ಜಿಲ್ಲೆ

ಸಮ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಕರು ದೀಪ ಸ್ತಂಭವಾಗಬೇಕು - ಡಾ. ನಿಜಲಿಂಗಪ್ಪ ಮಟ್ಟಿಹಾಳ.

Gadag - Shivanand Hiremath

ಗದಗ: ಸಮಾಜದಲ್ಲಿ ಶಿಕ್ಷಕರ ಪಾತ್ರ ಅತೀ ಪ್ರಮುಖವಾದುದು. ಇಲ್ಲಿ ಇರುವ ಮೇಲು-ಕೀಳು, ಶ್ರೀಮಂತ- ಬಡವ, ಸ್ತ್ರೀ- ಪುರುಷ ಎನ್ನುವ ತಾರತಮ್ಯವನ್ನು ಹೋಗಲಾಡಿಸಿ ಸಮ ಸಮಾಜವನ್ನು ಕಟ್ಟುವ ಕಾರ್ಯವನ್ನು ಶಿಕ್ಷಕರು ದೀಪ ಸ್ತಂಭಗಳಾಗಿ ಮಾಡುವುದು ಪ್ರಸ್ತುತ ಸಮಾಜದ ಅವಶ್ಯಕತೆಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ  ಕುಲಸಚಿವರು ಮೌಲ್ಯಮಾಪನ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಉತ್ತರ ಕರ್ನಾಟಕದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ  ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ 2023-24 ನೇ ಸಾಲಿನ ವಾರ್ಷಿಕ ಹಬ್ಬ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನವಹಿಸಿ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ  ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯು ಅತೀ ಪವಿತ್ರವಾದುದು. ಭಾರತ ದೇಶ ಬೇರೆ ಬೇರೆ ವಿಚಾರದಲ್ಲಿ ಒಡೆದು ಹೋಗಿದೆ, ಅದನ್ನು ಒಂದುಗೂಡಿಸಿ ಒಂದೇ ಭಾರತವನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ  ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮೇಘನಾ ಮುನವಳ್ಳಿ ಹಾಗೂ ಸಂಗಡಿಗರು ಉದಾಯವಾಗಲಿ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಕು. ಪದ್ಮಾವತಿ ಬಳ್ಳಾರಿ ಹಾಗೂ ಕು. ಖುಷಿ ಕದಂ ರವರು ಪ್ರಥಮ ಪೂಜಿತ ವಿಘ್ನ ವಿನಾಶಕ ವಿನಾಯಕನ ಪ್ರಾರ್ಥನೆಗೆ ಭರತನಾಟ್ಯ ಪ್ರದರ್ಶಿಸಿದರು. ಡಾ. ನಿಜಲಿಂಗಪ್ಪ ಮಟ್ಟಿಹಾಳ ರವರು ಗಣೇಶ ಮತ್ತು ಸರಸ್ವತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೊಳ ರವರು ಮಾತನಾಡಿ, ಶಿಕ್ಷಕರು ಯಾವಾಗಲೂ ಕ್ರಿಯಾಶೀಲರಾಗಿರಬೇಕು, ಅವರಲ್ಲಿ ಹೊಸತನ್ನು ಕಲಿಯುವ  ಇಚ್ಛೆ ಯಾವಾಗಲೂ ಇರಬೇಕು ಎಂದರು.

 ಇದೇ ಸಂದರ್ಭದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿದ್ಯಾದಾನ ಸಮಿತಿಯ ಪ್ರಾಥಮಿಕ/ಪ್ರೌಢಶಾಲೆಯ ವಿಭಾಗದ ಸಿ.ಇ.ಓ. ಶ್ರೀ  ಪಿ. ಎಚ್. ಕಡಿವಾಳ ಹಾಗೂ ಬಣ್ಣದ ಮನೆ ವೇದಿಕೆಯಿಂದ ರಾಷ್ಟ್ರಮಟ್ಟದ ದೃಶ್ಯಕಲಾ ಚಿಂತನಕಾರ ಪುರಸ್ಕಾರವನ್ನು ಪಡೆದ ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ  ಶ್ರೀ ಎಮ್. ಆರ್. ಡೊಳ್ಳಿನ ರವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರೋ. ಕಿಶೋರಬಾಬು ನಾಗರಕಟ್ಟಿ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ  ಡಾ. ಗಂಗೂಬಾಯಿ ಪವಾರ ಪ್ರಾಸ್ತಾವಿಕ ನುಡಿಯೊಂದಿಗೆ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು, ಡಾ. ದತ್ತಪ್ರಸನ್ನ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು, ಕು. ಪದ್ಮಾವತಿ ಬಳ್ಳಾರಿ ಮತ್ತು ಕು. ಅರುಣ ಅವರು ತಮ್ಮ ಅನುಭವದ ಅನಿಸಿಕೆಗಳನ್ನು ಹಂಚಿಕೊಂಡರು, ಕ್ರೀಡಾ ವಿಭಾಗ, ಸಾಂಸ್ಕೃತಿಕ ವಿಭಾಗದ ಬಹುಮಾನ ವಿತರಣಾ ಕಾರ್ಯಕ್ರಮವನ್ನು  ಉಪನ್ಯಾಸಕರಾದ  ಶ್ರೀ ವಿ. ಪಿ. ಪಾಟೀಲ ಅವರು ನಡೆಸಿಕೊಟ್ಟರು. ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು. ದೀಪದಾನ ಸಮಾರಂಭವು ಜರುಗಿ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಕಾರ್ಯಕ್ರಮವು ಹೃದಯ ಸ್ಪರ್ಷಿಯಾಗಿ  ಮಾಡುವುದರೊಂದಿಗೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

 ಕಾರ್ಯಕ್ರಮದ ವೇದಿಕೆಯಲ್ಲಿ ಜೆ. ಪಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಬಿ. ಬಿ. ಹೊಳಗುಂದಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಗುರುಶಾಂತಪ್ಪ  ಮಾಳೆಕೊಪ್ಪ ಹಾಗೂ ಕು. ಅಶ್ವಿನಿ ಜೋಶಿ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ. ಬಿ. ಎಸ್. ರಾಠೋಡ್, ಮುಖ್ಯೋಪಾಧ್ಯಾಯರಾದ ಶ್ರೀ ಆರ್. ಆರ್. ಜಾಲಿಹಾಳ, ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತ ಅಧಿಕಾರಿಗಳಾದ ಶ್ರೀ ರಂಗನಾಥ. ಎಂ.ವಿ. ಶ್ರೀಮತಿ ಶಕುಂತಲಾ ಪಾಟೀಲ್ ಕಾಲೇಜಿನ ಪ್ರಾಚಾರ್ಯರಾದ ಡಿ. ಬಿ. ಪಾಟೀಲ, ಶ್ರೀ ಎಸ್. ಎಲ್. ಹುಯಿಲಗೋಳ, ಸಮಸ್ತ ಸಿಬ್ಬಂದಿ ವರ್ಗದವರು, ಸುಮಾರು 200 ಪ್ರಶಿಕ್ಷಣಾರ್ಥಿಗಳು, ಪಾಲಕರು, ವಿದ್ಯಾದಾನ ಸಮಿತಿಯ ಅಭಿಮಾನಿಗಳು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಬಸವರಾಜ ಕರಬಿಷ್ಠಿ, ಶ್ರೀ ಶಶಿಧರ ಹೊಸಳ್ಳಿ , ಶ್ರೀ ಎಸ್. ವಾಯ್. ಕಠಾರಿ ರವರು ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿ, ಉತ್ತಮವಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.  ಕಾರ್ಯಕ್ರಮವನ್ನು ಕು. ಶಾರದಾ ನಾಗಾವಿ ಹಾಗೂ ಕು. ಪ್ರಿಯಾ ಪಟ್ಟಣಶೆಟ್ಟಿ ನಿರೂಪಿಸಿದರು. ಕೊನೆಗೆ ಪ್ರೊ. ಎನ್. ಜಿ. ಚನ್ನಪ್ಪಗೌಡ್ರ ವಂದಿಸಿದರು.