ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ "ಶರಣಧರ್ಮ ಪ್ರವಚನ ರೂಪ' ಕೃತಿಯ ಲೋಕಾರ್ಪಣೆ ಮಾಡಲಾಯಿತು. ತೋಂಟದಾರ್ಯ ಶ್ರೀಗಳು, ಡಾ. ಶ್ವೇತಾ ಪ್ರಕಾಶ ಸಂಕನೂರ, ಎಸ್​. ಚಾಗಿ, ವಿ.ಎಂ. ಮೆಣಸಿನಕಾಯಿ ಇತರರು ಇದ್ದರು. 
ಜಿಲ್ಲೆ

ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸಿದ ಮಹಾಂತಪ್ಪಗಳು: ತೋಂಟದ ಸಿದ್ಧರಾಮ ಶ್ರೀಗಳು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ದುಶ್ಚಟಗಳಿಂದ ಜನರು ಆರೋಗ್ಯ, ಸಂಪತ್ತು, ಜೀವನ ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳ ನಿವಾರಣೆಗೆ ನಾಡಿನಾದ್ಯಂತ ಹಳ್ಳಿ ಹಳ್ಳಿಗೆ, ಮನೆ ಮನೆಗೆ ಸಂಚರಿಸಿ ದುರ್ವ್ಯಸನಗಳನ್ನು ತಮ್ಮ ಮಹಾಂತಜೋಳಿಗೆಗೆ ಹಾಕಿಸಿಕೊಂಡು ಸಮಾಜದ ಸ್ವಾಸ, ಜನರ ಬದುಕನ್ನು ಸಂರಸಿದ ಶ್ರೇಯಸ್ಸು ಇಳಕಲ್​ ಲಿಂ. ಮಹಾಂತಪ್ಪಗಳವರದು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಸೋಮವಾರ ತೋಂಟದಾರ್ಯ ಮಠದಲ್ಲಿ ಜರುಗಿದ ಲಿಂಗಾಯತ ಪ್ರಗತಿಶೀಲ ಸಂದ 2653 ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಲಕಲ್​ ಮಹಾಂತಪ್ಪಗಳು ಬಸವತತ್ವದ ದಂಡ ನಾಯಕರೆನಿಸಿದ್ದರು. ಬಸವತತ್ವವನ್ನು ನೇರ ನಿಷ್ಠುರವಾಗಿ, ಪ್ರಾಮಾಣಿಕವಾಗಿ ಪ್ರಸಾರ ಮಾಡಿದ್ದಾರೆ. ಅಸಮಾನತೆಯಿಂದ ತುಂಬಿದ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಭಿತ್ತಿ, ಶೋಷಣೆ, ಮೂಢನಂಬಿಕೆ, ಅಂಧಶ್ರದ್ಧೆ, ಬಹುದೇವೋಪಾಸನೆಗಳಿಂದ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಈ ದಿಶೆಯಲ್ಲಿ ಸಮಾಜದ ಎಲ್ಲ ಸ್ವಾಮಿಜಿಗಳಿಗೆ ಮಹಾಂತಪ್ಪಗಳು ಆದರ್ಶಪ್ರಾಯರು ಮತ್ತು ಮಾದರಿ ಎಂದು ಶ್ರೀಗಳು ಹೇಳಿದರು.
ಜಿಮ್ಸ್​ ಪ್ರಾಧ್ಯಾಪಕ ಡಾ. ಅರವಿಂದ ಕರಿನಾಗಣ್ಣನವರ ಮಾತನಾಡಿ, ತಂಬಾಕು ಸೇವನೆಯಿಂದ ಪ್ರತಿವರ್ಷ 60 ರಿಂದ 70 ಲ ಜನರು ಸಾವನ್ನಪ್ಪುತ್ತಿದ್ದಾರೆ. ನಮ್ಮ ಜೀವನಶೈಲಿ ಮತ್ತು ಆಹಾರಪದ್ಧತಿ ಇದಕ್ಕೆ ಕಾರಣ. ಪ್ರತಿಯೊಂದು ವಸ್ತುಗಳು ಕಲಬೆರಕೆಯಿಂದ ಕೂಡಿದ್ದಾಗಿವೆ. ಇದರಿಂದ ಮನುಷ್ಯನ ಜೀವಿತಾವಧಿ ಕ್ರಮೇಣ ಣಿಸುತ್ತಿದೆ ಎಂದು ತಿಳಿಸಿದರು.
ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಶರಣಧರ್ಮ ಪ್ರವಚನ ರೂಪ' ಕೃತಿಯ ಲೋಕಾರ್ಪಣೆ ಜರುಗಿತು.
ಡಾ. ಶ್ವೇತಾ ಪ್ರಕಾಶ ಸಂಕನೂರ, ಎಸ್​. ಚಾಗಿ, ವಿ.ಎಂ. ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಸೋನಾ ಪವಾರ, ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.