ಜಿಲ್ಲೆ

ಶರಣರು ಸಮದ್ಧಿಗಿಂತಲೂ, ಸಂತಪ್ತಿಗೆ ವಿಶೇಷ ಮಹತ್ವ ಕೊಟ್ಟಿದ್ದಾರೆ : ಡಾ. ತೋಂಟದ ಸಿದ್ಧರಾಮ ಶೀಗಳು

Gadag - Shivanand Hiremath

ಗದಗ : ಬಸವಾದಿ ಶರಣರ ವಚನಸಾಹಿತ್ಯ ಬಹಳ ಮೌಲಿಕವಾಗಿರುವ ಸಾಹಿತ್ಯ. ಬಸವಾದಿ ಶಿವಶರಣರ ವಚನಗಳನ್ನು ಮತ್ತು ಜೀವನಚರಿತ್ರೆಯನ್ನು ಓದಿದಾಗ ಶರಣರು ಸಮದ್ಧಿಗಿಂತಲೂ, ಸಂತಪ್ತಿಗೆ ವಿಶೇಷವಾದ ಮಹತ್ವ ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.
ಲಿಂಗಾಯತ ಪ್ರಗತಿಶೀಲ ಸಂದ 2703ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶೀಗಳು, ವಚನಸಾಹಿತ್ಯದಲ್ಲಿ ಮೌಲ್ಯಗಳು, ಆದರ್ಶಗಳು, ತತ್ವಗಳು ಬಹಳ ಅಮೂಲ್ಯವಾಗಿರುವುದರಿಂದ ವಚನಸಾಹಿತ್ಯಕ್ಕೆ ಅಂತರಾಷ್ಟ್ರೀಯ ಮಟ್ಟದ ಗೌರವ ಪ್ರಾಪ್ತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ವಚನಸಾಹಿತ್ಯವನ್ನು ಬೇರೆ ಬೇರೆ ದೇಶಗಳಲ್ಲಿರುವ ಜನರು ಕೂಡಾ ತಮ್ಮ ತಮ್ಮ ಭಾಷೆಯಲ್ಲಿ ಓದುತ್ತಿದ್ದಾರೆ ಎಂದು ಮಾತನಾಡಿದರು.
ಶರಣ ಮಾರ್ಗ ವಿಷಯ ಕುರಿತು ಡಾ. ಸಿದ್ಧಣ್ಣ ಉತ್ನಾಳ ಶರಣತತ್ತ$್ವ ಚಿಂತಕರು, ಅಥಣಿ ಅವರು ಉಪನ್ಯಾಸ ನೀಡಿ, 12 ನೇ ಶತಮಾನದ ಬಸವಾದಿ ಶಿವಶರಣರು ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಸಾರಿದ್ದಾರೆ. ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಮಾಡಬೇಕು. 12 ನೇ ಶತಮಾನ ವಚನಸಾಹಿತ್ಯದ ಆರಂಭ. ನಂತರ ವಚನಸಾಹಿತ್ಯಕ್ಕೆ ಪ್ರಖರವಾದಂತಹ ಶಕ್ತಿಯನ್ನು ತುಂಬಿದವರು 15 ನೇ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳು. ಪ್ರಗತಿಪರ ನಿಲುವು, ಜನಪರ ನಿಲುವು, ಸಮಾಜಪರ ವಲವು ಇವು ವಚನಸಾಹಿತ್ಯದ ಮೂಲ ಕೊಡುಗೆಗಳು ಎಂದು ಮಾತನಾಡಿದರು.
ವನ್ಯಜಿವಿ ಸಂರಣೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕದಿಂದ ಪುರಸತರಾದ ಶೀ ವೀರೇಂದ್ರ ಸೋಮಶೇಖರ ಮರಿಬಸವಣ್ಣವರ, ವಲಯ ಅರಣ್ಯಾಕಾರಿಗಳು ಕಪ್ಪತ್ತಗುಡ್ಡ ವಲಯ, ಮುಂಡರಗಿ ಅವರನ್ನು ಪೂಜ್ಯರು ಸಂಮಾನಿಸಿದರು. ಎಸ್​. ಎ. ಪಾಟೀಲ ಅವರು ಮಾತನಾಡಿದರು.
ಮತ್ಯಂಜಯ ಹಿರೇಮಠ ಮತ್ತು ಗುರುನಾಥ ಸುತಾರ ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಅನ್ನರ್ಪೂಣ ಎಸ್​. ವರವಿ, ವಚನ ಚಿಂತನೆಯನ್ನು ನಿರ್ಮಲಾ ಜಿ. ಪಾಟೀಲ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿದ್ದ ಎಸ್​.ಎ. ಪಾಟೀಲ, ವಿ.ಎ. ಪಾಟೀಲ ಹಾಗೂ ಜಿ.ಎ. ಪಾಟೀಲ ಮತ್ತು ಕುಟುಂಬದ ಸದಸ್ಯರನ್ನು ಸಂಮಾನಿಸಲಾಯಿತು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂದ ಅಧ್ಯರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದಶಿರ್ ಮಹೇಶ ಗಾಣಿಗೇರ, ಸಹಕಾರ್ಯದಶಿರ್ ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಸಂಟನಾ ಕಾರ್ಯದಶಿರ್ ಅಶೋಕ ಹಾದಿ, ಕೋಶಾಧ್ಯ ಸುರೇಶ ನಿಲೂಗಲ್​, ಶಿವಾನುಭವ ಸಮಿತಿ ಚೇರಮನ್​ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.