ನರೇಗಲ್ಲ ಪಟ್ಟಣದಲ್ಲಿ Theft ಕಳುವಾಗಿದ್ದ 4 ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಠಾಣೆ ಸಿಬ್ಬಂದಿ.
ನರೇಗಲ್ಲ: ಪಟ್ಟಣದಲ್ಲಿ ಕಳವು Theft ಮಾಡಿದ್ದ 4 ಬೈಕ್‌ಗಳನ್ನು ಶುಕ್ರವಾರ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ನಿವಾಸಿ ಮಂಜುನಾಥ ಮಲ್ಲಪ್ಪ ಜಿಗೇರಿ ಅವರ ಬೈಕ್ ನರೇಗಲ್ ಪಟ್ಟಣದ ಇಂದಿರಾ ಕ್ಯಾಂಟೀನ್ ಸಮೀಪದಲ್ಲಿ ನ.12 ರಂದು ಕಳವಾಗಿದ್ದರ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಅದೇ ಗ್ರಾಮದ ನಿವಾಸಿ ಶಿವಪ್ಪ ಭರಮಪ್ಪ ಯಲಬುರ್ಗಿ(37) ಎಂಬ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಕಳುವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆದರೆ, ಇದೇ ರೀತಿ ಮೂರು ಬೈಕ್‌ಗಳನ್ನು ಸಹ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿತನಿಂದ ಹೊಂಡಾ ಶೈನ್, ಹೀರೋ ಎಚ್‌ಎಫ್ ಡಿಲಕ್ಸ್, ಹೀರೋ ಹೊಂಡಾ ಸ್ಪೆಂಡರ್ ಪ್ರೋ ಹಾಗೂ ಹಿರೋ ಸ್ಪೇಂಡರ್ ಪ್ಲಸ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಐಶ್ವರ್ಯ ನಾಗರಾಳ ಮಾಹಿತಿ ನೀಡಿದರು.
ನರೇಗಲ್ಲ ಠಾಣೆಯ ಸಿಬ್ಬಂದಿ ಅಶೋಕ ಮಾದರ, ಕಿರಣಕುಮಾರ ಹಿರೇಮಠ, ಉಮೇಶ ಬಂಗಾರಿ, ವಿಜಯ ಗೋದಿಗನೂರ, ಪಿ. ಕೆ. ದಾಸರ, ಸಂತೋಷ ಘಾಟಗೆ, ಎಸ್.ವಿ. ಹಲಬಾಗಿಲ, ವಸಂತ ರಾಠೋಡ, ಬಿ.ಆರ್. ನದಾಫ್, ಆರ್.ಎಸ್. ಕಪ್ಪತ್ತನವರ, ಎಂ. ಎನ್. ಮಾಟರಂಗಿ, ಎಎಸ್‌ಐ ಎಂ.ಆರ್. ಬಾರಕೇರ, ಎಎಸ್‌ಐ ಎಸ್.ಎಸ್. ಅಯ್ಯನಗೌಡ್ರ, ಗದಗ ಟೆಕ್ನಿಕಲ್ ಸೆಲ್ ಸಿಬ್ಬಂದಿ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.