ಜಿಲ್ಲೆ

ಜಿಲ್ಲಾಮಟ್ಟದ ಯುವ ಅಣಕು ಸಂಸತ್​ ಸ್ಪರ್ಧೆ

Gadag - Shivanand Hiremath

ಸಂಸತ್​ ವ್ಯವಸ್ಥೆಯ ಮೂಲ ಪುರುಷ ವಿಶ್ವಗುರು ಬಸವೇಶ್ವರ: ಎಸ್​. ಎಸ್​. ಪಟ್ಟಣಶೆಟ್ಟ

ವಿಜಯವಾಣಿ ಸುದ್ದಿಜಾಲ ಗದಗ
12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಅದಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂಸತ್​ ವ್ಯವಸ್ಥೆಯ ಕಲ್ಪನೆ ಹುಟ್ಟುಹಾಕಿದ್ದ ವಿಶ್ವಗುರು ಬಸವೇಶ್ವರರು ಸಂಸತ್​ ವ್ಯವಸ್ಥೆಯ ಮೂಲಪುರುಷ ಎಂದು ತೋಂಟದಾರ್ಯ ವಿದ್ಯಾಪಿಠದ ಕಾರ್ಯದಶಿ ಪ್ರೊ. ಎಸ್​. ಎಸ್​. ಪಟ್ಟಣಶೆಟ್ಟರ ನುಡಿದರು.
ನಗರದ ತೋಂಟದ ಸಿದ್ದೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾಮಟ್ಟದ ಯುವ ಅಣಕು ಸಂಸತ್​ ಸ್ಪರ್ಧೆಯ ಅಧ್ಯತೆ ವಹಿಸಿ ಮಾತನಾಡಿದ ಅವರು, ದೇಶದ ಭವಿಷ್ಯವು ವರ್ಗ ಕೊಠಡಿಯಲ್ಲಿ ನಿರ್ಮಾಣವಾಗುತ್ತದೆ ಎಂಬ ಮಾತಿನಂತೆ ವಿದ್ಯಾಥಿರ್ಗಳು ಶಾಲಾ ಕಾಲೇಜು ಹಂತದಲ್ಲಿಯೇ ನಮ್ಮ ಸಂಸತ್​, ಪ್ರಜಾಪ್ರಭುತ್ವ ಹಾಗೂ ಆಡಳಿತದ ಬಗ್ಗೆ ಜಾಗೃತಿ ಹೊಂದಿರಬೇಕು. 12ನೇ ಶತಮಾನದಲ್ಲಿ ಬಸವಣ್ಣ ಸ್ತಾಪಿಸಿದ್ದ ಅನುಭವ ಮಂಟಪ ಪಾಲಿರ್ಮೆಂಟಿನ ಮೂಲವಾಗಿದ್ದು, ಬಸವಾದಿ ಶರಣರು ರಚಿಸಿದ ವಚನಗಳಿಗೆ ಕಾನೂನಾಗಿ ಪರಿವರ್ತನೆ ಆಗುವ ಶಕ್ತಿ ಇತ್ತು ಎಂದರು. ಆದರೆ ಆಗ ಕಾನೂನು ರಚಿಸಲು ಈಗಿನಂತೆ ಸಂವಿಧಾನ ಇರಲಿಲ್ಲ. 530 ಸಂಸ್ಥಾನಗಳು ಇದ್ದವು. ಹೀಗಾಗಿ ವಚನಗಳು ಕಾನೂನು ಆಗಲಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಯು ಉಪನಿರ್ದೇಶಕ ಸಿದ್ಧಲಿಂಗ ಮಸನಾಯಿಕ ಮಾತನಾಡಿ, ಸಂವಿಧಾನ ಹಾಗೂ ಸಂಸತ್ತಿನ ಕುರಿತು ಇಂದಿನ ವಿದ್ಯಾಥಿರ್ಗಳಿಗೆ ಅರಿವು ಅನಿವಾರ್ಯವಾಗಿದೆ. ಅಣುಕು ಪ್ರದರ್ಶನದಲ್ಲಿ ಉತ್ತಮ ಕೌಶಲ್ಯ ತೋರಿದ ಸಂಸತ್​ ಪಟುಗಳಿಗೆ ಒಳ್ಳೆಯ ಭವಿಷ್ಯವಿದೆ. ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಸ್ಪರ್ಧೆಯಲ್ಲಿ ಶ್ರೀದೇವಿ ಹೊನ್ನಳ್ಳಿ ಪ್ರಥಮ, ರ್ಪೂವಿ ಜೋಶಿ ದ್ವೀತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಪಿ. ಜಿ. ಜೋಗಣ್ಣವರ, ಎಸ್​.ಐ. ಮೇಟಿ, ವೈ. ಎಸ್​. ಮತ್ತೂರ, ಅಮರೇಶ ಅಂಗಡಿ, ಎಂ.ಎಸ್​. ಮುಲ್ಲಾ, ಜಿ. ಎಂ. ಹಕಾರಿ, ಬಿ. ಕೆ. ಪೂಜಾರ, ಜಿ.ಎಸ್​. ಶಿರಸಿ, ಎಚ್​.ಎಸ್​. ಕಿಂದ್ರಿ, ಎ. ಎಂ. ಅಂಗಡಿ ಇತರರು ಇದ್ದರು.