ಹುಲಕೋಟಿ: ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಶ್ರೀ ವಿಶ್ವಕರ್ಮ ಶಿಲ್ಪಿಯ ಜಯಂತಿಯನ್ನು ಆಚರಿಸಲಾಯಿತು.
ಹುಲಕೋಟಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ದಿನಾಂಕ 17ರ ಬುಧವಾರದಂದು ಶ್ರೀ ವಿಶ್ವಕರ್ಮ ಶಿಲ್ಪಿಯ ಜಯಂತಿಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ವೈಧ್ಯಾಧಿಕಾರಿಗಳು ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವೈದ್ಯಾಧಿಕಾರಿಗಳಾದ ಶ್ರೀಮತಿ ಐಶ್ವರ್ಯ ಮತ್ತು ಶ್ವೇತಾ ವಿಶ್ವಕರ್ಮರ ಫೋಟೋಗೆ ಪುಷ್ಪ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಬಿ ಎಸ್ ಹಿರೇಮಠ ನೂರಜಾನ ನರಗುಂದ ಎಸ್ ಪಿ ಕಳಸಣ್ಣವರ ರೇಣುಕಾ ನಾಯ್ಕರ್ ಲಲಿತಾ ದಿಂಡಿ ರೇಖಾ ಹಾಗೂ ಶ್ರೀ ಅಂಗಡಿ. ಸುಕನ್ಯಾ ಪತ್ತಾರ ಭಾಗವಹಿಸಿ ಯಶಸ್ವಿಗೊಳಿಸಿದರು. ಊರಿನ ಗಣ್ಯರಾದ ಫಕ್ಕೀರಶೆಟ್ಟಿ ಅಚ್ಚಳ್ಳಿ ಹಾಗೂ ದೇವೇಂದ್ರಪ್ಪ ಕಮ್ಮಾರ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು
ವಿಶ್ವಕರ್ಮರ ಜೀವನ ಚರಿತ್ರೆಯನ್ನು ತಿಳಿಸಿದರು. ಇವತ್ತು ವಿಶ್ವಕರ್ಮ ಜನಾಂಗದವರು ಜಗತ್ತಿನಲ್ಲಿ ಎಲ್ಲಾ ವಿಭಾಗದಲ್ಲೂ ವಿಜ್ಞಾನಿಗಳು ಕರಕುಶಲ ಕಮ್ಮಾರಿಕೆ ಬಡಿಗತನ ಪತ್ತಾರಿಕೆ ಕಂಚಗಾರಿಕೆ ಜಗತ್ತಿಗೆ ಬೇಕಾದ ಶಿಲ್ಪಕಲೆಗಳಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕೊನೆಯದಾಗಿ ಶ್ರೀಮತಿ ನೂರಜಾನ್ ನರಗುಂದ ನರ್ಸಿಂಗ್ ಆಫೀಸರ್ ಎಲ್ಲರಿಗೂ ವಂದಿಸಿದರು.