ಜಿಲ್ಲೆ

ಮನುಷ್ಯನ ಜೀವನದಲ್ಲಿ “ಭಾಗ್ಯ” ಮುಖ್ಯ – ಡಾ. ಶಂಭು ಬಳಿಗಾರ

Gadag - Shivanand Hiremath

ಗದಗ : ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ (ರಿ) ವಿವೇಕಾನಂದ ನಗರ ಗದಗ ಇದರ ‘ರಜತ ಮಹೋತ್ಸವ’ ಸಮಾರಂಭದ ಮುಖ್ಯ ಅತಿಥಿಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ “ಭಾಗ್ಯ” ಎಂಬುದು ಮುಖ್ಯ. ಶ್ರೇಷ್ಠ ಮನುಷ್ಯನಾಗಲು ಸಜ್ಜನಿಕೆ ಇರಬೇಕು, ಒಳಗೊಂದು-ಹೊರಗೊAದು ಇರಬಾರದು, ನಡೆ-ನುಡಿ ಒಂದಾಗಿರಬೇಕು. ಜಗಮೆಚ್ಚುವುದಕ್ಕಿಂತ ಮನಮೆಚ್ಚುವಂತೆ ಬದುಕಬೇಕು ಎಂದು ಕರೆ ನೀಡಿದರು. ಮೊದಲು ಕೂಡು ಕುಟುಂಬಗಳಲ್ಲಿ ಎಲ್ಲರೂ ಪ್ರೀತಿಯಿಂದ ಸಹಾಯ-ಸಹಕಾರದಿಂದ ಬದುಕುತ್ತಿದ್ದರು. ಆದರೆ ಈಗ ಸಂಬAಧಗಳು ಪುಡಿ ಪುಡಿಯಾಗಿವೆ ಎಂದು ಹಲವಾರು ದೃಷ್ಠಾಂತಗಳ ಮೂಲಕ, ಜಾನಪದ ಹಾಡುಗಳ ಮೂಲಕ ಜನರನ್ನು ಎಚ್ಚರಿಸಿದರು.

ರಜತ ಮಹೋತ್ಸವವನ್ನು ಮಾಜಿ ಶಾಸಕರಾದ ಮಾನ್ಯ ಶ್ರೀ ಡಿ.ಆರ್. ಪಾಟೀಲ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯು ಕಳೆದ 25 ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಹಲವಾರು ಜನಪರ ಮತ್ತು ರಚನಾತ್ಮಕ ಕೆಲಸಗಳನ್ನು ಮಾಡುತ್ತಾ ಬಂದಿದೆ, ಸ್ವಚ್ಚತಾ ಆಂದೋಲನ, ನೈರ್ಮಲ್ಯ ನಗರ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳನ್ನು ಮಾಡುತ್ತಾ ಆಧ್ಯಾತ್ಮಿಕ ಚಿಂತನೆಗಳ ಹಲವಾರು ಕಾರ್ಯಗಳನ್ನು ಮಾಡುತ್ತಾ ಸಮಿತಿಯು ಸಮಾಜಕ್ಕೆ ಒಂದು ಮಾದರಿಯಾಗಿದೆ ಎಂದು ಹೇಳಿದರು.

“ವಿಶ್ವಪ್ರಭೆ” ಎಂಬ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯು 25 ವರ್ಷಗಳ ಇತಿಹಾಸದ ಸಿಂಹಾಲೋಕನವನ್ನು ಮಾನ್ಯ ಶ್ರೀ ಎಸ್.ವ್ಹಿ. ಸಂಕನೂರ ಹೇಳಿದರು. ಯುವಕರು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿವೇಕಾನಂದರ ತತ್ವ ಆದರ್ಶಗಳನ್ನು ತಿಳಿದು ಜೀವನವನ್ನು ರೂಪಿಸಿಕೊಳ್ಳಬೇಕು, ಸ್ವಯಂ ಉದ್ಯೋಗವನ್ನು ಕೈಗೊಂಡು ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಸದೃಢ ಭಾರತಕ್ಕೆ ಸದೃಢ ಯುವಕರಾಗಿ, ಭಾರತದ ಆರ್ಥಿಕ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

ಶ್ರೀ ಕಾಶಿ ವಿಶ್ವನಾಥನ ದೇವಸ್ಥಾನ ಪ್ರತಿಷ್ಠಾನದ ರೂವಾರಿಗಳಾದ ಶ್ರೀ ಎಲ್.ಡಿ. ಚಂದಾವರಿಯವರು, ಕಾರ್ಯಕ್ರಮದ ಅತಿಥಿಗಳಾಗಿ ದೇವಸ್ಥಾನ ಮತ್ತು ಸಮಿತಿಯ ಹುಟ್ಟು ಬೆಳವಣೆಗೆಯ ಬಗ್ಗೆ ವಿವರಿಸಿದರು. ಉತ್ತರ ಕರ್ನಾಟಕದಲ್ಲಿಯೇ ಗದಗ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಮತ್ತು ಕರಿಯಮ್ಮದೇವಿ ಸುಧಾರಣಾ ಸಮಿತಿಗಳು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಒಂದು ಇತಿಹಾಸ ಎಂದರು.

ಡಾ. ದ.ರಾ. ಬೇಂದ್ರೆ ರಾ.ಸ್ಮಾ. ಟ್ರಸ್ಟ್ ಧಾರವಾಡ ಇದರ ಅಧ್ಯಕ್ಷರಾದ ಡಾ. ಜಿ.ಎಂ. ಹಿರೇಮಠ ಅತಿಥಿ ಸ್ಥಾನ ವಹಿಸಿ ಮಾತನಾಡಿ ಸಮಿತಿಗಳು ಹುಟ್ಟಿ ಸಾಯುವದಲ್ಲಿ ಅವುಗಳು ನಿರಂತರವಾಗಿ ಪ್ರಗತಿ ಪಥದಲ್ಲಿ ಮುಂದುವರೆದಾಗ ಮಾತ್ರ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಡಲು ಸಾಧ್ಯ ಎಂದರು. 4ನೇ ವಾರ್ಡಿನ ನಗರಸಭಾ ಸದಸ್ಯರಾದ ಶ್ರೀಮತಿ ಶ್ವೇತಾ ಬೆನಕನವಾರಿ ಅತಿಥಿಯಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ.ಎನ್. ಕಾಮನಹಳ್ಳಿ ವಹಿಸಿ, ರಜತ ಮಹೋತ್ಸವ ಸುಂದರವಾಗಿ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಮುರುಘಮಠ ಧಾರವಾಡ ಇವರು ಆಶೀರ್ವದಿಸಿ, ಸಮಾಜದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಜನರ ಮನಸ್ಸಿಗೆ ತಲುಪಿಸಲು ಇಂತಹ ಸಮಿತಿಗಳು ಅತೀ ಅವಶ್ಯ. ಈ ಸಮಿತಿ 25 ವಸಂತಗಳನ್ನು ಪೂರೈಸಿದ ನಿಮಿತ್ಯ “ರಜತ ಮಹೋತ್ಸವ” ಆಚರಣೆ ಮಾಡಿಕೊಳ್ಳುತ್ತಿರುವುದು ಅತೀ ಸಂತೋಷವನ್ನುAಟು ಮಾಡಿದೆ ಎಂದರು.

ವೇದಿಕೆಯ ಮೇಲೆ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಶ್ರೀ ಬಸವರಾಜ ಸುಂಕದ, ಮಾಜಿ ಅಧ್ಯಕ್ಷರಾದ ಶ್ರೀ ವ್ಹಿ.ವಾಯ್. ಮಕ್ಕಣ್ಣವರ, ಶ್ರೀ ಶಂಕರ ಹಾನಗಲ್ಲ, ಶ್ರೀ ಎಸ್.ಎಸ್. ಪಾಟೀಲ, ಶ್ರೀ ವ್ಹಿ.ಕೆ. ಗುರುಮಠ ಉಪಸ್ಥಿತರಿದ್ದರು.

ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತ ಗೀತೆಯನ್ನು ಶ್ರೀಮತಿ ಕಸ್ತೂರಿಬಾಯಿ ಕಮ್ಮಾರ, ಸ್ವಾಗತ ಮತ್ತು ಪರಿಚಯವನ್ನು ಶ್ರೀ ಎಂ.ಬಿ. ಚನ್ನಪ್ಪಗೌಡರ ನಿರ್ವಹಿಸಿದರು. ಕಾರ್ಯಕ್ರಮವನ್ನು ಶ್ರೀ ಕೆ.ಐ. ಕುರುಗೋಡ ಮತ್ತು ಶ್ರೀ ಬಿ.ಎಚ್. ಗರಡಿಮನಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶ್ರೀ ಆರ್.ಬಿ. ಒಡೆಯರ, ಶ್ರೀ ಮಾಂತೇಶ ಲಕ್ಕುಂಡಿ, ವ್ಹಿ.ಆರ್. ಕುಲಕರ್ಣಿ, ಅಮರೇಶ ಹಾದಿ, ಕಾರ್ತಿಕ ಮಡಿವಾಳರ, ಶ್ರೀಮತಿ ರಾಧಿಕಾ ಬಂದಮ್ಮ ಮುಂತಾದವರು ಪಾಲ್ಗೊಂಡಿದ್ದರು.