನಂತರ ಮಧ್ಯಪ್ರದೇಶದ ಭೂಪಾಲ ರೈಲು ನಿಲ್ದಾಣದಲ್ಲಿ ರ್ವೇ ಸಂಚರಿಸುವ ದೃಸ್ಯಗಳು ಸಿಸಿ ಕೆಮಾರದಲ್ಲಿ ಸೆರೆ ಆಗಿದ್ದವು. ತದನಂತರ ಪೊಲೀಸ್​ ಇಲಾಖೆ ಶೋದ ಕಾರ್ಯಾಚರಣೆ ಗೌಪ್ಯವಾಗಿಯೇ ನಡೆಯುತ್ತಿದೆ ಎನ್ನಲಾಗುತ್ತಿದೆ.

ಸಂಬಂಧವೇನು?

ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸವು ಸಂಸ್ಥೆ ಆಗಿರುವ ಕೆಆರ್​ಐಡಿಎಲ್​ ಸಂಸ್ಥೆಯು ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿನ ಅಧಿಕಾರಿಗಳು ಅದೇ ಕಾರ್ಯವನ್ನು ಮಾಡಬೇಕಾಗಿದೆ. ಹಾಗೂ ಕೆಆರ್​ಐಡಿಎಲ್​ ಮತ್ತು ನಿಮಿರ್ತಿ ಕೇಂದ್ರಗಳಿಗೆ ಯೋಜನೆ ಅನುಷ್ಠಾನಕ್ಕೂ ಮನ್ನವೇ ಸರ್ಕಾರ ಅನುದಾನ ಬಿಡುಗಡೆ ಆಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ ಆಗಬಾರದು ಎಂಬ ಉದ್ದೇಶದಿಂದ ಮುಂಗಡ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಅನುದಾನ ಪಡೆದು ಕಾಮಗಾರಿ ಅನುಷ್ಠಾನ ಮಾಡುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡಬೇಕು. ಆದರೆ, ಕೆಆರ್​ಐಡಿಎಲ್​ ಗೆ ಸರ್ಕಾರ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಒತ್ತಡ ಏಕಾಗುತ್ತದೆ. ಹಿಂದಿನ ಉದ್ದೇಶವಾದರೂ ಏನು ಎಂದು ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಗೌಪ್ಯ ವಿಚಾರಣೆಯೇ?

ಕಳೆದ 15 ದಿನಗಳಿಂದ ಪೊಲೀಸರು ಪ್ರಕರಣ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ರ್ವೇಜ ಪತ್ತೆ ಮಾಡಲಾಗಿದ್ದು, ರ್ವೇಜ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿದ ನಂತರ ಏತಕ್ಕಾಗಿ ಸ್ವಿಚ್ಚ ಆ್​ ಮಾಡಿಕೊಂಡು ಬೇರೆಡೆ ಪಲಾಯನ ಮಾಡಿದ. ಡೆತ್​ ನೊಟ ಬರೆದಿಡಲು ಕಾರನವೇನು? ನಿಜವಾಗಲೂ ಅನುದಾನ ಬಿಡುಗಡೆ ಆಗದಿರುವುದೇ ಕಾರಣವೇ? ಅಥವಾ ಅದ ಹಿನ್ನೆಲೆ ಬೇರೆ ಇದೆಯೇ? ಹಣಕಾಸಿನ ವ್ಯವಹಾರಳು ಏನಾದರೂ ಇವೆಯೇ ಎಂಬುದರ ಕುರಿತು ರ್ವೇಜ ನನ್ನು ಪೊಲೀಸರು ಗೌಪ್ಯವಾಗಿ ವಿಚಾರಣೆ ಮಾಡುತ್ತಿರದಬಹುದು ಎಂದು ಪೊಲೀಸ್​ ಇಲಾಖೆ ಮತ್ತು ನಗರದ ಜನರಲ್ಲಿ ಅನುಮಾನ ಮೂಡಿದೆ.