ಜಿಲ್ಲೆ

ಬೇಸಿಗೆ ಶಿಬಿರದ ಮಕ್ಕಳಿಂದ ಒಂದು ದಿನದ ಹೊರಸಂಚಾರ

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಹಾಗೂ ಜ್ಞಾನಗಂಗಾ ಸೇವಾ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ 30 ದಿನಗಳವರೆಗೆ ನಡೆದ ಬೇಸಿಗೆ ಶಿಬಿರದ ಮಕ್ಕಳಿಗೆ ಒಂದು ದಿನದ ಹೊರಸಂಚಾರವನ್ನು ಕೈಗೊಳ್ಳಲಾಯಿತು.
ಜ್ಞಾನಗಂಗಾ ಸೇವಾ ಪ್ರತಿಷ್ಠಾನದ ಸಂಸ್ಥಾಪಕರು ಹಾಗೂ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ಹಾಗೂ ವಿ. ಡಿ. ಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಶಾಲಾ ವಾಹನಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಪಿ. ಎಚ್. ಕಡಿವಾಳ,
ಶ್ರೀ ಎಸ್. ವಾಯ್, ಕಠಾರಿ, ಶ್ರೀ ಶಶಿಧರ ಹೊಸಳ್ಳಿ ರವರು, ಬೇಸಿಗೆ ಶಿಬಿರದ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲೆಯಲ್ಲಿ ಹಮ್ಮಿಕೊಂಡ 30 ದಿನಗಳ ಬೇಸಿಗೆ ಶಿಬಿರದ ತರಗತಿಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳು ಹೊರಗಿನ ಪ್ರಪಂಚದ ಜ್ಞಾನ ಅರಿಯಲು ಗದಗ ನಗರದ ಹೊರ ವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಬೇಟಿ ನೀಡಿ ಮನರಂಜನೆಯ ಜೊತೆಗೆ ಸಸ್ಯ ಸಂಪತ್ತಿನ ಕುರಿತು ಜ್ಞಾನದ ಬೆಳಕನ್ನು ಹೆಚ್ಚಿಸಿಕೊಂಡರು.