ಜಿಲ್ಲೆ

ಗದಗ-ಯಲವಗಿ ರೈಲ್ವೆಹೊಸ ಮಾರ್ಗ: ಬಜೆಟ್​ ನಲ್ಲಿ ಸಿಗುವುದೇ ಆಧ್ಯತೆ?

Gadag - Shivanand Hiremath

ಶಿವಾನಂದ ಹಿರೇಮಠ, ಗದಗ
ಮಧ್ಯ ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಗದಗ- ಬಿಂಕದಕಟ್ಟಿ-ಶಿರಹಟ್ಟಿ-ಯಲವಿಗಿ ಯೋಜನೆಗೆ ಈ ಭಾಗದ ಜನರಿಗೆ ಗಗನ ಕುಸುಮವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆಗೆ ರಾಜ್ಯ ಸರ್ಕಾರ ಹೆಣಗಾಡುತ್ತಿರುವಾಗ ಯೋಜನೆಗೆ ಬಜೆಟ್​ನಲ್ಲಿ ಆಧ್ಯತೆ ಸಿಗಬಹುದೇ ಎಂಬ ಹುಸಿ ನಿರೀೆ ಜನರನ್ನು ಕಾಡುತ್ತಿದೆ.
ಈ ಯೋಜನೆ ಜಾರಿಗೆ ಆಗ್ರಹಿಸಿ ಹಲವು ದಶಕಗಳೇ ಕಳೆದಿವೆ. 1998ರಲ್ಲಿ ಯೋಜನೆ ಅನುಷ್ಠಾನಕ್ಕಾಗಿ ನಡೆದ ಹೋರಾಟ ಗಂಭೀರ ಸ್ವರೂಪ ಪಡೆಯಿತು. ಆನಂತರ ಸರ್ವೆ ಕಾರ್ಯವೂ ರ್ಪೂಣಗೊಂಡಿದೆ. 2017ರಲ್ಲಿ ರಲ್ಲಿ ಕೇಂದ್ರ ಸರ್ಕಾರ 650 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 50 ರಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಕಳೆದ ಸಾಲಿನ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ರೈಲ್ವೆ ಯೋಜನೆಗೆ ರಾಜ್ಯದಿಂದ ಒದಗಿಸಬೇಕಿದ್ದ ಅನುದಾನದಲ್ಲಿ 640 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದರು. ಸಿದ್ದರಾಮಯ್ಯ ನೇತೃತ್ವದ ಇಂದಿನ ಕಾಂಗ್ರೆಸ್​ ಸರ್ಕಾರ ಅನುದಾನ ಒದಗಿಸಲಿದೆಯೇ ಎಂಬದೇ ಯಕ್ಷ ಪ್ರಶ್ನೆ ಆಗಿದೆ.

ರೈಲ್ವೆ ನೂತನ ಮಾರ್ಗ ಪ್ರಕಟ:
ಇತ್ತೀಚೆಗೆ ಗದಗ -ಯಲವಗಿ ನೂತನ ರೈಲ್ವೆ ಮಾರ್ಗವನ್ನು ರೈಲ್ವೆ ಇಲಾಖೆ ಪ್ರಕಟಿಸಿತ್ತು. ಒಟ್ಟು 58 ಕಿ.ಮೀ. ವ್ಯಾಪ್ತಿಯ ಈ ಯೋಜನೆಯು ಗದಗದಿಂದ ಆರಂಭವಾಗಿ ಬಿಂಕದಕಟ್ಟಿ-, ಹತಿರ್, ಶಿರಹಟ್ಟಿ-, ಲೆ$್ಮಶ್ವರ ಮೂಲಕ ಹಾವೇರಿ ಜಿಲ್ಲೆಯ ಯಲವಗಿ ಸಂಪಕಿರ್ಸಲಿದೆ. ಈ ಮೊದಲು ಶಿರಹಟ್ಟಿ ಮತ್ತು ಲಕ್ಷ$್ಮಶ್ವರ ಮಾರ್ಗ ಒಳಗೊಂಡಿರಲಿಲ್ಲ. ಹೊಸ ನೆಯಲ್ಲಿ ಈ ಎರಡು ಸಂಪರ್ಕಗಳನ್ನು ಕಲ್ಪಿಸಲಾಗಿದೆ.

ಯೋಜನೆಯ ಅಗತ್ಯವೇನು?
ಗದಗ- ಯಲವಗಿ ರೈಲ್ವೆ ಮಾರ್ಗ ನಿರ್ಮಾಣದಿಂದ ಹಾವೇರಿ, ಗದಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಲ ಸಿಗಲಿದೆ. ಮಹಾರಾಷ್ಟ್ರದ ಸೊಲ್ಲಾಪುರ-, ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ಜನರಿಗೆ ಬೆಂಗಳೂರು ಕನಿಷ್ಠ 100 ಕಿ.ಮೀ. ಅಂತರ ಕಡಿಮೆಯಾಗಲಿದೆ. ವ್ಯಾಪಾರ- ವಹಿವಾಟು ವೃದ್ಧಿಯಾಗಲಿದೆ. ರೈಲ್ವೆ ಇಲಾಖೆಗೂ ನಿಶ್ಚಿತ ಆದಾಯ ಸಿಗಲಿದೆ.

ಕೋಟ್​:
ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಒದಗಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಅನುದಾನ ಮೀಸಲಿಟ್ಟಿತ್ತು. ಇಂದಿನ ಕಾಂಗ್ರೆಸ್​ ಸರ್ಕಾರವು ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮಾಡಬೇಕು. ಭೂಸ್ವಾಧಿನಕ್ಕೆ ಅನುದಾನ ಒದಗಿಸಿ ಕಾಮಗಾರಿ ಆದಷ್ಟು ಶ್ರೀ ಆರಮಭವಾಗುವಂತೆ ಮುತುವಜಿರ್ ವಹಿಸಬೇಕು ಗದಗದಲ್ಲಿಯೇ ಭೂಸ್ವಾಧಿನಕ್ಕೆ ಸಂಬಂಧಿಸಿದ ಕಚೇರಿ ಆರಂಭವಾಗಬೇಕು
- ಗಣೇಶ್​ ಸಿಂಗ್​ ಬ್ಯಾಳಿ,
ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ