ಗದಗ: ಶಿರಹಟ್ಟಿ ತಾಲೂಕಿನ ಗ್ರಾಮವಾದ ಹರಿಪೂರ್ ಗ್ರಾಮದ ಶ್ರೀ ಈರಣ್ಣ ಯಾದಗಿರಿ ಇವರ ಮಹಾಮನೆಯಲ್ಲಿ ಶಿವಶರಣ ಆದಯ್ಯ ಶರಣರ ಜೀವನ ಕುರಿತು ಉಪನ್ಯಾಸ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಕೆ ಲಮಾಣಿ ಶಿರಹಟ್ಟಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮಾತನಾಡಿ ಸಮಾಜವು ಶುಭ್ರ ಹಾಗೂ ಸ್ವಚ್ಛತೆಯ ಸಮಾಜ ನಿರ್ಮಾಣಕ್ಕೆ ತಾಯಿಂದಿರು ಮಹಿಳೆಯರು ತಮ್ಮ ಮಕ್ಕಳನ್ನು ತಿದ್ದುವ ಮೂಲಕ ಸಂಸ್ಕಾರ ನೀಡಿ ಭ್ರ‍್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಹೆಸರಾಂತ ವೈದ್ಯರಾದ ಸುನಿಲ್ ಬುರಬುರೆ ಅವರು ಉದ್ಘಾಟಿಸಿ ಮಾತನಾಡಿದರು ಉಪನ್ಯಾಸಕರಾಗಿ ಶ್ರೀ ಹೊನ್ನಪ್ಪ ಪಲ್ಲೇದ್ ಮಾತನಾಡಿ ಸೌರಾಷ್ಟ್ರದಿಂದ ಲಕ್ಷ್ಮೇಶ್ವರ ನಗರಕ್ಕೆ ಸೋಮೇಶ್ವರ ಬರಲು ಅವರು ನಡೆದುಕೊಂಡ ರೀತಿ ಶ್ರದ್ಧ ಭಾವನೆಯಿಂದ ತಮ್ಮ ಜೀವನವನ್ನೇ ಲಕ್ಷ್ಮೇಶ್ವರದ ಸೋಮೇಶ್ವರನ ಹತ್ತಿರ ಕಳೆದರೂ ಎಂಬ ಇಂದಿಗೂ ವಾಡಿಕೆ ಇದೆ ಎಂದು ಉತ್ತಮ ಉಪನ್ಯಾಸವನ್ನು ನೀಡಿದರು.
ಮುಖ್ಯ ಅತಿಥಿಗಳಾದ ಶ್ರೀ ಎಚ್ ಡಿ ಮಾಗಡಿ ಮಾತನಾಡಿ ಸರ್ವರ ಹಿತಕ್ಕಾಗಿ ಜೀವನವನ್ನು ಪಾವನ ಮಾಡಿಕೊಂಡ ಶರಣರ ನುಡಿಗಳಿಂದ ಇಂದು ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗಿದೆ ಸಮಾಜದಲ್ಲಿ ಉತ್ತಮ ಕಾರ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.
ಶ್ರೀ ಚಂದ್ರನ ನೂರಶೆಟ್ಟರ್ ಮಾತನಾಡಿ ಇರುವ ಜೀವನವನ್ನು ಶರಣರ ವಿಚಾರದ ಮೂಲಕ ತಿಳಿದುಕೊಂಡು ಬದುಕಿ ಸುಖಮಯ ಜೀವನಕ್ಕೆ ನಾವು ಕಾರಣರಾಗಬೇಕೆಂದು ಹೇಳಿದರು.
ಶ್ರೀ ಕೆ ಎ ಬಳಿಗೇರ್ ಮಾತನಾಡಿ ಆದಯ್ಯನಂತ ಅರಿವಿನ ವಿಚಾರ ನೀಡಿದಂತಹ ಶರಣ ಸೋಮನಾಥನನ್ನು ನಮ್ಮ ನಾಡಿನಲ್ಲಿ ಸ್ಥಾಪಿಸಲು ಅವನ ಭಕ್ತಿ ಅವನ ವಚನಗಳ ನಿಷ್ಠೆ ಕಾರಣವಾಗಿ ನಮ್ಮ ನಾಡಿನಲ್ಲಿ ಉತ್ತಮ ಶರಣನಾಗಲು ಕಾರಣವಾಯಿತು ಎಂದು ಹೇಳಿದರು.
ಶ್ರೀಮತಿ ನಂದಕ ಕಪ್ಪತ್ತನವರ್ ಮಾತನಾಡಿ ಇಂದಿನ ಸಮಾಜದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಮತ್ತು ಜಾಗೃತಿ ಅತಿ ಅವಶ್ಯವಾಗಿದೆ ಅದನ್ನು ಎಲ್ಲರೂ ಮಾಡಬೇಕೆಂದು ಉತ್ತಮ ಮಾತುಗಳ ನಾಡಿದರು
ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ಶ್ರೀಮತಿ ಶಾಂತಕ್ಕ ಪಾಟೀಲ್ ಶ್ರೀಮತಿ ಗೀತಾ ಹಲಸೂರ ವಚನವನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಎಂ ಎ ಮಕಾನದಾರ ನೆರವೇರಿಸಿದರು. ಸ್ವಾಗತವನ್ನು ಶ್ರೀ ಬಿ ಎಫ್ ಬಂತಿ ಹಾಗೂ ವಂದನೆಗಳನ್ನು ಶ್ರೀ ಬಸವರಾಜ್ ಬೋರಶೆಟ್ಟರ್ ವಂದನೆಗಳನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಎಚ್ ಎಮ್ ದೇವಗೇರಿ ಈರಣ್ಣ ಯಾದಗಿರಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದರು ಗಿರೀಶ್ ಚಿಂಚಲಿ. ಕದಡಿ ಮುಗಳಿ. ಕಲಾಲ್, ವೆಂಕಟೇಶ ಅರ್ಕಸಾಲಿ ಇನ್ನೂ ಅನೇಕ ಮಹನೀಯರು ಹಾಗೂ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಬಹಳ ಸಂತೋಷ ಸಂಭ್ರಮದಿAದ ಅಪಾರ ಸಂಖ್ಯೆಯಲ್ಲಿ ಶರಣರು ಹಾಗೂ ಶರಣಿಯರು ಸೇರಿ ಕಾರ್ಯಕ್ರಮವನ್ನು ಸಂಭ್ರಮದಿAದ ಯಶಸ್ವಿಗೊಳಿಸಿದರು.