ಜಿಲ್ಲೆ

ಜಿ ಎಸ್ ಸಜ್ಜನವರಿಂದ ಉದ್ಯಾನವನದಲ್ಲಿ ಉದಯ ಸಂಗೀತ

Gadag - Shivanand Hiremath

ಗದಗ: ಸಂಗೀತ ಮನಸ್ಸಿಗೆ ಸಂತೋಷ ನೀಡುವ ಕಲೆಯಾಗಿದ್ದು ನಿವೃತ್ತಿ  ನಂತರ ಸಂಗೀತವನ್ನು ಒಂದು ಹವ್ಯಾಸವಾಗಿ  ಹಾಡುವ ರುಡಿಯನ್ನು ಬೆಳೆಸಿಕೊಂಡಿರುತ್ತೇನೆ ಎಂದು  ಹವ್ಯಾಸಿ ಸಂಗೀತಗಾರ ಜಿ ಎಸ್ ಸಜ್ಜನ್ ಅವರು ಹೇಳಿದರು. ವಿವೇಕಾನಂದ ಬಡಾವಣೆಯ ಹಾಗೂ ನಿಸರ್ಗ ಬಣಾವಣೆಯ ವಾಯು ವಿಹಾರ ಬಳಗದಿಂದ ಏರ್ಪಡಿಸಿದ್ದ ಉದ್ಯಾನವನದಲ್ಲಿ ಉದಯ ಸಂಗೀತ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಹಾಡಿ  ಅವರು ಮಾತನಾಡುತ್ತಾ ಸಂಗೀತವು  ದ್ವೇಷ ಅಸೂಯೆ ವೈಶಮ್ಯವನ್ನು  ಹೋಗಲಾಡಿಸಿ ಪ್ರೀತಿ ಪ್ರೇಮ ಮಧುರ ಭಾವನೆಯನ್ನು ಬೆಳೆಸುವ ಶಕ್ತಿಯನ್ನು ಸಂಗೀತ ಹೊಂದಿದೆ ಎಂದು ಅವರು ಹೇಳಿದರು.

 ನಿವೃತ್ತ ಕೃಷಿ ಅಧಿಕಾರಿ ಕೆ ಐ  ಕುರುಗೋಡ ಅವರು ಮಾತನಾಡಿ ಸಂಗೀತವನ್ನು  ಯಾವ ಭಾಷೆಯಲ್ಲಿ ಹಾಡಿದರು ಸಂಗೀತಕ್ಕೆ ಮನಸ್ಸನ್ನು ಆಕರ್ಷಿಸುವ ಶಕ್ತಿ ಇದ್ದು ಸಂಗೀತವು ಭಾರತೀಯ ಪುರಾತನ ಸಂಸ್ಕೃತಿಯ ಕಲೆಯಾಗಿದೆ ಎಂದವರು ಹೇಳಿದರು.
  ಶ್ರೀ ಜಿ ಎಸ್ ಸಜ್ಜನವರು ತತ್ವ ಪದಗಳನ್ನು ಚಿತ್ರಗೀತೆಯನ್ನು ಅತ್ಯಂತ ಸರಳವಾಗಿ ಕಟ್ಟಿ ಹಾಡುವ  ಅವರ ಹವ್ಯಾಸ ಹೀಗೆ ಮುಂದುವರೆಯಲಿ ಎಂದು  ನಿವೃತ್ತ ಮುಖ್ಯೋಧ್ಯಾಪಕ ಎಸ ಐ ಪಟ್ಟೇದ್  ಅವರು ಹೇಳಿದರು.
 ನಿವೃತ್ತ ಸೈನಿಕ ಎಸ್ಎನ್ ಮಡಿವಾಳವರ್   ಮಾತನಾಡಿ ಉದ್ಯಾನವನದಲ್ಲಿ ಉದಯ ಸಂಗೀತ ಉತ್ತಮವಾಗಿ ಮೂಡಿ ಬರುತ್ತಿದ್ದು  ಸಂಗೀತ ಆಸಕ್ತರಿಗೆ ಉಚಿತ ಸಂಗೀತ ಕಾರ್ಯಕ್ರಮ ಪ್ರತಿ ರವಿವಾರ ಆಯೋಜಿಸುತ್ತಿರುವುದು ಅನುಕರಣೆಯವಾಗಿದೆ ಎಂದವರು ಹೇಳಿದರು. ಸಭೆಯಲ್ಲಿ ಶಿವನಗೌಡ ಮೂಲಿಮನಿ, ಮನೋಹರ್ ಸಾಸವಿಹಳ್ಳಿ, ಎಸ್ ಎನ್ ಮಡಿವಾಳರ್, ಬೆನಹಾಳ್, ಕಮತರ್, ರಾಮಣ್ಣ ಕಾಶಪ್ಪನವರ್, ನಿವೃತ್ತ ಪ್ರಾಚಾರ್ಯ ಜಿಎಸ್‌ ಯತ್ನಟ್ಟಿ, ಸುಧೀರ್ ಪಾಟೀಲ್ , ಮಂಗಳೂರ ಆಪ್ಟಿಕಲ್ಸ್, ಉಪಸ್ಥಿತರಿದ್ದು  ಗೌರವ ಸಮರ್ಪಿಸಿದರು. ವರದಿ. ವಾಯು ವಿಹಾರ ಬಳಗ ಗದಗ್ ವಿವೇಕಾನಂದ ಬಡಾವಣೆ.