ಜಿಲ್ಲೆ

ರಾಜ್ಯ, ಜಿಲ್ಲೆ ಹಾಗೂ ಶಾಲಾ ಹಂತದಲ್ಲಿ ಎಸ್.ಎಸ್.ಎಲ್.ಸಿ. ಟಾಪರ್ ವಿದ್ಯಾರ್ಥಿಗಳಿಗೆ ವಿದ್ಯಾದಾನ ಸಮಿತಿಯಿಂದ ಸನ್ಮಾನ

Gadag - Shivanand Hiremath

ಗದಗ: ವಿದ್ಯಾದಾನ ಸಮಿತಿ ಗದಗ, ವ್ಹಿ.ಡಿ.ಎಸ್.ಟಿ.ಸಿ.ಬಾಲಕರ ಹಾಗೂ ವ್ಹಿ.ಡಿ.ಎಸ್. ಶ್ರೀಮತಿ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆ ಹಾಗೂ ಶಿಕ್ಷಣ ಇಲಾಖೆ ಗದಗ ಇವರ ಸಹಯೋಗದಲ್ಲಿ ರಾಜ್ಯ, ಜಿಲ್ಲೆ ಹಾಗೂ ಶಾಲಾ ಹಂತದಲ್ಲಿ ಎಸ್.ಎಸ್.ಎಲ್.ಸಿ. ಟಾಪರ್ ಆಗಿರುವ ಕುಮಾರಿ ಅಂಕಿತಾ ಬಿ. ಕೊಣ್ಣೂರ, ಕುಮಾರಿ ಸಮೃದ್ಧಿ ಎಸ್. ಶಿದ್ಲಿಂಗ್, ಕುಮಾರಿ ರೇವತಿ ಎನ್. ಉತ್ತರಕರ ಹಾಗೂ ಕುಮಾರ ಕುಶಾಲ ಎನ್. ಗೋಕಾವಿ ಇವರೊಂದಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಫಲಿತಾಂಶ ಸುಧಾರಣೆಗಾಗಿ ಪ್ರೇರಣೆ ಮತ್ತು ಸಂವಾದ ಕಾರ್ಯಕ್ರಮ ದಿ. 24-02-2025 ರ ಸೋಮವಾರ ವ್ಹಿ.ಡಿ.ಎಸ್. ಶ್ರೀಮತಿ ಎಂ.ಬಿ. ಹುಯಿಲಗೋಳ ಬಿ.ಎಡ್. ಕಾಲೇಜಿನ ಕಲಾ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಎಲ್ಲರಿಗೂ ಪ್ರೇರಣೆಯಾಗಿರುವ ಎಸ್.ಎಸ್.ಎಲ್.ಸಿ. ಟಾಪರ್ ವಿದ್ಯಾರ್ಥಿನಿಯರು ಸಸಿಗೆ ನಿರೆರೆಯುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಅಂಕಿತಾ ಬಿ. ಕೊಣ್ಣೂರರ ತಾಯಿಯವರಾದ ಶ್ರೀಮತಿ ಗೀತಾ ಬಿ. ಕೊಣ್ಣೂರರವರು ಭಾಗವಹಿಸಿದ್ದು ವಿಶೇಷವಾಗಿತ್ತು. ನನ್ನ ಮಗಳು ಉತ್ತಮ ನಡೆ-ನುಡಿ, ಅಧ್ಯಯನಶೀಲತೆ, ಶ್ರಮಭರಿತ ಅಭ್ಯಾಸದ ಕ್ರಮ, ಬರವಣಿಗೆ ರೀತಿ, ಓದುವ ಕ್ರಮ ನಿಮಗೆಲ್ಲ ಮಾದರಿ ಎಂದರು. ಇದೇ ಸಂದರ್ಭದಲ್ಲಿ ಮುಡಿಗೆರೆಯ ಆಳ್ವಾಸ್‌ದಲ್ಲಿ ಓದುತ್ತಿರುವ ಅಂಕಿತಾ ತನ್ನ ಅಧ್ಯಯನ ಪೂರಕ, ಪ್ರಶಂಶಾತ್ಮಕ ನುಡಿಗಳ ಶುಭ ಹಾರೈಕೆಯ ವ್ಹಿಡಿಯೋ ಕ್ಲಿಪ್‌ನ್ನು ಪ್ರಸಾರಪಡಿಸಲಾಯಿತು.

ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಸಮೃದ್ಧಿ ಎಸ್. ಶಿದ್ಲಿಂಗ್‌ರವರು ವಿದ್ಯಾರ್ಥಿನಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಧ್ಯಯನ ಸಮಯ ವಿದ್ಯಾಭ್ಯಾಸದ ವಿಧಾನ, ಆರೋಗ್ಯ ಮುಂತಾದ ಅಧ್ಯಯನದ ಟಿಪ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ವಿದ್ಯಾದಾನ ಸಮಿತಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಟಾಪರ್ ಆಗಿರುವ ಕುಮಾರಿ ರೇವತಿ ಎನ್. ಉತ್ತರಕರ ತನ್ನ ಮೃದು ಸ್ವಭಾವದ ಮೂಲಕ ಪರೀಕ್ಷಾ ಭಯ, ಪರೀಕ್ಷೆ ಸಿದ್ಧತೆಯ ಬಗ್ಗೆ ಮಾತನಾಡಿದಳು. ವ್ಹಿ.ಡಿ.ಎಸ್. ಬಾಲಕರ ಪ್ರೌಢಶಾಲೆಯ ಕುಮಾರ ಕುಶಾಲ ಎನ್. ಗೋಕಾವಿ ತನ್ನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಕುರಿತು ಮಾತನಾಡುತ್ತಾ ಸತತ ಅಧ್ಯಯನಬೇಕು ಎಂದನು.

ಕಾರ್ಯಕ್ರಮದ ಉದ್ದೇಶ, ರೂಪು ರೇಷೆಗಳನ್ನು ಕುರಿತು ವಿದ್ಯಾದಾನ ಸಮಿತಿಯ ಸಿ.ಇ.ಓ. ರವರಾದ ಪಿ.ಎಚ್. ಕಡಿವಾಲರವರು ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿಯಲ್ಲಿ ಪ್ರಸ್ತುತ ಪಡಿಸಿದರು.

ನಮಗೆಲ್ಲ ಪ್ರೇರಣೆಯಾಗಿರುವ ನಾಲ್ಕೂ ಸಾಧಕರಿಗೆ ವಿದ್ಯಾದಾನ ಸಮಿತಿಯ ಅಭಿಮಾನ ಪೂರ್ವಕ ಅಭಿನಂದನೀಯ ಸನ್ಮಾನವನ್ನು ಮಾಡುವ ಮೂಲಕ ವಿದ್ಯಾದಾನ ಸಮಿತಿಯ ಕ್ರೀಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಬಿ. ಹುಯಿಲಗೋಳರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ನಮ್ಮೆಲ್ಲರ ಮುಂದೆ ಬಿಚ್ಚಿಟ್ಟಿರುವ ಈ ನಾಲ್ಕೂ ಮುತ್ತುಗಳು ನಮಗೆಲ್ಲ ಪ್ರೇರಣಾದಾಯಕವಾಗಿದ್ದು ನಿಮಗೆಲ್ಲ ಮಾದರಿಯಾಗಿರುವರು ಇವರನ್ನು ಮೀರಿಸಿ ನೀವೆಲ್ಲ ಪ್ರಯತ್ನಪೂರಕವಾಗಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬರುವ ಘನ ಸಂಕಲ್ಪವನ್ನು ಮಾಡಬೇಕು ಎಂದರು.

ವ್ಯಕ್ತಿತ್ವ ವಿಕಸನದ ಕುರಿತು ಹೆಸ್ಕಾಂನ ನಿವೃತ್ತ ಅಧಿಕಾರಿ ಶ್ರೀ ಶಬ್ಬಿರ ಮುಲ್ಲಾರವರು ಎಸ್.ಎಸ್.ಎಲ್.ಸಿ. ನಂತರ ಮುಂದೆನು ಎಂಬ ಪ್ರಶ್ನೆಗೆ ಸಮರ್ಪಕ ವಿವರ ನೀಡಿದರು.

ಉನ್ನತ ಯಶಸ್ಸನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿರೊಂದಿಗೆ ವಿದ್ಯಾದಾನ ಸಮಿತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮಲ್ಲಿನ ಅನೇಕ ಸಂಶಯ, ಕಠೀಣತೆ, ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ತಮ್ಮ ಮನಸ್ಸನ್ನು ಹಗುರ ಮಾಡಿಕೊಂಡರು.

ಕುಮಾರಿ ಶೃದ್ಧಾ ಎ. ದಹಿಂಡೆ ಹಾಗೂ ಸಂಗಡಿಗರ ಉದಯವಾಗಲಿ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಶ್ರೀ ಎಂ.ವಿ. ವಡವಿಯರು ನಿರೂಪಿಸಿದರೆ ಗಣ್ಯರನ್ನು ಗಣ್ಯರನ್ನು ಶ್ರೀ ಆರ್.ಆರ್. ಜಾಲಿಹಾಳರವರು ಸ್ವಾಗತಿಸಿದರು ಗಣ್ಯರನ್ನು ಶಿಕ್ಷಕಿ ಶ್ರೀಮತಿ ಎಸ್.ಎಸ್. ಮರಡ್ಡಿ ಪರಿಚಯಿಸಿದರು. ಕೊನೆಯಲ್ಲಿ ಶ್ರೀಮತಿ ಎಸ್.ವಿ. ಬಂಡಿಯವರು ವಂದಿಸಿದರು.