ಗದಗ: ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ನಗರದ ತೋಂಟದಾರ್ಯ ಮಠದಲ್ಲಿ ಬಸವೇಶ್ವರರ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಬಸವಪರ ಸಂಟನೆಗಳು ಹಾಗೂ ಬಸವಾಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆಯು ನಗರದಾದ್ಯಂತ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಬಸವಾಭಿಮಾನಿಗಳು ಬಸವಪರ ಜಯೂಷ ಮೊಳಗಿಸಿದರು. ಕಲಾತಂಡಗಳಿಂದ ವಾದ್ಯಮೇಳ ಜರುಗಿತು.
ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಎಸ್.ಎಸ್ ಪಟ್ಟಣಶೆಟ್ಟರ, ಲಿಂಗಾಯತ ಪ್ರಗತಿಶೀಲ ಸಂದ ಅಧ್ಯ ಶೇಖಣ್ಣ ಕಳಸಾಪೂರ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯ ಕೆ.ಎಚ್ ಬೇಲೂರ, ಬಸವದಳದ ಅಧ್ಯ ವಿ.ಕೆ. ಕರೇಗೌಡ್ರ, ಎಸ್.ಎನ್ ಬಳ್ಳಾರಿ, ಎಂ.ಎಸ್ ಅಂಗಡಿ, ಅಮರೇಶ ಅಂಗಡಿ, ಕೆ.ಎಸ್ ಪಲ್ಲೇದ ಹಲವರು ಇದ್ದರು.