ಶಿವಾನಂದ ಹಿರೇಮಠ ಗದಗ
ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಉರ್ದು ಶಾಲೆಗಳ ಶೈಕ್ಷಣಿಕ ಪ್ರಗತಿ ವರ್ಷದಿಂದ ವರ್ಷಕ್ಕೆ ಕುಂಠುತ್ತ ಸಾಗಿದೆ. 2021ರಲ್ಲಿ 99.38ರಷ್ಟಿದ್ದ ಎಸೆಸೆಲ್ಸಿ ಲಿತಾಂಶ 2025ಕ್ಕೆ 56.38ಕ್ಕೆ ಕುಸಿದಿದೆ. ಮಕ್ಕಳ ಆಸಕ್ತಿ ಕೊರತೆ ಮತ್ತು ಉರ್ದು ಮಾಧ್ಯಮ ಶಾಲೆಗಳ ಮೇಲುಸ್ತುವಾರಿ ವಹಿಸುವ ಶಿಕ್ಷಕರ ಕೊರತೆ ಹಾಗೂ ಶಿಕ್ಷರ ಆಸಕ್ತಿ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಉರ್ದು ಶಾಲೆಗಳ ಲಿತಾಂಶ ಕುಸಿದಿದೆ ಎಂದು ಹೇಳಲಾಗುತ್ತಿದೆ. ಪರೀಕ್ಷಕೆಗಳಲ್ಲಿ ಶಿಕ್ಷಣ ಇಲಾಖೆಯ ಅತೀಯಾದ ಬೀಗಿಹಿಡಿತವು ಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಹಾಗಾಗಿ ಉರ್ದು ಶಾಲೆಗಳು ಆಟಕ್ಕೂಂಟು, ಲೆಕ್ಕಕ್ಕಿಲ್ಲದಂತೆ ಇವೆ. ಕಳೆದ 5 ವರ್ಷಗಳಲ್ಲಿ ಎಸೆಸೆಲ್ಸಿ ಲಿತಾಂಶ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಉರ್ದು ಮಾಧ್ಯಮ ವಿದ್ಯಾಥಿರ್ಗಳ ಭವಿಷ್ಯ ಡೋಲಾಯಮಾನವಾಗಿದೆ. ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉರ್ದು ಮಾಧ್ಯಮ ವಿದ್ಯಾಥಿರ್ಗಳು ಸ್ಪರ್ಧೆ ನೀಡದಂತಹ ಸ್ಥಿತಿ ಉದ್ಭವಿಸುತ್ತಿದೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿ ಮತ್ತು ಖಾಸಗಿ ಶಾಲೆಗಳು ಸೇರಿ ಒಟ್ಟು 13 ಹೈಸ್ಕೂಲ್ ಉರ್ದು ಶಾಲೆಗಳಿವೆ. ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷೆ ಸೇರಿದಂತೆ ಇತರೆ ಭಾಷಿಕ ನಿರ್ವಾಹಕರು, ಸಂಯೋಜಕರು ಜಿಲ್ಲೆಯಲ್ಲಿ ಇದ್ದಾರೆ. ಹಾಗಾಗಿ, ಇತರೆ ಭಾಷೆಗಳ ವಿಷಯಗಳ ಲಿತಾಂಶಗಳ ಮೇಲೆ ನಿರಂತರ ಉಸ್ತುವಾರಿ ವಹಿಸಲಾಗುತ್ತಿದೆ. ಆದರೆ, ಉರ್ದು ಭಾಷೆ ಬಲ್ಲವರು, ಬರೆಯಲು ಮತ್ತು ಓದಲು ಬರು ವಿಷಯ ಪರಿಣೀತರು, ಪರಿವೀಕ್ಷರು ಮತ್ತು ಮೇಲುಸ್ತುವಾರಿಗಳು ಇಲ್ಲ. ಹಾಗಾಗಿ ಹೈಸ್ಕೂಲ್ ಉರ್ದು ಮಾಧ್ಯಮ ಎಸೆಸೆಲ್ಸಿ ಲಿತಾಂಶ ಕುಸಿಯುತ್ತಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಪರಿವೀಕ್ಷಣೆ ಸಾಧ್ಯವಿಲ್ಲ.
ಜಿಲ್ಲೆಯ ಉರ್ದು ಶಾಲೆಗಳ ವಿಷಯವಾರು ಪರೀವಿಕ್ಷಣೆ ಸಾಧ್ಯವಾಗುತ್ತಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಶಿಕ್ಷಕರು ಮತ್ತು ಮಕ್ಕಳ ನಡುವಿನ ಭಾಷಾ ಸಮಸ್ಯೆ, ಅಹಕಾರ ಕೊರತೆಯಿಂದ ಸಮಗ್ರ ಎಸೆಸೆಲ್ಸಿ ಲಿತಾಂಶಗಳ ಮೇಲೆ ಪರಿಣಾಮ ಬೀರುತ್ತಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಿಆರ್ಪಿ, ಸಂಪನ್ಮೂಲ ವ್ಯಕ್ತಿಗಳು ಪರೀಾ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿ ಬಗ್ಗೆ ಮೇಲುಸ್ತುವಾರಿ ವಹಿಸುತ್ತಾರೆ. ಆದರೆ, ಹೈಸ್ಕೂಲ್ನಲ್ಲಿ ಸಿಆರ್ಪಿಗಳು ಶೈಕ್ಷಣಿಕ ಮೇಲುಸ್ತುವಾರಿ ವಹಿಸಲು ಶಿಷ್ಠಾಚಾರ ತಡೆಗೋಡೆ ಬರುತ್ತಿದೆ. ಇನ್ನೂ, ಜಿಲ್ಲೆಯಲ್ಲಿ ಓರ್ವ ಉರ್ದು ಶಿಕ್ಷಣ ಸಂಯೋಜಕರು ಇದ್ದರೂ ಸಹ, ಎಲ್ಲ ಶಾಲೆಗಳ ಪರಿವೀಕ್ಷಣೆ ಅವರಿಂದ ಸಾಧ್ಯವಿಲ್ಲದಾಗಿದೆ.
ಶೇ. 9.09 ಲಿತಾಂಶ:
ಗಜೇಂದ್ರಗಡ, ಶಿರಹಟ್ಟಿ ಪಟ್ಟಣದ ಉರ್ದು ಹೈಸ್ಕೂಲ್ ಮತ್ತು ರೋಣ ಪಟ್ಟಣದ ಅಂಜುಮನ್ ಉರ್ದು ಶಾಲೆಗಳ ಎಸೆಸೆಲ್ಸಿ ಲಿತಾಂಶಗಳು ಶೇ. 70ಕ್ಕಿಂತ ಅಧಿಕ ದಾಖಲಾಗಿ, ಸಮಾದಾನ ತಂದಿದೆ. ಆದರೆ, ಗದಗ ನಗರದ ಆಂಗ್ಲೋ ಉರ್ದು ಬಾಲಕರ ಶಾಲೆಯಲ್ಲಿ ಪರೀೆಗೆ ಕುಳಿತ 22 ವಿದ್ಯಾಥಿರ್ಗಳ ಪೈಕಿ ಕೇವಲ 2 ವಿದ್ಯಾಥಿರ್ಗಳು ಪಾಸಾಗಿದ್ದಾರೆ. ಶೇ. 9.09 ಲಿತಾಂಶ ದಾಖಲಾಗಿ, ಕಳಪೆ ಸಾಧನೆ ಮಾಡಿದೆ. ಶಿಕ್ಷಕರ ಕಾರ್ಯಕ್ಷಮತೆ ಬಗ್ಗೆಯೂ ಪ್ರಶ್ನೆ ಉದ್ಭವಿಸಿದೆ.