Q 
ಜಿಲ್ಲೆ

ಗದಗ ಭಾವಸಾರ ವ್ಹಿಜನ್‌ದಿಂದ ವಿದ್ಯಾರ್ಥಿಗಳಿಗೆ ರಕ್ತತಪಾಸಣಾ ಶಿಬಿರ

Gadag - Shivanand Hiremath

ಸತ್ವಯುತ ಆಹಾರ ಸೇವನೆಯಿಂದ ಸದೃಢ ಆರೋಗ್ಯ : ಜಯಶ್ರೀ
ಗದಗ
: ಸ್ವಚ್ಚತೆಯ ಬಗೆಗೆ ಅರಿತು ನಮ್ಮ ಆರೋಗ್ಯವನ್ನು ಜಾಗೃತಿಯಿಂದ ರಕ್ಷಿಸಿಕೊಳ್ಳುವುದು ಹಾಗೂ ಮಕ್ಕಳು ಸತ್ವಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಸದೃಢ ಆರೋಗ್ಯ ಹೊಂದಬೇಕು ಎಂದು ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟ ಹೇಳಿದರು.
ಅವರು ಮಂಗಳವಾರ ಗದುಗಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. ೧೩ ರಲ್ಲಿ ಗದಗ ಭಾವಸಾರ ವ್ಹಿಜನ್ ಇಂಡಿಯಾ ಎರ್ಪಡಿಸಿದ್ದ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ರಕ್ತದ ಗುಂಪು ಗುರುತಿಸಿ ಕಾರ್ಡ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಡೆಂಘಿಯAತಹ ಕಾಯಿಲೆಯಿಂದ ಪಾಲಕ ಪೋಷಕರು ಮಕ್ಕಳ ರಕ್ಷಣೆ ಮಾಡಬೇಕು. ಶಾಲೆ ಮತ್ತು ಮನೆಯಲ್ಲಿ ಈ ಕುರಿತು ತಿಳುವಳಿಕೆ ನೀಡುವ ಮೂಲಕ ಮಕ್ಕಳನ್ನು ರಕ್ಷಿಸಬೇಕಿದೆ. ನಿಂತ ನೀರಿನಲ್ಲಿ ಮಕ್ಕಳು ಆಟವಾಡುವದು ತರವಲ್ಲ, ಕೈ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಂಡು ಮಕ್ಕಳು ಊಟ ಮಾಡಬೇಕು. ಮಕ್ಕಳಿಗೆ ಸತ್ವಯುವ ಆಹಾರ ಅಗತ್ಯ ಎಂದರು.
ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಉಚಿತವಾಗಿ ರಕ್ತ ಗುಂಪಿನ ತಪಾಸಣೆ ಮಾಡಿ ರಕ್ತಗುಂಪಿನ ಚೀಟಿ ವಿತರಿಸಿ ಮಾತನಾಡಿದ ರಕ್ತತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಎಲ್ಲರ ಆರೋಗ್ಯದಲ್ಲಿ ರಕ್ತವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಶುದ್ಧ ರಕ್ತದಿಂದ ಸದೃಢ ಆರೋಗ್ಯ ರೂಪುಗೊಳ್ಳಲು ಸಾಧ್ಯ ಎಂದರು.
ಯುವಕರು ಮತ್ತು ಮಧ್ಯವಯಸ್ಕರರು ಕನಿಷ್ಠ ವರ್ಷದಲ್ಲಿ ಎರಡು ಸಲವಾದರೂ ರಕ್ತದಾನ ಮಾಡುವ ಮೂಲಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಅನ್ನಪೂರ್ಣ ವರವಿ, ಸುಲೋಚನಾಬಾಯಿ ಕಾಟಗಿ, ಮುಖ್ಯೋಪಾಧ್ಯಾಯನಿ ಎಸ್.ಎಸ್.ಹುರಕಡ್ಲಿ, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಸ್ವಾಗತಿಸಿ ವಂದಿಸಿದರು.
= = =
ಫೋಟೋ ಇದೆ : ಭಾವಸಾರ ವ್ಹಿಜನ್
= = =
ಸುದ್ದಿ ಪ್ರಕಟಣೆ ಕೃಪೆಗೆ/ ಡಾ.ದತ್ತಾತ್ರೇಯ ವೈಕುಂಠೆ
= = = =