ವಿಜಯವಾಣಿ ಸುದ್ದಿಜಾಲ ಗದಗ
ಕೈಗಾರಿಕೆಗಳ ಸ್ಥಾಪನೆ, ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಟೌನ್ಶಿಪ್ಗಳು ಬೆಳವಣಿಗೆ ಆದರೆ ಮಾತ್ರ ಪ್ರಗತಿ ಹೊಂದಲು, ನಿರುದ್ಯೋಗ ನಿವಾರಿಸಲು ಸಾಧ್ಯ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯ ಬಿ.ವಿ. ಗೋಪಾಲರಡ್ಡಿ ಹೇಳಿದರು.
ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ನಡೆಯುತ್ತಿರುವ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ "ಗದಗ ಉತ್ಸವ'ದ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಪ್ರಗತಿಗೆ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೈಗಾರಿಕೆಗಳು ನಿರೀೆಯಂತೆ ಪ್ರಗತಿಯಾಗದ ಹಿನ್ನೆಲೆ ದೇಶದ ಪ್ರಗತಿಗೆ ಹಾಗೂ ನಿರುದ್ಯೋಗ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯ ಮಧುಸೂದನ ಪುಣೇಕರ ಮಾತನಾಡಿ, ಪ್ರತಿ ವರ್ಷ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಉತ್ಸವ ನಡೆಸಿ ಉತ್ಪಾದಕರಿಗೆ ಹಾಗೂ ಗ್ರಾಹಕರಿಗೆ ಪೂರಕ ವೇದಿಕೆ ಕಲ್ಪಿಸುತ್ತ ಬಂದಿದೆ ಎಂದರು.
ಚಂದ್ರು ಬಾಳಿಹಳ್ಳಿಮಠ ಅವರು ಮಾತನಾಡಿದರು. ಸಾನ್ನಿಧ್ಯವನ್ನು ಅಭಿನವ ಬೂದೀಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ದೇವದಾಸ ಕಾಮತ ಹಾಗೂ ಎಸ್. ಪಿ. ಸಂಶಿಮಠ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೇಷ್ಠ ವರ್ತಕ ಪ್ರಶಸ್ತಿಯನ್ನು ಬಸವರಾಜ ಪುರ್ತಗೇರಿ, ಲಿಂಗಬಸಯ್ಯ ಮಠದ, ವೀರಣ್ಣ ಬೇವಿನಮರದ ಅವರಿಗೆ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಭೂಷಣ ಶಹಾ, ಗವಿಸಿದ್ದಪ್ಪ ಪಲ್ಲೇದ, ಬಸವರಾಜ ಹುಡೇದ, ಸೋಮಶೇಖರ ನರೋಣಿ ಅವರಿಗೆ ನೀಡಿ ಗೌರವಿಸಲಾಯಿತು.
ರಾಜಣ್ಣ ಗುಡಿಮನಿ, ತಾತನಗೌಡ ಪಾಟೀಲ, ವೀರೇಶ ಕೂಗು, ಪ್ರಕಾಶ ಉಗಲಾಟದ, ರಾಜಣ್ಣ ಮಲ್ಲಾಡದ, ನಾಗೇಶ ಹುಬ್ಬಳ್ಳಿ, ಸೋಮನಾಥ ಜಾಲಿ, ಹರೀಶಕುಮಾರ ಶಹಾ, ಎಸ್. ಆರ್.ನಾಲತ್ವಾಡಮಠ, ಬಸವರಾಜ ಅಂಗಡಿ, ಶಿವಕುಮಾರ ಪಾಟೀಲ ಹಲವರು ಇದ್ದರು