ವಿಜಯವಾಣಿ ಸುದ್ದಿಜಾಲ ಗದಗ
ಗಾನಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಪಂ. ಪುಟ್ಟರಾಜ ಕವಿಗವಾಯಿಗಳ 14ನೇ ಪುಣ್ಯಸ್ಮರಣೋತ್ಸವ ಗುರುಗಳ ಜಾತ್ರಾ ಮಹೋತ್ಸವ ಜೂ. 22 ರಿಂದ 26ರ ವರೆಗೆ ನಡೆಯಲಿದೆ. ಸದ್ಭಕ್ತರು ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನ್ನವರು ಹೇಳಿದರು.
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಅಡಿದ ಅವರು, 5 ದಿನಗಳ ಕಾಲ ಕೀರ್ತನ, ಜಂಗಿ ಕುಸ್ತಿ, ಸಂಗೀತ, ಉಪನ್ಯಾಸ ಆಂಧರಗೋಷ್ಠಿ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಲಿವೆ. ಜೂ. 26 ರಂದು ಉಭಯ ಗುರುಗಳ ಮಹಾರಥೋತ್ಸವ, ಧಮೋರ್ತ್ತೇಜಕ ಮಹಾಸಭೆ ಹಾಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು.
ಜೂ.22ರ ಕಾರ್ಯಕ್ರಮ:
ಪ್ರತಿದಿನ ಬೆಳಗ್ಗೆ ಗದ್ದುಗೆಗೆ ವೇದೋಕ್ತ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ, ಪ್ರತಿದಿನ ಬೆಳಗ್ಗೆ 7 ರಿಂದ 8 ಗಂಟೆವರೆಗೆ ಕೈವಲ್ಯ ಪದ್ಧತಿ ಶಿವಯೋಗ ಕುರಿತು ಶಿವಾನುಭ ಜರುಗಲಿದೆ. ಅಡ್ನೂರು ಬ್ರಹನ್ಮಠದ ಪಂಚಾಚಾರ್ಯ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಜರಗುವ ಶ್ರೀಗುರು ರೆ ಕಾರ್ಯಕ್ರಮ ಜರಗುವುದು. ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪುಟ್ಟರಾಜ ಕವಿಕೃತ "ಶ್ರೀ ಮಹಾದೇವಿ ಪುರಾಣಂ' ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಕಲ್ಲಯ್ಯಜ್ಜನವರ ಸಾಹಿತ್ಯ ಹೊಂದಿರುವ "ಶಿವಯೋಗಿ ಸಂತ ಪುಟ್ಟಯ್ಯಜ್ಜ, ಧ್ವನಿ ಸುರುಳಿ ಬಿಡುಗಡೆಗೊಳ್ಳಲಿದೆ. ಸಂಜೆ 6 ಗಂಟೆಗೆ ಜರಗುವಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನ್ನಿಧ್ಯವನ್ನು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಗಳವರು ವಹಿಸುವರು. ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸುವ. ಚಳಗೇರಿ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಉಪಸ್ಥಿತಿ ಇರುವರು. ರಾತ್ರಿ 10.30ಕ್ಕೆ ಪುಟ್ಟರಾಜ ಕವಿ ಗವಾಯಿಗಳವರ ರಚಿತ "ಶ್ರೀ ಕೃಷ್ಣ ಗಾರುಡಿಗ ಪೌರಾಣಿಕ ನಾಟಕ' ಪ್ರದರ್ಶನಗೊಳ್ಳಲಿದೆ ಎಂದರು.
ಜೂ.23ರ ಕಾರ್ಯಕ್ರಮಗಳು:
ದಿಂಗಾಲೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ವರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿ ಜರಗುವುದು. "ನೂರೆಂಟು ನಾಮಾವಳಿಗಳು' ಗ್ರಂಥ ಬಿಡುಗಡೆ, ಹಾಗೂ "ಶ್ರೀ ಗುರು ಮಚನಾಮೃತ ಹಾಗೂ ಆರೋಹ ಸಿರಿ' ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.
ಜೂ.24ರ ಕಾರ್ಯಕ್ರಮಗಳು:
ಅನ್ನದಾನಿಶ್ವರ ಶ್ರಿಗಳ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ಕೀರ್ತನ ಸಮ್ಮೇಳನ ಕಾರ್ಯಕ್ರಮ ಜರಗುವುದು. ಇದೇ ಸಂದರ್ಭದಲ್ಲಿ ಪುಟ್ಟರಾಜ ಕವಿಗವಾಗಳು ರಚಿಸಿದ ಗಾನಸುದಾ ಗ್ರಂಥ ಬಿಡುಗಡೆ ಆಗಲಿದೆ. ರಾತ್ರಿ 10 ಗಂಟೆಗೆ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮ ಜರುಗಲಿದೆ.
ಜೂ. 25ರ ಕಾರ್ಯಕ್ರಮಗಳು:
ಬೆಳಿಗ್ಗೆ 10 ಗಂಟೆಗೆ ಡಾ. ಅಜಯಪ್ರಕಾಶ ಬಸರಿಗಿಡದ ಹಾಗೂ ಡಾ. ಕಾವ್ಯಾ ಬಸರಿಗಿಡದ ಅವರಿಂದ ಉಚಿತ ಆರೋಗ್ಯ ಶಿಬಿರ ಜರುಗಲಿದೆ. ತೋಂಟದ ಸಿದ್ದರಾಮಯ್ಯ ಶ್ರಿಗಳ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ಶಿವಾನುಭಗೋಷ್ಠಿ ಜರಗುವುದು. ಪುಟ್ಟರಾಜ ಕವಿ ಗವಾಯಿಗಳು ರಚಿಸಿದ "ಭಾವ ಮಂದಾಕಿನಿ" ಗ್ರಂಥ ಹಾಗೂ ಕಲ್ಲಯ್ಯಜ್ಜನವರು ರಚಿಸಿದ "ಚುಟುಕು ಸಾಹಿತ್ಯ' ಕೃತಿ ಲೋಕಾರ್ಪಣೆಗೊಳ್ಳಲಿದೆ. ರಾತ್ರಿ 10 ಗಂಟೆಗೆ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮ ಜರುಗಲಿದೆ.
ಜೂ.26 ರ ಕಾರ್ಯಕ್ರಮಗಳು:
ಬೆಳಗ್ಗೆ 4 ಗಂಟೆಗೆ ಅಯ್ಯಾಚಾರ ಹಾಗೂ ದೀಕ್ಷೆ ಕಾರ್ಯಕ್ರಮ ಜರಗುವುದು. ಪಂಚಾಕ್ಷರ ಗವಾಯಿಗಳವರ ಹಾಗೈ ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ಜರಗುವುದು. ಸಂಜೆ 4 ಗಂಟೆಗೆ ಪಂಚಾಕ್ಷರ ಗವಾಯಿಗಳವರ ಮಹಾಪುರಾಣ ಮಂಗಲಗೊಳ್ಳುವುದು. ಸಂಜೆ 6 ಗಂಟೆಗೆ ಮಹಾರಥೋತ್ಸವ ಜರಗುವುದು.
ಜೂ.26ರ ಕಾರ್ಯಕ್ರಮ:
ಹುಬ್ಬಳ್ಳಿಯ ಮೂರು ಸಾವಿರ ಮಟದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ವಿಶೇಷ ಕಾರ್ಯಕ್ರಮ, ಧಮೋರ್ತ್ತೇಜಕ ಮಹಾಸಭೆ ಜರಗುವುದು. ತುಮಕೂರ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಪ್ರವಚನ ಕ್ಷೇತ್ರದ ಸಾಧಕ ಮದರಿಯ ರಾಚಯ್ಯ ಶಾಸ್ತಿ ಹಿರೇಮಠ- ಹಾಗೂ ಗಾಯನ ಕ್ಷೇತ್ರದ ಸಾಧಕ ನಾಗಾವಿಯ ಲಕ್ಷ$್ಮಣ ತಳವಾರ- ಮತ್ತು ಹನುಮಂತ ಕೊಡಗಾನೂರ ಅವರಿಗೆ ಕುಮಾರಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದ ಸಾಧಕ ರಾಮಣ್ಣ ಮಲ್ಲಿಗವಾಡ- ಅವರಿಗೆ ಪ್ರಧಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ "ಅಷ್ಟೋತ್ತರ ಶತನಾಮಾವಳಿ' "ಅಷ್ಟಾವರಣ ಕಥಾ ಕೀರ್ತನ ಮಾಲಿಕೆ' ಹಾಗೂ "ಶ್ರೀಗುರು ಪುಟ್ಟರಾಜ ಚರಿತಂ(ಪುರಾಣ) ಲೋಕಾರ್ಪಣೆಗೊಳ್ಳಲಿವೆ ಎಂದು ಕಲ್ಲಯ್ಯಜ್ಜನವರು ತಿಳಿಸಿದರು.
ಸುದ್ದಿಗೋಷ್ಠಿ ಯಲ್ಲಿ ನೇಮರಾಜಶಾಸ್ತ್ರಿ, ನಿಂಗಪ್ಪ ಕೆಂಗಾರ, ವಿರೇಶ ಕಿತ್ತೂರು, ಎಂ.ಸಿ. ಹಿರೇಮಠ, ಸಿದ್ದಯ್ಯ ಶಾಸ್ತ್ರಿ ಇತರರು ಇದ್ದರು.
.