ಗದಗ : ನಮ್ಮ ದೇಶ ವಿಕಸಿತ ಭಾರತ, ಭವ್ಯ ಭಾರತ, ಸದೃಢ ಭಾರತವಾಗಲು ದೇಶದಲ್ಲಿರುವ ಜನತೆ ಆರ್ಥಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಸಬಲರಾಗಬೇಕಾಗಿದೆ. ಜನತೆ ಸರ್ವಾಂಗಿಣವಾಗಿ ಸಬಲರಾಗಬೇಕಾಗಿದೆ. ಜನತೆ ಸರ್ವಾಂಗೀಣವಾಗಿ ಸಶಕ್ತರಾಗಲು ಯೋಗ ಸರ್ವೋತ್ಕೃಷ್ಟ ಸಾಧನವಾಗಿದೆ. ಯೋಗ ಸಾಧನೆಯಿಂದ ಜನತೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ ಒಂದು ಮಹಾನ್ ಶಕ್ತಿಯಾಗಿ ಬೆಳೆದು ದೇಶದ ಪ್ರಗತಿಗೆ ಸಹಕರಿಸುವರು ಇಂಥ ಯೋಗ ಶಿP್ಷÀಣ ಮುಖ್ಯವಾಗಿ ಯುವ ಜನಾಂಗಕ್ಕೆ ಯೋಗ ವಿದ್ಯಾಲಯಗಳಿಂದ ಪಡೆಯಲು ಸಾಧ್ಯವಾಗುವದು. ಈ ದಿಸೆಯಲ್ಲಿ ಯೋಗ ವಿದ್ಯಾಲಯಗಳಿಂದ ದೇಶದ ಸಬಲೀಕರಣ ಸಾಧ್ಯ ಎಂದು ಖ್ಯಾತ ವಾಗ್ಮಿಗಳು ಸಮಾಜ ಚಿಂತಕರಾದ ಪ್ರಾ. ಕೆ. ಎಚ್. ಬೇಲೂರ ತಿಳಿಸಿರುವರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರದ ಅಭಿವೃದ್ಧಿ ಸೇವಾ ಸಮಿತಿಯವರು ದಿನಾಂಕ 20-10-2024 ರಂದು ಜರುಗುವ ಯೋಗ ವಿದ್ಯಾಲಯದ ನಿಯೋಜಿತ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ನಿಮಿತ್ಯ ನಡೆಸಿದ ಪೂರ್ವಭಾವಿ ಸಮಾಲೋಚನ ಸಭೆಗೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಪ್ರಾ. ಕೆ. ಎಚ್. ಬೇಲೂರವರು ಮುಂದುವರಿದು 4 ದಶಕಗಳ ಹಿಂದೆಯೇ ಪೂಜ್ಯ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸ್ಥಾಪಿಸಿರುವ ಯೋಗ ಪಾಠಶಾಲೆಗೆ ಪ್ರಸ್ತುತ ಪೀಠಾಧಿಪತಿಗಳಾಗಿರುವ ಪೂಜ್ಯಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು 2 ಎಕರೆ ಭೂಮಿ ನೀಡಿ ಸುಸಜ್ಜಿತ ಯೋಗ ವಿದ್ಯಾಲಯ ನಿರ್ಮಾಣಗೊಳ್ಳಲು ಆಶೀರ್ವದಿಸಿರುವದು ಬಹು ಶ್ಲಾಘನೀಯವಾಗಿದೆ. ಈ ಒಂದು ಸಮಾಜಮುಖಿ ಕಾರ್ಯ ಯಶಸ್ಸಿಗೆ ನಾವೆಲ್ಲ ಕೈ ಜೋಡಿಸೋಣ ಎಂದು ಸಭಿಕರಿಗೆ ಸೂಚಿಸಿದರು.
ಸಭೆಯ ಅಧ್ಯP್ಷÀತೆ ವಹಿಸಿದ ನಿವೃತ್ತ ಇಂಜಿನಿಯರ (ನೀರಾವರಿ ಇಲಾಖೆ) ವಿ. ಎಚ್. ಪಾಟೀಲ ಯೋಗ ಶಿP್ಷÀಣ ಪ್ರಸಾರಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಹೊಂದಿರುವ ಯೋಗ ವಿದ್ಯಾಲಯ ಒಮ್ಮೆಲೆ ನಿರ್ಮಾಣಗೊಳ್ಳಲು ಸಾಧ್ಯವಾಗದಿದ್ದರೂ ಹಂತ ಹಂತವಾಗಿ ನಿರ್ಮಿಸುವದು ಸೂಕ್ತವೆಂದು ಹೇಳಿದರು.
ಸಭೆಯಲ್ಲಿ ವಿ. ಪಿ. ಸವಡಿ, ಅಶೋಕ ಕೊಡಗಲಿ, ಎಚ್. ಟಿ. ಸಂಜೀವಸ್ವಾಮಿ, ಇಂಜಿನಿಯರ್ ಎಸ್. ಎಸ್. ಹಿರೇಮಠ, ಗುತ್ತಿಗೆದಾರ ಪ್ರಭು ಸವದಿ, ಬೀಸಪ್ಪ ಬಿ., ವಿಜಯಲಕ್ಷ್ಮೀ ಆನೆಹೊಸೂರು, ವೀಣಾ ಗೌಡರ, ಶಾಂತಾ ಮುಂದಿನಮನಿ, ಜಯಶ್ರೀ ವಸ್ತçದ, ಸುಲೋಚನಾ ಐಹೊಳ್ಳಿ, ಜಯಶ್ರೀ ಡಾವಣಗೇರಿ, ಇನ್ನಿತರೆ ಸದಸ್ಯರು ಮತ್ತು ವಿವಿಧ ಯೋಗ ಸಂಘ-ಸAಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಅಕ್ಕಮಹಾದೇವಿ ಯೋಗ ವಿe್ಞÁನ ಕೇಂದ್ರದ ಸದಸ್ಯನಿಯರು ಪ್ರಾರ್ಥನೆ ಹೇಳಿದರು. ಡಾ. ಎಂ. ವಿ. ಐಹೊಳ್ಳಿ ಸ್ವಾಗತಿಸಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪ¯್ಲೆÃದ ಪ್ರಸ್ತಾವಿಕ ನುಡಿ ತಿಳಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು.