ಗದಗ: ಗದಗ ಜಿಲ್ಲೆಯಲ್ಲಿ ಬಹುತೇಕ ವಾಲ್ಮೀಕಿ ಸಮುದಾಯದ ಜನರು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಇವರು ಎಲ್ಲ ಸಮುದಾಯದವರ ಜೊತೆಗೂಡಿ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ. ನಗರದಾದ್ಯಂತ ಹಲವು ಮಹನೀಯರ ವೃತ್ತಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದು ಸ್ವಾಗತಾರ್ಹ. ಆದರೆ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಆಗದಿರುವುದು ಬೇಸರದ ಸಂಗತಿಯಾಗಿದೆ. 2025.ರ ವಾಲ್ಮೀಕಿ ಜಯಂತಿಯ ಒಳಗಾಗಿ ವಾಲ್ಮೀಕಿ ಸರ್ಕಲ್ ನಿರ್ಮಾಣವಾಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ತುಳಸಿರಾಮ ಎಚ್ಚರಿಕೆ ನೀಡಿದರು.
ಅವರು ಭಾನುವಾರ ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಆದಿಕವಿ ಶ್ರೀ ಮಹರ್ಷಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಗತ್ತಿಗೆ ಪ್ರಭು ಶ್ರೀರಾಮ ಚಂದ್ರನನ್ನು ಪರಿಚಯಿಸಿದ ಕೀರ್ತಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಉನ್ನತ ಮಟ್ಟಕ್ಕೆ ಬೆಳೆಯಲಿ ಎನ್ನುವ ಉದ್ದೇಶದಿಂದ ಮೀಸಲಾತಿಯನ್ನು ನೀಡಿ ದಾರಿದೀಪ ಆಗಿದ್ದಾರೆ. ಪ್ರತಿಯೊಬ್ಬರು ತಮ್ಮ ಜೀವನದ ಕೊನೆಯ ಅವಧಿವರಿಗೂ ಅಂಬೇಡ್ಕರ ಅವರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು
ಆರಂಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ಪೂಷ್ಪಾರ್ಪಣೆ ಸಲ್ಲಿಸಲಾಯಿತು ನಂತರ ರಾಜೇಶ್ವರಿ ಕಲಾ ಕುಟೀರ ತಂಡದ ಕುಮಾರಿ ಮೇಘನಾ ಆರ್ ವಾಲ್ಮೀಕಿ ಅವರಿಂದ ಭರತನಾಟ್ಯ ಪ್ರಧರ್ಶನ ಮೂಲಕ ಸರ್ವರನ್ನು ಸ್ವಾಗತಿಸಲಾಯಿತು
ಇದೇ ವೇಳೆ ಪ್ರತಿ ವರ್ಷದಂತೆ ಈ ವರ್ಷವೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. ವಾಲ್ಮೀಕಿ ಸರ್ಕಲ್ ನಿಂದ ಬನ್ನಿಕಟ್ಟ ಪಂಚರಹೊಂಡ, ಬಸವೇಶ್ವರ ಸರ್ಕಲ್, ಟಾಂಗಾಕೂಟ ಮಹೇಂದ್ರಕರ್ ಸರ್ಕಲ್ ಹಾಗೂ ಡಿಸಿ ಮಿಲ್ ಮಾರ್ಗವಾಗಿ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಸಂಪನ್ನಗೊಂಡಿತ್ತು
ಮರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಬಾಂಧವರು ಭಾಗವಹಿಸಿ ಸಂಭ್ರಮಿಸಿದರು
2024.ರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಅಚ್ಚುಕಟ್ಟಾಗಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗಿದೆ ಮತ್ತು ನಮ್ಮ ಪ್ರೀತಿಯ ಕರೆಗೆ ಓಗೊಟ್ಟು ಎಲ್ಲ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಸಂತೋಷದ ವಿಷಯವಾಗಿದೆ. ಗದಗ ಜಿಲ್ಲೆಯಾದ್ಯಂತ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದ ಎಲ್ಲಾ ಮುಖಂಡರಿಗೂ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಮೈ. ಬೆಳಧಡಿ ಅವರು ಸಮಸ್ತ ವಾಲ್ಮೀಕಿ ಸಮಾಜ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಅರ್ಪಿಸಿ ಮಾತನಾಡಿದರು
ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ” ಅರ್ಥಗರ್ಭಿತವಾಗಿ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಎಲ್ಲರೂ ಸೇರಿಕೊಂಡು ಆಚರಿಸೋಣ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ಗದಗ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಸಿದ್ದಮ್ಮನಹಳ್ಳಿ ಹೇಳಿದರು.
ಶೀಕ್ಷಕರಾದ ಬಾಹುಬಲಿ ಜೈನರ್ ಅವರು ಕಾರ್ಯಕ್ರಮವು ನಿರುಪಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ. ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಮಹೇಶ ಪೋತದಾರ ಪರಶಿಷ್ಠ ಪಂಗಡ ನೌಕರ ಸಂಘದ ಗದಗ ಜಿಲ್ಲಾಧ್ಯಕ್ಷರಾದ ದೆವೇಂದ್ರಪ್ಪ ತಳವಾರ. ಪಿ.ಎಸ್.ಐ. ಸಂಚಾರಿ ಪೊಲೀಸ ಅಧಿಕಾರಿಗಳಾದ ಶ್ರೀಮತಿ ಸಕುಂತಲಾ ನಾಯಕ ಪರಿಶಿಷ್ಟ ಪಂಗಡ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ವಾಲ್ಮೀಕಿ, ನಗರ ಸಭಾ ಸದಸ್ಯರಾದ ನಾಗರಾಜ ತಳವಾರ. ನಗರ ಸಭಾ ಸದಸ್ಯಣಿಯವರಾದ ಶ್ರೀಮತಿ ಲಕ್ಷ್ಮಿಅನಿಲಕುಮಾರ ಸಿದ್ದಮ್ಮನಹಳ್ಳಿ. ಕೆ.ಡಿ.ಪಿ. ಸದಸ್ಯರಾದ ಎಸ್.ಎನ್. ಬಳ್ಳಾರಿ ಗುರುಗಳು, ವಸಂತಕುಮಾರ ಸಿದ್ದಮ್ಮನಹಳ್ಳಿ ಗೊವೀಂದರಾಜ ಪನ್ನೂರ ಅರೂಣ ಬೆಳಧಡಿ ಶೀವಾನಂದ ತಳವಾರ ವಸಂತ ವಾಲ್ಮೀಕಿ ಅನಿಲ ಪೂಜಾರ ಶ್ರೀಕಾಂತ ಪೂಜಾರ ವಿಜಯ ಕುರಗೋಡ ದತ್ತು ಬೆಳಧಡಿ ಕಿರಣ ನಾಯ್ಕರ ಮಾರುತಿ ಕಾತರಕಿ ಈಶ್ವರ ರೌಡೂರು ರಮೇಶ ಹೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.