ವಿಜಯವಾಣಿ ಸುದ್ದಿಜಾಲ ಗದಗ
ಶರಣರ ಕಲ್ಯಾಣ ಸಾಮ್ರಾಜ್ಯದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು ದೇವರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಮತ್ತು ದಿಟ್ಟ ನೇರ ಉತ್ತರ ನೀಡಿ ಅಕ್ಕಮಹಾದೇವಿ ಎಲ್ಲ ಶರಣರ ಮೆಚ್ಚುಗೆಗೆ ಪಾತ್ರರಾದರು. ಅಕ್ಕಮಹಾದೇವಿಯ ವಚನಗಳು ಮಹಿಳೆಯರ ಬದುಕು ಬದಲಿಸುವಂತಹ ಮತ್ತು ಸರ್ವರ ಬದುಕಿಗೆ ತಿರುವು ನೀಡುವಂತಹ ವಚನಗಳಾಗಿವೆ ಎಂದು ಯೋಗ ಮತ್ತು ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ ತಿಳಿಸಿರುವರು.
ನಗರದ ಬಸವ ಯೋಗ ಮಂದಿರದಲ್ಲಿ ಬುಧವಾರ ಜರುಗಿದ ಸಾಪ್ತಾಹಿಕ ವಚನ ಶ್ರಾವಣ ಮುಕ್ತಾಯ ಕಾರ್ಯಕ್ರಮದಲ್ಲಿ ವಚನ ಉಪನ್ಯಾಸ ನಿಡಿದ ಮಾತನಾಡಿದ ಅವರು, ಅಕ್ಕ ಮಹಾದೇವಿ ಇಡೀ ಜೀವನದಲ್ಲಿ ನೋವು ಅನುಭವಿಸಿದ್ದಾರೆ. ನೋವು, ಸಂಕಟ, ಅವಮಾನ, ಸುಖ, ದುಃಖಗಳನ್ನು ಅನುಭವಿಸಿ ಸದೃಢತೆ ಬೆಳೆಸಿಕೊಂಡರು. ಇಂದು ಸಹ ಮಹಿಳೆಯರು ನಾನಾ ಸಮಸ್ಯೆಗಳನ್ನು ಎದುರಸುತ್ತಿದ್ದಾರೆ. ದಿನೇ ದಿನ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲಿವೆ. ಅದಕ್ಕಾಗಿ ಕಾನೂನಿನ ಅರಿವು ಮಹಿಳೆಯರಿಗೆ ಇರಬೇಕು ಮಹಿಳೆಯ ಸರ್ವ ಸಮಸ್ಯೆಗಳಿಗೆ ಶಿವಶರಣರ ವಚನಗಳು ಶಾಶ್ವತ ಪರಿಹಾರಗಳಾಗಿವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಶಿವನಗೌಡ ಗೌಡರ ಮಾತನಾಡಿ, ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮವು ಸಮಾಜಮುಖಿ ಕಾರ್ಯಕ್ರಮವಾಗಿದೆ. ವೈಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಇನ್ನೂ ನಮ್ಮ ಭಾವನೆಗಳು ಬದಲಾಗಿರುವುದಿಲ್ಲ. ಸಮಾಜದಲ್ಲಿ ಕಂದಾಚಾರ, ಮೂಢ ನಂಬಿಕೆ, ಅನೀತಿ ಅತ್ಯಾಚಾರಗಳು ನಡೆಯುತ್ತಲಿವೆ. ಇವುಗಳ ನಿಯಂತ್ರಣಕ್ಕೆ ವಚನ ಶ್ರಾವಣದಂತ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಮದು ಸೂಚಿಸಿದರು.
ಎಸ್. ಕೆ. ನಾಲತ್ವಾಡಮಠ, ಕೆ. ಎಸ್. ಪಲ್ಲೆದ, ವಿಜಯಲಕ್ಷಿ$್ಮ ಆನೆಹೊಸೂರು, ವೀಣಾ ಗೌಡರ ಇತರರು ಇದ್ದರು.