ಗದಗ: ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು ದೇವರ ಮಕ್ಕಳು, ಅವರಿಬ್ಬರ ಗುರು ಶಿಷ್ಯರ ಸಂಬಂಧ ಶ್ರೀರಾಮಚಂದ್ರ ಹನುಮಂತನ ಸಂಬಂಧ ಹೇಗಿತ್ತೋ ಹಾಗೇ ಇತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪಾಯ ಪಟ್ಟರು.
ಅವರು ಇಂದು ಗದಗನಲ್ಲಿ ನಡೆದ ಪರಮಸೂಜ್ಯ ಗಾನಯೋಗಿ ಶಿವಯೋಗಿ ಲಿಂಗ್ರಕ್ಕೆ ಪಂಡಿತ ಪಂಚಾಕ್ಷರಿ ಗವಾಯಿಯವರ 81ನೇ ಹಾಗೂ ಪದ್ಮಭೂಷಣ ಲಿಂಗೈಕ ಡಾ. ಪಂಡಿತ ಪುಟರಾಜ ಗವಾಯಿಗಳ 15 ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಬ್ಬರು ಪರಮ ಪೂಜ್ಯ ಗುರುಗಳು, ಪವಾಡ ಪುರುಷರ ಸ್ಮರಣೋತ್ಸವ ನಡೆಯುತ್ತಿದೆ. ಈ ಮಠಕ್ಕೆ ಬಂದರೆ ಭಾವನೆಗಳು ಎದೆ ತುಂಬುತ್ತವೆ. ಈ ಮಠಕ್ಕೆ ಬಂದಾಗ ನೆನೆಪುಗಳು, ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಕಾರ್ಯಕ್ರಮ ನಡೆದಿದ್ದು, ಜಾತ್ರಾ ಮಹೋತ್ಸವ ಮನದಾಳದಲ್ಲಿ ಗಟ್ಟಿಯಾಗಿ ಉಳಿದಿವೆ. ಅದರ ಜೊತೆಗೆ ಅವರ ಅಂತಿಮ ಯಾತ್ರೆ, ಅದರಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ ಭಾಗ್ಯ, ನಾನು ನನ್ನ ಜೀವನದಲ್ಲಿ ಅದನ್ನು ಮರೆಯುವುದಿಲ್ಲ ಎಂದರು.
ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳು ದೇವರ ಮಕ್ಕಳು, ಈ ಭೂಮಿಗೆ ನಾನು ಏನು ಕೊಟ್ಟಿದ್ದೇನೆ ಎಂದು ತೋರಿಸಲು ದೇವರು ಅಂತವರನ್ನು ತಾನೇ ಕಳುಹಿಸುತ್ತಾನೆ. ನಾವೆಲ್ಲ ಕಣ್ಣಿದ್ದರೂ ಕುರುಡರು, ಕಣ್ಣಿಗೆ ಕಂಡಿದ್ದರೂ, ಕಣ್ಣನ್ನು ಬೇರೆ ಕಡೆಗೆ ತಿರುಗಿಸುತ್ತೇವೆ. ನಾವು ಈ ಗುರುಗಳ ಜೀವನ ನೋಡಿದಾಗ ಅವರ ತಪಸ್ಸಿನ ಸಾಕ್ಷಾತ್ಕಾರವಾಗಿರುವ ಈ ಜೀವಿನ ನಮ್ಮ ಕಣ್ಣು ತೆರೆಸಲು ಇದೆ. ನಾವು ನೋಡದಿರುವುದನ್ನು ಅವರು ನೋಡುತ್ತಿದ್ದರು. ಅದಕ್ಕೆ ಅವರು ಪವಾಡ ಪುರುಷರು, ಅವರು ಸದಾ
ಹಸನ್ಮುಖರು. ಅವರು ಇದ್ದಿರುವ ಜಗತ್ತೇ ಬೇರೆ. ದೇವರು ನಮ್ಮನ್ನು ಸೃಷ್ಟಿ ಮಾಡಿರುವುದು, ಭಗವಂತ ಸೃಷ್ಟಿ ಮಾಡಿರುವ ಭೂಮಿ, ಆಕಾಶ ನೋಡಲು, ಆದರೆ, ಅವರ ದೃಷ್ಠಿ ಭಗವಂತ ಇರುವಂತ, ಸ್ಥಾಪನೆಯಾಗಿರುವ ಜಾಗ ನೋಡುವ ದೃಷ್ಟಿ ಅವರು ನೋಡುತ್ತಾರೆ. ನೀವು ಏನು ಬೇಕಾದರೂ ಸಾಧನೆ ಮಾಡಿ ಭಗವಂತ ಇರುವ ಸ್ಥಳ ನೋಡಲು ಸಾಧ್ಯವಿಲ್ಲ. ಅದಕ್ಕೆ ಅಗಾಧವಾದ ಏಕಾಂತ ಬೇಕು ಎಂದರು.
ಬದುಕಿಗೆ ಜ್ಞಾನ ಮತ್ತು ಧ್ಯಾನ ಬಹಳ ಮುಖ್ಯ ಅರ್ಥಪೂರ್ಣ ಬದುಕಿಗಾಗಿ ಜ್ಞಾನ ಮತ್ತು ಧ್ಯಾನ ಮುಖ್ಯ ಅವೆರಡು ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳಿಗೆ ಇತ್ತು. ಹಲವಾರು ಭಾಷೆಗಳು ಅವರಿಗೆ ಗೊತ್ತಿತ್ತು ಅಂತ ನಾವು ಅಂದುಕೊಂಡಿದ್ದೇವೆ. ಜನರ ಭಾಷೆ ಮೀರಿ ಅವರ ಭಾಷೆ ಇತ್ತು. ಅಂತಹ ತಪಸ್ವಿಗಳು ಗದಗಿನಲ್ಲಿ ಇದ್ದು ಸಾವಿರಾರು ಕಣ್ಣಿಲ್ಲದ ಮಕ್ಕಳಿಗೆ ಬದುಕು ಕೊಟ್ಟಿದ್ದಾರೆ. ನಾವು ಅವರ ಸ್ಮರಣೆ ಮಾಡುವುದೇ ನಮ್ಮ ಪುಣ್ಯ ಭಾಗ್ಯ ಎಂದರು.
ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ, ಶುದ್ಧ ಅಂತಕರಣದ ಕಲುಷಿತವಲ್ಲದ ಕರಾರುರಹಿತವಾದ ಪ್ರೀತಿಯೇ ಭಕ್ತಿ, ನನಗೆ ಬಂಗಾರ ಕೊಡು, ಅಧಿಕಾರ ಕೊಡು ಎನ್ನುವುದು ಭಕ್ತಿಯಲ್ಲ. ಅದು ವ್ಯವಹಾರ, ಯಾವುದೇ ಬೇಡಿಕೆ ಇಲ್ಲದೇ ಇರುವುದು ಭಕ್ತಿ, ಭಕ್ತಿ ಎಂದರೆ ಗುರುವಿನಲ್ಲಿ ಕರಗುವುದು. ಕರಗಿ ಲೀನವಾಗುವುದು. ನಿನ್ನ ಅಸ್ತಿತ್ವವನ್ನು ಕರಗಿಸಿ, ವ್ಯಕ್ತಿತ್ವ ಕರಗಿಸಿ ಗುರುವಿನಲ್ಲಿ ಲೀನವಾಗುವುದೇ ನಿಜವಾದ ಭಕ್ತಿ. ಅಂತಹ ಭಕ್ತಿಯ ಸಂಬಂಧವೇ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳದ್ದು ಎಂದರು.
ಇಲ್ಲಿ ಮಕ್ಕಳು ಆದ್ಭುತವಾಗಿ ಹಾಡಿದರು. ರವಿ ಎನ್ನುವ ಹುಡುಗ ಅದ್ಭುತವಾಗಿ ಹಾರ್ಮೋನಿಯಂ ಬಾರಿಸಿದ ಆತ ನಿಮ್ಮ ಚಪ್ಪಾಳೆಗಾಗಿ ಬಾರಿಸಲಿಲ್ಲ. ಗದಗಿನ ಜನರು ಪುಣ್ಯವಂತರು. ಗದಗಿನ ಪುಟ್ಟರಾಜ ಗವಾಯಿಗಳು ಅಂತ ಎಲ್ಲಿ ಹೋದರು ಹೆಸರು ಬರುತ್ತದೆ. ನಮ್ಮ ತಂದೆ ಹಾಗೂ ಡಾ. ರಾಜಕುಮಾರ್ ಅವರ ಜೊತೆಗೆ ಪುಟರಾಜ ಗವಾಯಿಗಳು ಇರುವ ಫೋಟೊ ನೋಡಿದೆ. ಈ ಮಠದ ಜೊತೆಗೆ ನಮ್ಮದು ಎರಡನೇ ಪೀಳಿಗೆ ಸಂಬಂಧ ಇದೆ. ಬದುಕಿನಲ್ಲಿ ಸಾಧನೆ ಮಾಡುವುದು ಬಹಳ ಕಠಿಣ ಮತ್ತು ವಿರಳ. ನಾವು ಹುಟ್ಟಿದಾಗ ಇರುವ ಮುಗ್ಧತೆ ಬದುಕಿನ ಉದ್ದಕ್ಕೂ ಕಾಪಾಡಿಕೊಂಡು ಹೋಗುವುದು ಬಹಳ ಕಷ್ಟ ನಾವು ಚಿಕ್ಕವರಿದ್ದಾಗ ನಮ್ಮ ಮುಖ ಮುಗ್ಧವಾಗಿರುತ್ತವೆ. ಈಗ ಅಷ್ಟೊಂದು ಮುಗ್ಧವಾಗಿರುವುದಿಲ್ಲ, ಮಗುವಿನಲ್ಲಿರುವ ಮುಗ್ಧತೆ ಸ್ಪಷ್ಟವಾದ ಶುದ್ಧವಾದ ಭಾವ ಮೂಡುತ್ತದೆ. ಅದನ್ನು ಜೀವನದುದ್ದಕ್ಕೂ ಉಳಿಸಿಕೊಂಡು ಹೋಗುವುದು ಕಷ್ಟ ಆದರೆ, ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿಗವಾಯಿಗಳಲ್ಲಿ ಕೊನೆ ಕಣದವರೆಗೂ ಅದೇ ಮುಗ್ಧತೆ ಪುಟ್ಟರಾಜ ಗವಾಯಿಗಳು ಆತ್ಮಸಾಕ್ಷಿ ವಿರುದ್ಧ ಯಾವತ್ತೂ ನಡೆದುಕೊಳ್ಳಲಿಲ್ಲ. ಅಂತಹ ಗುರು ಶಿಷ್ಯರ ಪರಂಪರ ಅದಕ್ಕೆ ಮೆರಗು ಕೊಡುವಂಥದ್ದು ಸಂಗೀತ. ಸಂಗೀತ ಒಂದು ಅದ್ಭುತವಾದ ಭಾವನೆ ಯಾರು ಸಂಗೀತ ಹಾಡುತ್ತಾರೆ ಅವರು ಯೋಗಿಗಳ ಹಾಗೆ, ಗುರು ಶಿಷ್ಯರು ಸಂಗೀತವನ್ನು ಈ ಮಠಕ್ಕೆ ಶಿಷ್ಯರಿಗೆ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಈ ಪರಂಪರೆ ಇರುತ್ತದೆ. ಅಲ್ಲಿಯವರೆಗೂ ಪಂಚಾಕರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ನಮ್ಮ ಜೊತೆಗೆ ಇರುತ್ತಾರೆ. ಎರಡನೇಯದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟ ಎಂದು ಹೇಳಿದರು.
ಪಂಚಾಕ್ಷರಿ ಗವಾಯಿಗಳು ಪರಮ ಪೂಜ್ಯರು ಅಂತಿಮ ಯಾತ್ರೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ನಾನು ಹಾಗೂ ಶ್ರೀರಾಮುಲು ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟೆವು. ಲಕ್ಷಾಂತರ ಜನರು ಬಂದಿದ್ದರು. ದಾರಿಯುದ್ದಕ್ಕೂ ಜನರು ಕುಡಿಯಲು ನೀರು ಕೊಟ್ಟರು. ಜನ ಸ್ವಯಂ ಪ್ರೇರಣೆಯಿಂದ ಭಾಗಿಯಾದಾಗ ಹೇಗಿರುತ್ತದೆ ಎನ್ನುವುದು ಅವತ್ತಿನ ಜನರ ನಡವಳಿಕೆಯೇ ಸಾಕ್ಷಿ ಆಗ ಇಲ್ಲಿ ಒಂದು ಭವನ ಕಟ್ಟಲು ಐದು ಕೋಟಿ ರೂ. ಕೊಟ್ಟಿದ್ದೇವು. ಅದು ಪೂರ್ಣವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಸಿಎಂ ಜೊತೆ ಮಾತನಾಡಿ ಅದನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಕೊಡಿಸಬೇಕು. ನಾನೂ ಕೂಡ ಕೇಂದ್ರದ ಸಂಸ್ಕೃತಿ ಇಲಾಖೆಯ ಜೊತೆ ಮಾತನಾಡಿ ಸಾಧ್ಯವಾದಷ್ಟು ಸಹಾಯ ಮಾಡಿಸುತ್ತೇನೆ ಎಂದು ಹೇಳಿದರು.