ಜಿಲ್ಲೆ

ವಾಯುವಿಹಾರ ಬಳಗದಿಂದ  ಉಪನ್ಯಾಸಕ ಎಸ್ ಹೆಚ್ ಬಡೆಖಾನ್  ಅವರಿಗೆ ನಿವೃತ್ತಿ  ಸನ್ಮಾನ

Gadag - Shivanand Hiremath
ಅನೇಕ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ ಕೀರ್ತಿ ಎಸ ಎಚ್  ಬಡೆಖಾನ್ ಅವರಿಗೆ ಸಲ್ಲುತ್ತದೆ: ಪ್ರಕಾಶ್ ಕಣವಿ
ಗದಗ: ಶಿಕ್ಷಣ ಪ್ರೇಮಿ ಎಸ್ ಹೆಚ್ ಬಡೆಖಾನವರಾಗಿದ್ದು  ಅವರು ಅನೇಕ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಶಿಕ್ಷಣ ರಂಗಕ್ಕೆ ಅಮೋಘ ಕೊಡುಗೆ ನೀಡಿದ್ದಾರೆಂದು   ನಿವೃತ್ತ ಪ್ರಾಚಾರ್ಯ ಪ್ರಕಾಶ್ ಕಣವಿಯವರು ಹೇಳಿದರು.
 ವಾಯು ವಿಹಾರ ಬಳಗದಿಂದ ಏರ್ಪಡಿಸಿದ್ದ ನಿವೃತ್ತರಾದ ಗದುಗಿನ ಮಹಿಳಾ ಮಹಾವಿದ್ಯಾಲಯದ ವಾಣಿಜ್ಯ ಉಪನ್ಯಾಸಕ  ಎಸ್ ಹೆಚ್ ಬಡೆಖಾನ್ ವರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುಗಳಾಗಿದ್ದರು  ಎಸ್ ಹೆಚ್ ಬಡೆಕಾನವರು ಅವರು ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯ ಮಾಡಿ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದವರು ಹೇಳಿದರು.
 ನಿವೃತ್ತರಾದ ಎಸ್ ಹೆಚ್ ಬಡೆಖಾನ್   ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಾವು 9 ಮಂದಿ ಅಣ್ಣತಮ್ಮಂದಿರೆಲ್ಲಾ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದು ಶಿಕ್ಷಣ ರಂಗದಲ್ಲಿ ಸೇವೆ ಮಾಡುವುದು ಒಂದು ಅಪೂರ್ವ ಅವಕಾಶ ಎಂದು ಅವರು ಹೇಳಿದರು.
 ರಾಮಣ್ಣ ಕಾಶಪ್ಪನವರು ಮಾತನಾಡಿ ಎಸ ಎಚ್ ಬಡೆಖಾನ್ ಅವರು ಎಲೆ ಮರಿಯೆ ಕಾಯಂತೆ 14 ವರ್ಷಗಳ ಕಾಲ ಅನುದಾನ ರಹಿತ    ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಹದಿನಾರು ವರ್ಷಗಳ ಕಾಲ ಮಹಿಳಾ ಮಹಾವಿದ್ಯಾಲಯ ಗದಗದಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ತಮ್ಮದೇ ಆದ  ಕಾಣಿಕೆಯನ್ನು ಶಿಕ್ಷಣ ರಂಗಕ್ಕೆ ನೀಡಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಅವರ ಹಾರೈಸಿದರು.
 ಗಂಗಾಧರ  ಹಿಡಿಕಿಮಠ  ಅವರು ಮಾತನಾಡಿ ಸಮಾಜ ನಿರ್ಮಾಣ ಮಾಡುತ್ತಿರುವ ಶಿಕ್ಷಕರು ಅನುದಾನ ರೈತ ಶಿಕ್ಷಣ ಸಂಸ್ಥೆಯಲ್ಲಿ ಸೇವೆಯನ್ನು ಮಾಡಿ ಅಲ್ಪಸ್ವಲ್ಪ ವೇ ತನದಲ್ಲಿ ಜೀವನ ನಡೆಸುವುದು ಅತ್ಯಂತ ಕಠಿಣಕರವಾಗಿದ್ದು ಅನುದಾನ ರೈತ ಸೇವೆಯಿಂದ ಶಿಕ್ಷಕರು ನೋವನ್ನು ಅನುಭವಿಸುವಂತಹಾಗಿದೆ ಎಂದವರು ಹೇಳಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎಸ್ ಎಸ್ ಪಾಟೀಲ್ ಅವರು ಮಾತನಾಡಿ ಎಸ್ ಹೆಚ್ ಬಡೆಖಾನ್ವರು  ಸೂಕ್ಷ್ಮ ಸ್ವಭಾವದ  ಸ್ನೇಹಮಯ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು  ಶಿಕ್ಷಣ ರಂಗಕ್ಕೆ ಅವರು ಸಲ್ಲಿಸಿದ ಸೇವೆ  ಅನುಪಮವಾಗಿದ್ದು  ಅವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಅವರು ಹೇಳಿದರು.
 ನಿವೃತ್ತ ಕೃಷಿ ಅಧಿಕಾರಿ ಆ ಕೆ  ಕುರುಗೋಡು ಅವರು ಮಾತನಾಡಿದರು ಎಸ್ ಐ ಪಟ್ಟೇದ್, ಕೆ ಬಿ  ಭಜಂತ್ರಿ, ಎಸ್ ಎನ್ ಮಡಿವಾಳರ್, ಹನುಮೇಶ್, ಮನೋಹರ್ ಸಾಸ್ವಿಹಳ್ಳಿ, ಶಿವನಗೌಡ ಮೂಲಿಮನಿ, ಜಿ ಎಸ್ ಯತ್ನಟ್ಟಿ, ಕೆಎಸ್ಆರ್ಟಿಸಿ ನಿವೃತ್ತ ಅಧಿಕಾರಿ  ಯತ್ನಟ್ಟಿ,  ಗೌಡರ್, ಅಶೋಕ್, ಶರಣಯ್ಯ ಸ್ವಾಮಿ, ಗೌಡರ್ ಉಪಸ್ಥಿತರಿದ್ದರು ಕೊನೆಗೆ ಕೆ ಬಿ ಭಜಂತ್ರಿ  ಅವರು ವಂದಿಸಿದರು.