ಜಿಲ್ಲೆ

ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ ರಾಣಿ ಚೆನ್ನಮ್ಮ ಜಯಂತಿ ಆಚರಣೆ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ಹಾಗೂ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ರವರು ಕಿತ್ತೂರು ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಕುರಿತು ಪ್ರಾಚಾರ್ಯರಾದ ಶ್ರೀ ಎಂ . ಆರ್. ಡೊಳ್ಳಿನ ರವರು ಕಿತ್ತೂರು ರಾಣಿ ಚೆನ್ನಮ್ಮರವರು "ಇಡಿಗಳಾದರೆ ಬದುಕುವೆವು ಬಿಡಿಗಳಾದರೆ ಸಾಯುವೆವು" ಎಂಬ ಒಗ್ಗಟ್ಟಿನ ಮಂತ್ರ ಘೋಷಿಸಿದ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮಳ ಜೀವನ ಚರಿತ್ರೆಯನ್ನು ಮಕ್ಕಳಿಗೆ ಎಳೆ ಎಳೆಯಾಗಿ ಬಿಡಿಸಿ ಅವರ ಸಾಧನೆಯ ಬಗ್ಗೆ ಅರಿವು ಮೂಡಿಸಿದರು.
ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ ರವರು ಕಿತ್ತೂರು ರಾಣಿ ಚನ್ನಮ್ಮ ರವರ ಜೀವನ ಹಾಗೂ ವೀರ ಹೋರಾಟದ ಕುರಿತು ಮಾಹಿತಿ ನೀಡಿದರು. ಸಹ ಶಿಕ್ಷಕರಾದ ಶ್ರೀ ದೇವೇಂದ್ರಪ್ಪ ಅನ್ವೇರಿ  ರವರು "ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ , ಭೂಮಿ ನಮ್ಮದಲ್ಲ, ಈ ಪ್ರಕೃತಿ ನಮ್ಮದಲ್ಲ, ಆದರೆ ನಮ್ಮದು ಅಂತ ನಮ್ಮ ಜೊತೆ ಉಳಿಯುವುದು ಕೇವಲ ನಂಬಿಕೆ ಮತ್ತು ಸ್ಪೂರ್ತಿ ಇಂತಹ ಸ್ಪೂರ್ತಿ ಮಹಿಳೆಯರಿಗೆ ಆದರ್ಶ ಪ್ರಾಯವಾಗಿರುತ್ತದೆ ಎಂದು ಇನ್ನೂ ಅನೇಕ ವೀರ ವನಿತೆಯರ ಚರಿತ್ರೆಯೊಂದಿಗೆ ವಿವರವಾಗಿ ತಮ್ಮ ಅನಿಸಿಕೆಯ ಮೂಲಕ ವ್ಯಕ್ತಪಡಿಸಿದರು.
ಸಹ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ ರವರು ನಿರೂಪಿಸಿದರು. ಶ್ರೀಮತಿ ಶೈನಾಜ್ ನದಾಫ್ ರವರು ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಮೇಲಗಿರಿ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.