Gadag: ನಗರದ ತೋಂಟದಾಯ೯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಆರಂಭಕ್ಕಿಂತ ಮೊದಲು ಪಂದ್ಯವನ್ನು ತೋಂಟದಾಯ೯ ತಾಂತ್ರಿಕ ಮಹಾವಿದ್ಯಾಲಯದ ಕಾಯ೯ದಶಿ೯ಗಳಾದ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡುತ್ತ ಇಂದು ಇಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು ತಮ್ಮ ಶಕ್ತಿಯನ್ನು, ಪ್ರತಿಭೆಯನ್ನು ಹಾಗು ರಚನಾತ್ಮಕ ಕೌಶಲ್ಯವನ್ನು ಪ್ರದಶಿ೯ಸುತ್ತಾರೆ. ನೀವು ಪ್ರತಿಯೊಬ್ಬರು ಈ ಪಂದ್ಯಾವಳಿಯನ್ನು ಕ್ರೀಡಾ ಮನೋಭಾವದ ಮೂಲಕವೇ ನೋಡಬೇಕು. ಕ್ರೀಡೆಗಳು ಮನುಷ್ಯನ ಸವ೯ತೋಮುಖ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವನ್ನು, ಅಯುಷ್ಯವನ್ನು ಕೂಡ ಕ್ರೀಡೆಗಳು ಹೆಚ್ಚಿಸಲು ಸಹಾಯಕವಾಗಿ ಕೆಲಸ ಮಾಡತ್ತವೆ ಎಂದು ಹೇಳಿ, ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಮುಂಡರಗಿಯ ಕೆ.ಆರ್.ಬಿ.ಎ.ಸಿ ಕಾಲೇಜಿನ ದೈಹಿಕ ನಿದೇ೯ಶಕರಾಗಿ ಆಗಮಿಸಿದ್ದ ಪ್ರೊ. ಮನೋಜ ಕೋಪಡೆ೯ ಮಾತನಾಡಿ, ಕ್ರೀಡೆ ಹಾಗೂ ಕ್ರೀಡಾ ಸ್ಪಧೆ೯ಗಳು ನಮ್ಮ ದೈಹಿಕ ಮತ್ತು ಮಾನಸಿಕ ಸಾಮಥ್ಯ೯ಗಳನ್ನು ಪರೀಕ್ಷಿಸಲು ಅತ್ಯುತ್ತಮ ವೇದಿಕೆಗಳನ್ನು ಒದಗಿಸುತ್ತವೆ. ವಿಶೇಷವಾಗಿ ವಾಲಿಬಾಲ್ ಅಂತಹ ಕ್ರೀಡೆಯಾಗಿದ್ದು, ಇದು ವ್ಯಕ್ತಿತ್ವ ಅಭಿವೃದ್ಧಿಗೆ ಹಾಗೂ ಸಂಘಟನಾತ್ಮಕ ಮತ್ತು ರಚನಾತ್ಮಕ ನಂಬಿಕೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಾವು ಒಟ್ಟಾಗಿ ಕೆಲಸ ಮಾಡುವುದರಿಂದ ಬಲವಧ೯ನೆ, ಬೆಂಬಲ ಮತ್ತು ಸಂಯೋಜನೆ ದೊರೆಯುತ್ತದೆ. ಈ ಕ್ರೀಡೆಯಿಂದ ನಾವು ಕೇವಲ ಆಟವನ್ನು ಅಲ್ಲದೆ ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಶ್ರೇಷ್ಠತೆಯ ಮಹತ್ವವನ್ನು ಕಲಿಯುತ್ತೇವೆ ಎಂದರು. ಬೆಟಗೇರಿ ಪೋಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಮಾರುತಿ ಜಗದಂಡಿನ್ ಕೂಡ ಅತಿಥಿಗಳಾಗಿ ಆಗಮಿಸಿದ್ದರು. ಮಹಾವಿದ್ಯಾಲಯದ ಕ್ರೀಡಾ ಸಂಯೋಜಕರಾದ ಪ್ರೊ. ಬಸನಗೌಡ ಪಾಟೀಲ, ದೈಹಿಕ ಶಿಕ್ಷಕರಾದ ಶ್ರೀ ವೀರೇಶ ಸೂಡಿ ಹಾಜರಿದ್ದರು.
ಉದ್ಘಾಟನಾ ಕಾಯ೯ಕ್ರಮದಲ್ಲಿ ಡಾ. ರಮೇಶ ಬಡಿಗೇರ, ಡಾ. ಮಲ್ಲಿಕಾಜು೯ನ ಜಿ.ಡಿ, ಪ್ರೊ. ಜಗದೀಶ ಶಿವನಗುತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಜಗದೀಶ ಅಕ್ಕಿಮರಡಿ, ಪ್ರೊ. ನಾಗರಾಜ ಚಾಕಲಬ್ಬಿ, ಡಾ. ಮಂಜುನಾಥ ಉತ್ತರಕರ್ ಹಾಜರಿದ್ದರು. ಪ್ರಶಾಂತ ಹಾರೋಗೇರಿ, ಖಯೂಮ್ ನವಲೂರ, ಥಾಮಸ್ ಸಕ್ರಿ, ಆದಿತ್ಯ ಜೋಶಿ, ರಾಘವೇಂದ್ರ ದೊಡ್ಡಮನಿ,ಸಿದ್ದು ಪೂಜಾರ, ಟಿ. ಉದಯುಮಾರ, ಶೇಖರ ಖಾರಬಾರಿ ತೀಪು೯ಗಾರರಾಗಿ ಕಾಯ೯ನಿವ೯ಹಿಸಿದರು.
ಆರಂಭದಲ್ಲಿ ರಂಜಿತಾ ಪಾಟೀಲ ಆಹ್ವಾನ ಗೀತೆ ಹಾಡಿದರು. ಸಂಜನಾ ಹುದ್ದಾರ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಅನನ್ಯಾ ಖೋದಾನಪುರ ವಂದಿಸಿದರು. ಎರಡು ದಿನಗಳು ನಡೆದ ಈ ಪಂದ್ಯಾವಳಿಗಳಲ್ಲಿ ಹಾವೇರಿಯ ಸರಕಾರಿ ಇಂಜನಿಯರಿಂಗ್ ಕಾಲೇಜು ಪ್ರಥಮ ಬಹುಮಾನ ಪಡೆದುಕೊಂಡಿತು. ಎರಡನೆಯ ಸ್ಥಾನವನ್ನು ಕೆ.ಎಲ್.ಎಸ್.ವಿ.ಡಿ.ಆರ್.ಟಿ ಹಳಿಯಾಳ ಪಡೆದುಕೊಂಡಿತು. ಬಹುಮಾನ ಪಡೆದ ಕ್ರೀಡಾ ಪಟುಗಳಿಗೆ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳು, ಆಡಳಿತ ಮಂಡಳಿ ಅಭಿನಂದನೆಗಳನ್ನು ಸೂಚಿಸಿತು.