ಸುರೇಶ ಬಾಳಿಕಾಯಿ ಅಧ್ಯಕ್ಷ, ಸಿದ್ದು ಗುಡಿಮನಿ ಉಪಾಧ್ಯಕ್ಷ
ಗದಗ: ಜಿಲ್ಲೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗದಗ ಜಿಲ್ಲಾ ನರೇಗಾ ನೌಕರರ ಕ್ಷೇಮಾಭಿವೃದ್ಧಿ (ನೇವಾಕ್) ಸಂಘದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷರಾಗಿ ಸುರೇಶ ಬಾಳಿಕಾಯಿ, ಉಪಾಧ್ಯಕ್ಷರಾಗಿ ಸಿದ್ದು ಗುಡಿಮನಿ, ರಾಜ್ಯ ಸಂಘಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ಕಿರಣಕುಮಾರ ಎಸ್.ಎಚ್., ಜಿಲ್ಲಾ ಸಂಘದ ಖಜಾಂಚಿಯಾಗಿ ವೀರೇಶ ಪಟ್ಟಣಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಫಕ್ಕೀರೇಶ ನಿಟ್ಟಾಲಿ, ಕಾರ್ಯದರ್ಶಿಗಳಾಗಿ ಅರುಣ ತಂಬ್ರಳ್ಳಿ ಮತ್ತು ಅರುಣ ಸಿಂಗ್ರಿ, ಉಪಕಾರ್ಯದರ್ಶಿಯಾಗಿ ಹರೀಶ ಸೊಬರದ ಮತ್ತು ಮಾಧ್ಯಮ ಸಂಯೋಜಕರಾಗಿ ವೀರೇಶ ಬಸನಗೌಡ್ರ ಆಯ್ಕೆ ಆಗಿದ್ದಾರೆ. ಇನ್ನೂ ತಾಲೂಕು ಪ್ರತಿನಿಧಿಗಳಾಗಿ ನವೀನ ಬಸರಿ (ಗದಗ), ಪ್ರಕಾಶ ಮ್ಯಾಕಲ್ (ಗಜೇಂದ್ರಗಡ), ಲಿಂಗರಾಜ ಅರಿಷಿಣದ (ಲಕ್ಷ್ಮೇಶ್ವರ), ಮೋಹನ ಡಂಬಳ (ಮುಂಡರಗಿ), ಶಾಂತಾ ತಿಮ್ಮರಡ್ಡಿ (ರೋಣ), ಹನುಮಂತ ಡಂಬಳ (ನರಗುಂದ), ಗುರು ಪಕ್ಕೀರಗೌಡ (ಶಿರಹಟ್ಟಿ) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಲಾಗಿದೆ.