Gadag: ಕರ್ನಾಟಕ ಪೌರ ಸಭೆಗಳ (ತಿದ್ದುಪಡಿ) ಅಧಿನಿಯಮ 2020 ಕರ್ನಾಟಕ ನಗರ ಸಂಸ್ಥೆಗಳಿಗೆ ಈ ಅಧಿನಿಯಮವು ಪ್ರದೇಶ ಸಭಾ ಹಾಗೂ ವಾರ್ಡ ಸಮಿತಿ ರಚನೆ ಮಾಡಿ ಮತದಾರರ ಸಹಯೋಗದೊಂದಿಗೆ ಉತ್ತಮ ಆಡಳಿತ ನೀಡುವುದು ಅವಶ್ಯವಾಗಿದೆ. ಅದಕ್ಕಾಗಿ 2020ರಲ್ಲಿ 1964 ಕರ್ನಾಟಕ ಅಧಿನಿಯಮ 22ನ್ನು ತಿದ್ದುಪಡಿ ಮಾಡಿ ವಾರ್ಡಿನ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಪರಿಹಾರ ನೀಡಲು ಸರಕಾರ ಈ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ವಾರ್ಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ನಗರಸಭಾ ಸದಸ್ಯರಾದ ಶ್ರೀ ರಾಘವೇಂದ್ರ ಯಳವತ್ತಿ ತಿಳಿಸಿದರು.
ಜೊತೆಗೆ ಈ ತಿದ್ದುಪಡಿಯಿಂದ ವಾರ್ಡಿನ ಜನರ ಸಮಸ್ಯೆಗಳನ್ನು ಅವರೊಂದಿಗೆ ಚರ್ಚಿಸಿ, ಕ್ರಿಯಾ ಯೋಜನೆ ಸಿದ್ದಪಡಿಸಲು ಸಹಕಾರಿಯಾಗುತ್ತದೆ. ನಮಗೆ ಮತ ನೀಡಿ ಆಯ್ಕೆ ಮಾಡಿದ ಮತದಾರರನ್ನು ವಾರ್ಡ ಸಮಿತಿಯಲ್ಲಿ ಜವಾಬ್ದಾರಿಯನ್ನು ನೀಡಿ ಎಲ್ಲರ ಅಭಿಪ್ರಾಯಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಅದಕ್ಕಾಗಿ ಈ ವಾರ್ಡ ಸಮಿತಿ ರಚನೆ ಸ್ವಾಗತಾರ್ಹವಾಗಿದೆ.
ಇಂದಿನ ಸಭೆಯಲ್ಲಿ ಪೌರಾಯುಕ್ತರು, ನಗರಸಭೆ, ಗದಗ ಬೆಟಗೇರಿ ಇವರು ಆಗಮಿಸಿ, ನಮ್ಮ ವಾರ್ಡಿನ ಮುಳಗುಂದ ಓಣಿ, ಕೋಚಿ ಗಲ್ಲಿ ಹೆಳವಿ ಓಣಿ, ಹಬೀಬ ಗಲ್ಲಿ, ಚನ್ನೇಗೌಡರ ಓಣಿ, ನಂದರಗಿಯವರ ವಠಾರ, ಉಂಕಿಕೇರಿ, ಹುಚ್ಚನಗೌಡರ ಓಣಿ, ಗೊಬ್ಬಿಯವರ ಓಣಿ, ತೆಂಗಿನಕಾಯಿ ಬಜಾರ, ಶಿವಾಜಿನಗರ-01, ಶಿವಾಜಿನಗರ-02 ಹಾಗೂ ರಂಗಾವಧೂತ ನಗರ 1ನೇ ಬ್ಯಾಚ್ ಈ ಭಾಗಗಳಲ್ಲಿ ಬಹು ವರ್ಷಗಳ ಬೇಡಿಕೆಯಾದ ಒಳ ಚರಂಡಿ ಕಾಮಗಾರಿಯನ್ನು ಮಾನ್ಯ ರಾಷ್ಟ್ರೀಯ ನ್ಯಾಯಮಂಡಳಿ (NGT) ಹಂತ-2ರಲ್ಲಿ ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ರೂ. 30.00 ಕೋಟಿ ಹಣವನ್ನು ಬಿಡುಗಡೆ ಮಾಡಿರುತ್ತದೆ. ಅದರಲ್ಲಿ ನಮ್ಮ ವಾರ್ಡಿನ ಎಲ್ಲ ಭಾಗಗಳಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ, ಉತ್ತಮವಾದ ಒಳಚರಂಡಿ ಕಾಮಗಾರಿಯನ್ನು ಅನುಷ್ಠಾನ ಮಾಡಬೇಕು. ಹಾಗೂ ನಮ್ಮ ವಾರ್ಡಿನ ರಂಗಾವಧೂತ ನಗರ 1ನೇ ಬ್ಯಾಚ್, ಶಿವಾಜಿ ನಗರ-1, ಹಕಾರಿ ಗಲ್ಲಿ ಭಾಗಗಳಲ್ಲಿ ಅಂಗನವಾಡಿಗಳಿದ್ದು, ಅವುಗಳಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವುಗಳಿಗೆ ನಗರಸಭೆಯ ಜಾಗೆಯನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿಕೊಡಲು ಒತ್ತಾಯಿಸಲಾಯಿತು. ಜೊತೆಗೆ ಭಜಂತ್ರಿ ಓಣಿಗೆ ಹೋಗುವ ಮಾರ್ಗದಲ್ಲಿ ಶೌಚಾಲಯ ಸಂಪೂರ್ಣ ಹಾಳಾಗಿದ್ದು, ಆ ಭಾಗದಲ್ಲಿ ನೂತನವಾಗಿ ಹೈಟೆಕ್ ಶೌಚಾಲಯ ನಿರ್ಮಿಸಲು ಕೋರಲಾಯಿತು. ಈಗಾಗಲೇ ಶಿವಾಜಿ ನಗರ-1ರಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಹೊಸದಾಗಿ ಪೈಪಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಆ ಭಾಗದಲ್ಲಿ ರಸ್ತೆ ಇತರೆ ಮೂಲಭೂತ ಸೌಕರ್ಯ ಒದಗಿಸಲು ಸಭೆಯಲ್ಲಿ ಆ ಭಾಗದ ಜನರು ಮನವಿ ಸಲ್ಲಿಸಿದರು. ನಗರಸಭೆ ಪೌರಾಯುಕ್ತರು ಹಾಗೂ ಸಮಿತಿಯ ಪ್ರತಿನಿಧಿಯಾದ ಶ್ರೀ ರಾಜಾರಾಮ ಪವಾರ ಇವರು ಮಾತನಾಡಿ, ಸರಕಾರ ಕಾಲಕಾಲಕ್ಕೆ ಯೋಜನೆಗಳನ್ನು ಉನ್ನತೀಕರಣ ಮಾಡುತ್ತಾ ಬರುತ್ತದೆ. ಈಗ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಬರುವಂತಹ: ವಾರ್ಡುಗಳಲ್ಲಿ ವಾರ್ಡ ಸಮಿತಿಗಳನ್ನು ರಚನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಮಿತಿಯಲ್ಲಿ ವಾರ್ಡನ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ಅದರಂತೆ ಹಿರಿಯ ನಾಗರಿಕರು, ನ್ಯಾಯವಾದಿಗಳು, ಅಭಿಯಂತರರು, ವೈದ್ಯರು, ಸಮಾಜ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚನೆಯಾಗಿರುತ್ತದೆ. ಈ ಸಮಿತಿ ರಚನೆಯಿಂದ ಮುಂದೆ ವಾರ್ಡಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಮಿತಿಯಲ್ಲಿ ಚರ್ಚೆಯಾಗಿ ಅನುಮೋದನೆ ಆಗಬೇಕು, ನಂತರ ಮುಂದಿನ ಚಟುವಟಿಕೆಗಳ ಪ್ರಾರಂಭವಾಗುತ್ತವೆ. ಈ ಭಾಗದ ನಗರಸಭಾ ಸದಸ್ಯರ ಸತತ ವಾರ್ಡಿನ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಾರೆ. ಅವರಿಗೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ.
ಕಾಮಗಾರಿಗಳು ಇತರೆ ನಗರಸಭೆ ಅಭಿವೃದ್ಧಿ ಚಟುವಟಿಕೆಗಳು ಸರ್ಕಾರದ ನಿಯಮಗಳಂತೆ, ನಡೆಯಬೇಕಾಗುತ್ತದೆ. ಯಾವುದನ್ನೂ ನಿಯಮ ಬಾಹಿರವಾಗಿ ಮಾಡಲು ಆಗುವುದಿಲ್ಲ. ಅದಕ್ಕಾಗಿ ನಾವುಗಳು ಯಾವುತ್ತೂ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾನೂನಾತ್ಮಕವಾಗಿ ಪ್ರಯತ್ನ ಮಾಡುತ್ತೇವೆ. ತಮ್ಮ ಸಹಕಾರ ಸದಾ ನಗರಸಭೆಯೊಂದಿಗೆ ಇರಲಿ ಎಂದರು.
ಈ ವಾರ್ಡಿನ ಕೆಲ ನಾಗರಿಕರಾದ ಮಹೇಶ ಕೋಚಿ, ಮಂಜುನಾಥ ಶಿರಹಟ್ಟಿ, ನಾರಾಯಣ ಪಾಣಿಭಾತೆ, ಅಣ್ಣಪ್ಪ ಗಾರವಾಡ ಇವರೆಲ್ಲರೂ ಅಭಿವೃದ್ಧಿಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ತುಕಾರಾಮ ಪತಂಗೆ, ಸಂಕಪ್ಪ ಗೊಬ್ಬಿ ಈಶ್ವರ ಸಮಗಂಡಿ, ಚಿನ್ನಪ್ಪ ನೆಗಳೂರ, ಮಹೇಶ ಕೋಚಿ, ರವಿ ಚೋಳಿನ್, ಈರಣ್ಣಾ ಹುಳ್ಳಿ, ಮಲ್ಲಿಕಾರ್ಜುನ ಚಕ್ಕಣ್ಣವರ, ಮೋಹನ ಶ್ಯಾಗಾವಿ, ಲಕ್ಷ್ಮಣ ನೀಲಗುಂದ, ಪ್ರಭು ಶ್ಯಾಗಾವಿ,ಗೋಪಾಲ ನಾರಪ್ಪನವರ, ಪರಶುರಾಮ ಶ್ಯಾವಿ, ನಾಗರಾಜ ಆಮ್ರದ, ನಾರಾಯಣ ಪಾಣಿಭಾತೆ, ಮಂಜುನಾಥ ಶಿರಹಟ್ಟಿ ಜ್ಷಾನೇಶ್ವರ ಪತಂಗೆ, ಬಸವರಾಜ ಗುಂಡಗಿ, ಸಿದ್ದಪ್ಪ ಶಾಖಾನವರ, ಆನಂದ ನಂದರಗಿ, ಮೈಲಾರಿ ತುರಕಾಣಿ, ಸಿದ್ದು ಪಿಂಡಕೂರ ಸಂಜು ಕತ್ತಿಕೈ, ಈರಣ್ಣಾ ಬ್ಯಾಹಟ್ಟಿ, ಮಂಜುನಾಥ ಮಾಳೇಕೊಪ್ಪ, ಸಲೀಂ ಮುಳಗುಂದ, ಸುರೇಶ ಕೊಳ್ಳಿ, ಹರೀಶ ಬೇಲೇರಿ, ಈಶ್ವರ ಗಂಗಾವತಿ, ಅಣ್ಣಪ್ಪ ಗಾರವಾಡ, ರವಿ ಮೇರವಾಡೆ, ಶೌಕತ್ ಮುತ್ತು, ರೊಟ್ಟಿ ನಿಂಗನಗೌಡ ಮಲ್ಲಾಪೂರ, ಈಶ್ವರ ಅಸುಂಡಿ, ವಾಸಪ್ಪ ಗಾರ್ಗಿ, ಪರುತ ಸೊರಟೂರ, ಪ್ರದೀಪ್ ಕೋಚಿ, ರಮೇಶ ಬಸ್ಮೆ, ಬಸವರಾಜ ಕೊಪ್ಪಳ, ಈಶಪ್ಪ ಶ್ಯಾಗಾವಿ, ಗುರುರಾಜ ಹೊನ್ನಳ್ಳಿ, ಚಂದ್ರು ಭಸ್ಮೆ, ಪ್ರಶಾಂತ ಶ್ಯಾಗಾವಿ, ವಿನಾಯಕ ರಾಮದುರ್ಗ, ಸಾವಿತ್ರಿ ಹುಚ್ಚನಗೌಡ್ರ, ಬಂದವ್ವ ನೀಲಗುಂದ ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ಕವಿತಾ ಹಿಂಡಿ, ಗಿರೀಜಾ ಭಜಂತ್ರಿ, ಸರಸ್ವತಿ ಮುಳ್ಳಾಳ, ಬಿ ಎಫ್ ಕಬಕ್ಕಿ, ಅಕ್ಕಮಹಾದೇವಿ ಪೂಜಾರ ಹಾಗೂ ನಗರ ಸಭೆಯ ವ್ಯವಸ್ಥಾಪಕರಾದ P F ಶೇರಖಾನೆ, ಮುಜಾವರ, ದಪೇದಾರರಾದ ಶ್ರೀ ವಾಸು ಹಾದಿಮನಿ ಹಾಗೂ ಸಮೂಹ ಸಂಘಟನೆ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.