ಗಜೇಂದ್ರಗಡ ತಾಲೂಕಿನ ರಾಜೂರ ಬಳಿ ಟೆಂಪೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿರುವುದು.
ಗಜೇಂದ್ರಗಡ: ಟೆಂಪೋ ಹಾಗೂ ಬೈಕ್ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ತಾಲೂಕಿನ ರಾಜೂರ ಸಮೀಪ ಸೋಮವಾರ ಮಧ್ಯಾಹ್ನ ನಡೆದಿದೆ. ಬೈಕ್‌ನಲ್ಲಿದ್ದ ನವೀನ್ ಶಂಕ್ರಪ್ಪ ಹದ್ದಣ್ಣವರ (18) ಹಾಗೂ ಶೋಭಾ ತಿಪ್ಪಣ್ಣ ಗುಮಗೇರಿ (21) ಮೃತಪಟ್ಟವರು. ಅಭಿ ಹದ್ದಣ್ಣವರ ಹಾಗೂ ಟೆಂಪೋ ಚಾಲಕ ಗಾಯಗೊಂಡಿದ್ದು, ಹೆಸರು ತಿಳಿದು ಬಂದಿಲ್ಲ. ರಾಯಚೂರು ಜಿಲ್ಲೆ ಮಾನ್ವಿಯತ್ತ ಟೆಂಪೋ ಹೊರಟಿತ್ತು. ಗೋಗೇರಿಯಿಂದ ಸೂಡಿಯತ್ತ ಬೈಕ್ ಹೊರಟಿತ್ತು. ಆದರೆ, ಗಜೇಂದ್ರಗಡ ಎರಡ್ಮೂರು ಕಿ.ಮೀ. ದೂರವಿರುವಾಗ ಈ ದುರ್ಘಟನೆ ನಡೆದು ಇಬ್ಬರು ಮೃತಪಟ್ಟಿದ್ದಾರೆ.