ವಿಜಯವಾಣಿ ಸುದ್ದಿಜಾಲ ಗದಗ
ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶವನ್ನು ಮೊದಲು ನೀಡಿದವರು ಬಸವಾದಿ ಶರಣರು. ಗಂಡು ಹೆಣ್ಣು ಬೇಧವಿಲ್ಲದೆ ವರ್ಣಬೇಧ, ವರ್ಗಬೇಧ ಮಾಡದೇ ಹೆಣ್ಣುಮಕ್ಕಳಿಗೂ ವಿದ್ಯೆ, ಸಂಸ್ಕಾರ ಕಲ್ಪಿಸಿಕೊಟ್ಟವರು ಶರಣರು. ಮಹಿಳೆಯರಲ್ಲಿ ಒಂದು ವಿಶಿಷ್ಠ ಶಕ್ತಿಯಿದೆ. ಸಾವರ್ಥ್ಯವಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೊಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಬೇಕು. ಬೆಳೆಸಬೇಕು. ಪ್ರೋತ್ಸಾಹಿಸಬೇಕು. ಸರಿಯಾದ ವಿದ್ಯೆ ಸಂಸ್ಕಾರ ಕೊಟ್ಟರೆ ಭೂಮಿ ಮತ್ತು ಅಂತರೀದಲ್ಲಿಯೂ ಸಾಧನೆ ಮಾಡಬಹುದು ಎಂಬುದಕ್ಕೆ ಸುನೀತಾ ವಿಲಿಯಮ್ಸ್ ಉದಾಹರಣೆ. ಮಹಿಳೆಯರಿಗೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಭಿತುಪಡಿಸಿದ್ದಾರೆ ಎಂದರು.
ಧಾರವಾಡದ ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮಠಗಳು ಸಂಸತಿಯ ಸಂಕೇತಗಳು. ಶಿಸ್ತಿನ ನಿವಾಸಗಳು. ಅಕ್ಕಮಹಾದೇವಿ ಮೊದಲ ಮಹಿಳಾವಾದಿ ಚಿಂತಕಿ. ತನ್ನ ಯೋಗ್ಯತೆಯ ಅರಿವು ಇತ್ತು. ಅಂತೇಯೇ ಉತ್ತುಂಗಕ್ಕೆ ಏರಿದಳು. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರನ್ನು ಹುಟ್ಟಿಸಿದರು. ಸ್ವಾತಂತ್ರವೆಂದರೆ ಸಂತೋಷ. ಗಂಡನ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರಬೇಕು. ಸಹನೆ ತಾಳ್ಮೆಯನ್ನು ಹೆಣ್ಣಿಗೆ ಕೊಟ್ಟಿದ್ದಾನೆ. ಹೆಣ್ಣು ದೇಹ, ಮನಸ್ಸು, ಬುದ್ದಿಯಿಂದ ಸ್ವಾತಂತ್ರಳಾಗಿರಬೇಕು ಎಮದರು.
ಸುವರ್ಣ ಹೊಸಂಗಡಿ, ಮಂಜುಳಾ ಬುಳ್ಳಾ, ಪುಷ್ಪ ಭಂಡಾರಿ, ಜಯಶ್ರೀ ಹಳ್ಳಿಕೇರಿ, ಸುಮಂಗಲಾ ಹಿರೇಮಠ, ಉಮಾ ಕವಳಿಕಾಯಿ, ಡಾ.ಉಮೇಶ ಪುರದ, ವಿದ್ಯಾ ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ ಇತರರು ಇದ್ದರು.