ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 804 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ, ಅನುಸಾರದಂತೆ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಸುದೀರ್ ಸಭೆ ಜರುಗಿತು. ಪ್ರಮುಖವಾಗಿ ಬಿಂಕದಟ್ಟಿ ಝೂನಲ್ಲಿ ಸಾರಿ ಜೀಪ್ ಆರಂಭಿಸುವ, ರಾಜ್ಯ ಸರ್ಕಾರ ಬಜೆಟ್ನಲ್ಲಿ ಒದಗಿಸಿದ ಪುರಾತತ್ವ ಕ್ಷೇತ್ರಗಳ ಸಂರಕ್ಷಣೆ ಮತ್ತು ಪುನರುಜ್ಜೀವ ಕುರಿತು, ಲಕ್ಕುಂಡಿ ಅಭಿವೃದ್ಧಿಯ ಕುರಿತು ಮತ್ತು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕುರಿತು ವಿಸತ ಚರ್ಚೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ಲಕ್ಕುಂಡಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಪ್ರವಾಸಿಗರು ಸಂಚರಿಸುವ ಮಾರ್ಗದ ನೀಲ ನಕ್ಷೆ ತಯಾರಿಸುವುದು ಸೂಕ್ತ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನಿಡಬೇಕು. ಬಜೆಟ್ನಲ್ಲಿ ಘೋಷಣೆಯಂತೆ ರಾಜ್ಯದಲ್ಲಿ 10ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ 50 ಕೋಟಿ ಅನುದಾನ ಮೀಸಲಿದೆ. ಬಜೆಟ್ಟಿನ 5 ಕೊಟಿಯಲ್ಲಿ ಲಕ್ಕುಂಡಿಯಲ್ಲಿ ಮೂಲಬೂತ ಸೌಕರ್ಯ ಮತ್ತು ಇತರೆ ಕ್ಷೇತ್ರಗಳ ಅಭಿವೃದ್ಧಿ ನೀಲ ನೆ ತಯಾರಿಸಬಹುದು. ಅಭಿವೃದ್ಧಿ ಪಡಿಸಲು ಆಧ್ಯಾತಾ ಪಟ್ಟಿ ಸಲ್ಲಿಸಲು ಸಭೆ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಲಕ್ಕುಂಡಿಯ ಕಾಶಿ ವಿಶ್ವನಾಥ ದೇವಾಲಯ ಹತ್ತಿರದಲ್ಲಿ ಪ್ರವಾಸಿಗರ ಮೂಲಭೂತ ಸೌಕರ್ಯಕ್ಕಾಗಿ ಭೂಮಿ ಲಭ್ಯತೆ ಮತ್ತು ಅನುದಾನ ಇದೆ. ಜತೆಗೆ ಗದಗ ಕೊಪ್ಪಳ್ಳ ಹೆದ್ದಾರಿಯಲ್ಲೂ ಮೂಲಭೂತ ಸೌಕರ್ಯ (ಶೌಚಾಲಯ) ನಿರ್ಮಾಣ ಮಾಡಬಹುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಗೋವಾ ದಿಂದ ಗದಗ ಕೊಪ್ಪಳ ಮಾರ್ಗವಾಗಿ ಹಂಪಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಅಧಿಕವಿದೆ. ಹಾಗಾಗಿ ಲಕ್ಕುಂಡಿ ಸಮೀಪದ ಹೆದ್ದಾರಿ ಮಾರ್ಗದಲ್ಲಿ ನಾಮ ಫಲಕ ಅಳಲವಡಿಸಲು ಸೂಚಿಸಲಾಯಿತು. ಲಕ್ಕುಂಡಿ ಒಳ ಬರುವ ಮತ್ತು ಹೊರ ಹೋಗುವ ಹೆದ್ದಾರಿಯಲ್ಲಿ ಎರಡು ಪ್ರವೇಶ ದ್ವಾರಗಳು ನಿರ್ಮಾಣದ ವಿಷಯವೂ ಚರ್ಚೆ ಆಯಿತು. ಪ್ರವೇಶ ದ್ವಾರಗಳನ್ನು ಕಲ್ಲಿನ ಕಮಾನುಗಳ ಮೂಲಕ ನಿಮಿರ್ಸುವುದು ಸೂಕ್ತ ಎಂದು ಅಧಿಕಾರಿಗಳ ಒತ್ತಾಸೆ ಕೇಳಿ ಬಂದಿತು.
ಪ್ರಚಾರಕ್ಕೆ 50 ಲಕ್ಷ ಅನುಮೋದನೆ:
ಲಕ್ಕುಂಡಿಯಲ್ಲಿ ಮಾಹಿತಿ ಫಲಕಗಳು ಮತ್ತು ಇತಿಹಾಸ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು 5 ಪುಸ್ತಕ ಪ್ರಕಟನೆ, ಪುನರ್ ಮುದ್ರಣ, ಲಕ್ಕುಂಡಿ ಮಾಹಿತಿ ಕೈಪಿಡಿ ಮುದ್ರಣ ಮತ್ತು ಲಕ್ಕುಂಡಿಗೆ ಸಂಬಂಧಿಸಿದಂತೆ 10 ವಿಡಿಯೋಗಳ ನಿರ್ಮಾಣಕ್ಕೆ 89 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 50 ಲಕ್ಷ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಅಧಿಕಾರಿಗಳು ಮಾಹಿತಿ ನೀಡಿದರು. ಆದಷ್ಟು ಬೇಗ ಈ ಕಾರ್ಯವವನ್ನು ಆರಂಭಿಸಲು ಸಚಿವರು ಸೂಚಿಸಿದರು.
ಲಕ್ಕುಂಡಿಯಲ್ಲಿ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮತ್ತು ಪುನರುಜ್ಜೀವನ ಕುರಿತು 7 ರಿಂದ 8 ಮನೆಗಳು ಸ್ಥಳಾಂತರ ಮಾಡಬೇಕಿದೆ. ಮನೆಗಳ ಮೌಲ್ಯವನ್ನು ಗುರುತಿಸಿ, ಪರಿಹಾರ ನೀಡಿ ಸ್ಥಳಾಂತರಿಸಬೇಕಿದೆ. ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಲಕ್ಕುಂಡಿ ಜತೆಗೆ ಕಪ್ಪತಗುಡ್ಡದಲ್ಲಿ ುಡ್ ಕಾರ್ನರ್, ಸಾರಿ ಆರಂಭಿಸುವ ಮತ್ತು ಬಿಂಕದಟಕ್ಟಿ ಝೂನಲ್ಲಿ ನೈಟ್ ಸಾರ್ ಜೀಪ್ ಆರಂಭಿಸುವುದಕ್ಕೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರಿಧರ, ಜಿಪಂ ಸಿಇಓ ಭರತ್ ಎಸ್, ಎಸ್ಪಿ ರೋಹನ್ ಜಗದೀಶ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣ ಗೋಗೇರಿ, ಸದಸ್ಯ ಸಿದ್ದು ಪಾಟೀಲ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ್ವರ ವಿಬೂತಿ, ಕನ್ನಡ ಮತ್ತು ಸಂಸತಿ ಇಲಾಖೆ ಅಧಿಕಾರಿ ವಿರಯ್ಯಸ್ವಾಮಿ, ವಿವೇಕಾನಂದಗೌಡ ಪಾಟೀಲ, ವಸಂತ ಮಡ್ಲೂರು, ಜೆ.ಕೆ. ಜಮಾದಾರ, ಅಶೋಕ ಮಂದಾಲಿ ಇತರರು ಇದ್ದರು.
ಸಚಿವರ ಸೂಚನೆಗಳು:
* ಲಕ್ಕುಂಡಿ ಪುರಾತತ್ವ ಸ್ಥಳಗಳ ಸಂರಕ್ಷಣೆ ಮತ್ತು ಪುನರುತ್ಥಾನಕ್ಕೆ 1.80 ಕೋಟಿ ಲಭ್ಯತೆ ಇದೆ. 10 ತಿಂಗಳೊಳಗಾಗಿ ಕಾಮಗಾರಿ ರ್ಪೂಣಗೊಳಿಸಲು ಸೂಚನೆ
* ಲಕ್ಕುಂಡಿಯ ದಂಡಿನ ದುರ್ಗಮ್ಮ ಕೆರೆ, ಹಾಲಗುಂಡಿ ಕೆರೆ ಅಭಿವೃದ್ಧಿ ನಿರ್ಣಯಿಸಲಾಗಿದೆ. ಈ ಕರೆ ಸಣ್ಣ ನೀರಾವರಿ ಇಲಾಖೆಗೆ ಒಳಪಡವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆಯಬೇಕು ಎಂದು ಸಚಿವರು ತಿಳಿಸಿದರು.
* ಲಕ್ಕುಂಡಿಯನ್ನು ಸಾಂಸತಿಕ ಗ್ರಾಮವಾಗಿ ಮಾರ್ಪಡಿಸುವ ಕುರಿತು ವರದಿ ಸಿದ್ಧಪಡಿಸಲು ಸೂಚನೆ.
* ಲಕ್ಕುಂಡಿ ಯಾತ್ರಿ ನಿವಾಸ ಅಭಿವೃದ್ಧಿಗೆ ಸೂಚನೆ.
* ಕಪ್ಪತಗುಡ್ಡದಲ್ಲಿ ಎರಡು ಸಫಾರಿ ಜೀಪ್ ಖರೀದಿ ಬಗ್ಗೆ ಚಚೆ. ಆ. 15 ರ ಒಳಗಾಗಿ ಆರಂಭಿಸಲು ಸಚಿವರು ಸೋಚನೆ:
* ಕಪ್ಪತಗುಡ್ಡದಲ್ಲಿ ಕುಡಿಯುವ ನೀರಿನ ಆರ್ಓ ಪ್ಲಾಂಟ್ ಆರಂಭಿಸಲು ಮತ್ತು ಮೊಬೈಲ್ ಕ್ಯಾಂಟಿನ್ ಆರಂಭಿಸಲು ಸೂಚನೆ