ವಿಜಯವಾಣಿ ಸುದ್ದಿಜಾಲ ಗದಗ
ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ ವತಿಯಿಂದ ನಗರದ ಶುಶ್ರೂಕ ಶಾಲೆಯಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆಯ ರಾಜ್ಯ ಉಪಾಧ್ಯೆ ಸೀಮಾ. ಜಿ. ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾ. 8, 1908 ರಂದು ಅಮೆರಿಕದ ನ್ಯೂಯಾರ್ಕ್ನ ಸಿದ್ಧ ಉಡುಪಿನ ಕಾರ್ಖಾನೆಯ ಸಾವಿರಾರು ಮಹಿಳಾ ಕಾಮಿರ್ಕರು ಉಸಿರುಗಟ್ಟಿಸುವ ದುಡಿಯುವ ವಾತಾವರಣವನ್ನು ವಿರೋಧಿಸಿ, ಎಂಟು ಗಂಟೆ ದುಡಿಮೆಯ ಅವಧಿಯ ನಿಗದಿಗಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ರಜೆಯ ಹಕ್ಕಿಗಾಗಿ ಧ್ವನಿಯೆತ್ತಿದರು. ಹೋರಾಟ ನಿರತರಾದ ಮಹಿಳಾ ಕಾಮಿರ್ಕರ ಮೇಲೆ ಅಲ್ಲಿನ ಆಡಳಿತಗಾರರು ಗುಂಡಿನ ಮಳೆಗರೆದಾಗ ವಿಶ್ವದಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು. ಅಂದಿನಿಂದ ವಿಶ್ವದಾದ್ಯಂತ ಮಾ. 8 ಮಹಿಳೆಯರು ತಮ್ಮ ಬೇಡಿಕೆಗಳಿಗಾಗಿ ಧ್ವನಿ ಎತ್ತುವ ದಿನವಾಯಿತು. ಇಂದು ಸ್ತ್ರೀ ಭ್ರೂಣ ಹತ್ಯೆ, ವರದಣೆ ಕೊಲೆ, ಮರ್ಯಾದೆ ಹತ್ಯೆ, ಅತ್ಯಾಚಾರ, ಗುಂಪು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪ್ರೀತಿ ನಿರಾಕರಿಸಿದಳೆಂದು ಆಸಿಡ್ ದಾಳಿ, ಕೊಲೆ ಹೀಗೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಅಗೌರವ ಅನಾದರಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಈ ಅಕ್ರಮಗಳ ವಿರುದ್ಧ ಮಹಿಳೆಯರು ಒಮದಾಗಿ ಧನಿ ಎತ್ತಬೇಕು ಎಂದು ಕರೆ ನಿಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ದೇವಮ್ಮ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕು ಖಾತ್ರಿಪಡಿಸಬೇಕು. ಮಹಿಳೆಯರಿಗೆ ಶಿಣ, ಉದ್ಯೋಗ, ಆರೋಗ್ಯ, ಹಾಗೂ ಭದ್ರತೆಯನ್ನು ಖಾತ್ರಿಪಡಿಸಬೇಕು. ಮಹಿಳೆಯರ ನತೆ ಗೌರವವನ್ನು ಎತ್ತಿ ಹಿಡಿಯಲು ಇಂದಿನ ಮಹಿಳಾ ಸಮುದಾಯ ಒಟ್ಟಾಗಿ ಹೋರಾಟವನ್ನು ಕಟ್ಟುವ ಅವಶ್ಯಕತೆ ಇದೆ ಎಂದರು. ಲಲಿತಾಕುಮಾರಿ ಅಂಜಗಿ, ಈಶ್ವರಿ ಕೆ, ಎಂ. ಅನುಸೂಯ ಹಲವರು ಇದ್ದರು.