ಗದಗ ವಿದ್ಯಾದಾನ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಹೆಣ್ಣುಮಗುನ ದಿನಾಚರಣೆಯನ್ನು ರಾಧಾ ಮಣ್ಣೂರು ಉದ್ಘಾಟಿಸಿದರು. ಗಿರಿಜಾ ದೊಡ್ಡಮನಿ, ರಾಜೇಶ್ವರಿ, ಸುಜಾತಾ ಮಠಪತಿ ಇತರರು ಇದ್ದರು. 
ಜಿಲ್ಲೆ

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

Gadag - Shivanand Hiremath

ಲಿಂಗಾನುಪಾತ ಬಗ್ಗೆ ಜಾಗೃತಿ ಅಗತ್ಯ: ರಾಧಾ ಮಣ್ಣೂರು

ವಿಜಯವಾಣಿ ಸುದ್ದಿಜಾಲ ಗದಗ
ಸಾರ್ವಜನಿಕರಿಗೆ ಲಿಂಗಾನುಪಾತ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರು ಹೇಳಿದರು.
ನಗರದ ವಿದ್ಯಾದಾನ ಶಿಕ್ಷಣ ಸಮಿತಿ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಬೇಟಿ ಬಚಾಮೋ, ಬೇಟಿ ಪಡಾಮೋ ಯೋಜನೆಯಡಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಲಿಂಗಾನುಪಾತ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಆಗಸ್ಟ್​ 2024ರ ಅಂತ್ಯಕ್ಕೆ 1000ಕ್ಕೆ 889 ಲಿಂಗಾನುಪಾತ ಇತ್ತು. ನಾವೆಲ್ಲರೂ ಲಿಂಗಾನುಪಾತ ಬಗ್ಗೆ ಹೆಚ್ಚಿನ ಜಾಗೃತಿಯನ್ನ ಮೂಡಿಸಿ ಸುಧಾರಿಸಲು ಕ್ರಮವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್​ ಶಕ್ತಿ ಯೋಜನೆಯಡಿ ಮಹಿಳಾ ಸಬಲೀಕರಣ ಟಕಕ್ಕೆ ಭೇಟಿ ನೀಡಿ ಮಹಿಳೆಯರು ಮಾಹಿತಿಯನ್ನು ಪಡೆಯಬಹುದು ಎಂದು ರಾಧಾ ಮಣ್ಣೂರು ಹೇಳಿದರು.
ವಿದ್ಯಾದಾನ ಸಮಿತಿ ಬಿ.ಎಡ್​ ಕಾಲೇಜಿನ ಪ್ರಾಚಾರ್ಯ ಗಂಗೂಬಾಯಿ ಪವಾರ ಮಾತನಾಡಿ, ಮಹಿಳೆಯರು ವಿವಿಧ ಇಲಾಖೆಯಡಿ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಯಕ್ರಮದ ಉದ್ದೇಶವನ್ನು ಈಡೇರಿಸಬೇಕೆಂದು ತಿಳಿಸಿದರು.
ಬಾಲಕರ ಬಾಲಮಂದಿರ ಅಧೀಕ್ಷಕಿ ಗಿರಿಜಾ ದೊಡ್ಡಮನಿ, ಮಿಷನ ಶಕ್ತಿ ಜಿಲ್ಲಾ ಮಹಿಳಾ ಸಬಲೀಕರಣ ಟಕದ ಜಿಲ್ಲಾ ಸಂಯೋಜಕಿ ರಾಜೇಶ್ವರಿ, ಸಖಿ ಒನ್​ ಸ್ಟಾಪ್​ ಸೆಂಟರ್​ ಆಡಳಿತಾಧಿಕಾರಿ ಸುಜಾತಾ ಮಠಪತಿ, ಖಾಜಾ ಮುನ್ನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾದಾನ ಸಮಿತಿಯ ಸಿಬ್ಬಂದಿಯವರು ಇದ್ದರು.