ಜಿಲ್ಲೆ

ಮಕ್ಕಳ ರಕ್ಷಣೆಗಾಗಿ ಶಾಲಾ ಕಾಲೇಜುಗಳ ಆವರಣದ ಸುತ್ತ ತಂಬಾಕು ಮಾರಾಟ ನಿಷೇಧ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ...

Gadag - Shivanand Hiremath

ಗದಗ: ವೆಂಕಟೇಶ ರಾಥೋಡ್ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಗದಗ ಇವರ ಮಾರ್ಗದರ್ಶನದಲ್ಲಿ ಸೋಮವಾರ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ, ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಶಾಲಾ ಕಾಲೇಜುಗಳ ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮ ವಹಿಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ರೂ.1400/- ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ ಚಹಾ ಅಂಗಡಿ ಪಾನ ಶಾಪ್ ಅಂಗಡಿಗಳ ಒಳಗಡೆ ಸುಮಾರು ಅನಧಿಕೃತ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡು, ಧೂಮಪಾನ ಮಾಡದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅವರು ತಂಬಾಕಿನಿAದ ಉಂಟಾಗುವ ಖಾಯಿಲೆಗಳಿಗೆ ಬಲಿಯಾಗುತ್ತಿರುವದರಿಂದ ಇಂತಹ ಅಡ್ಡಾಗಳನ್ನು ಬಂದ ಮಾಡುವಂತೆ ಎಚ್ಚರಿಕೆ ನೀಡಿ ಕ್ರಮಕೈಗೊಳ್ಳಲಾಯಿತು. ತಂಬಾಕು ಮುಕ್ತ ಯುವ ಪಿಳಿಗೆ ಮಾಡುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿ ತಂಬಾಕು ಉತ್ಪನ್ನಗಳು ಸುಲಭವಾಗಿ ದೊರೆತು ಚಟಕ್ಕೆ ಬಲಿಯಾಗುವದನ್ನು ತಪ್ಪಿಸಲು, ಶಾಲಾಕಾಲೇಜು ಆವರಣದಿಂದ 100 ಗಜದ ವರೆಗೆ ತಂಬಾಕು ಮಾರಾಟ ನಿಷೇಧ ಮಾqಲಾಗಿದೆ, ತಂಬಾಕು ಕುರಿತ ಜಾಹಿರಾತು ನಿಷೇದಿಸುವದು, 18 ವರ್ಷದೋಳಗಿನವರಿಗೆ ತಂಬಾಕು ನಿಷೇಧಿಸುವದು ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಅರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯವಾಗಿದೆ, ನಮ್ಮ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳು ಕಾನೂನು ಬದ್ಧವಾಗಿದ್ದರು ಅವುಗಳ ಮಾರಾಟ ಹಾಗೂ ಅದರ ಉಪಯೋಗ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು ಅದನ್ನು ಉಲ್ಲಂಘಿಸಿದಲ್ಲಿ ಕಾನೂನುರೀತಿ ಕ್ರಮ ವಹಿಸಲಾಗುವದು.
ಈ ದಾಳಿಗಳಲ್ಲಿ ಗೋಪಾಲ ಸುರಪುರ , ಜಿಲ್ಲಾ ಸಲಹೆಗಾರರು, ಜಿಲ್ಲಾ ತಂಬಾಕು ನಿಯಂತ್ರಣ ಕೋ±,À ಪೊಲೀಸ್ ಇಲಾಖೆಯಿಂದ ಮಹಾಂತೇಶ ರಾಥೋಡ್ ಎ.ಆರ್.ಪಾಟೀಲ್ ಆರೋಗ್ಯ ಇಲಾಖೆಯ ವೈ.ಎನ್.ಕಡೆಮನಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಶ್ರೀಮತಿ ಬಿ.ಸಿ.ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ ಉಪಸ್ಥಿತರಿದ್ದರು.