ಜಿಲ್ಲೆ

ಗದಗ: ಪವರ್ ಫುಲ್ 'ಥರ್ಡ್ ಐ'

Gadag - Shivanand Hiremath

ಶಿವಾನಂದ ಹಿರೇಮಠ, ಗದಗ
ನಗರದ ಸುಗಮ ಸಂಚಾರ ವ್ಯವಸ್ಥೆಗೆ ಜಾರಿಯಾದ "ಥರ್ಡ ಐ' ಯೋಜನೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದೆ. ನಿನ್ನೆವರೆಗೂ ಸಂಚಾರ ನಿಯಮ ಪಾಲಿಸದೇ ಇರುವ ಜನರು ಇಂದು ಸಂಚಾರ ನಿಯಮಗಳ ಜತೆ ಬೆಸೆಯುತ್ತಿದ್ದಾರೆ. ಹೆಲ್ಮೆಟ್​, ಸೀಟ್​ ಬೆಲ್ಟ್​ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅ.23 ರಿಂದ ಆನ್​ಲೈನ್​ ದಂಡ ರಸೀದಿ ನೀಡುವ ಪ್ರಕ್ರಿಯೆ ಜಾರಿ ಆದಾಗಿನಿಂದಲೂ ನಗರದಲ್ಲಿ 4100 ಪ್ರಕರಣ ದಾಖಲಾಗಿದೆ. 7 ಲಕ್ಷ ರೂ. ದಂಡ ವಸೂಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸಂಪನ್ಮೂಲ ಕೊರತೆ ಅನುಭವಿಸುತ್ತಿರುವ ಸರ್ಕಾರಕ್ಕೆ ಇಂತಹ ಯೋಜನೆಗಳು ವರದಾನ ಆಗಲಿವೆ.
ಏನಿದು ಯೋಜನೆ:
ಮೂರು ಕೋಟಿ ರೂ ವೆಚ್ಚದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ 15 ಎಎಂಪಿಆರ್​ ಸಿಸಿ ಕೆಮೆರಾ ಅಳವಡಿಸಲಾಗಿದೆ. ಈ ಕೆಮೆರಾಗಳು 360 ಡಿಗ್ರಿ ಕಾರ್ಯ ನಿರ್ವಹಿಸುತ್ತವೆ. 44 ಸ್ಥಳಗಳಲ್ಲಿ ಬುಲೆಟ್​ ಕ್ಯಾಮರಾ ಸೇರಿ 110 ಸಿಸಿ ಕೆಮಾರಾ ಅಳವಡಿಸಲಾಗಿದೆ. ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಸ್ಥಾಪಿಸಲಾದ ಕಮಾಂಡ್​ ಸೆಂಟರ್​ನಲ್ಲಿ ಸಿಸಿ ಕೆಮಾರಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆರ್​ಟಿಓ ಕಚೇರಿ ಸಹಾಯದೊಂದಿಗೆ ವಾಹನಗಳ ದಾಖಲೆ ಪಡೆದು ದಾಖಲೆಗಳಲ್ಲಿ ವಿಳಾಸಕ್ಕೆ ದಂಡದ ರಸೀದಿಗಳನ್ನು ಅಂಚೆ ಮೂಲಕ ಕಳಿಸಲಾಗುತ್ತದೆ. 48 ಗಂಟೆಗಳಲ್ಲಿ ಮನೆಗೆ ನೋಟಿಸ್​ ಬರುತ್ತದೆ. ವಾರದೊಳಗೆ ದಂಡವನ್ನು ಕಟ್ಟಬೇಕಾಗುತ್ತದೆ. ಜಿಲ್ಲೆಯ 12 ಪೊಲೀಸ್​ ಠಾಣೆಯಲ್ಲಿ ದಂಡ ಪಾವತಿ ಕೌಂಟರ್​ ತೆರೆಯಲಾಗಿದ್ದು. ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ದಂಡ ಪಾವತಿಸಬಹುದು. ನಗರದ ಒಟ್ಟಾರೆ 45 ಸ್ಥಳಗಳನ್ನು ಪೊಲೀಸ್​ ಸಿಬ್ಬಂದಿ ಜಿಲ್ಲಾ ಕಚೇರಿಯಿಂದಲೇ ನಿಗಾ ವಹಿಸುತ್ತಿದ್ದಾರೆ. ಈ ಪ್ರಕ್ರಿಯೆಗಳಿಂದ ನಗರದ ಟ್ರಾಫಿಕ್​ ನಿರ್ವಹಣೆ ಮತ್ತು ದಂಡ ಪಾವತಿ ಪ್ರಕ್ರಿಯೆ ಸುಲಭವಾಗಿದೆ. ಸಿಸಿ ಕೆಮೆರಾ ಅಳವಡಿಕೆಯಿಂದ ಕೆ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಯೋಜನೆ ಮೂಲಕ ಪೊಲೀಸ್​ ವ್ಯವಸ್ಥೆ ಮೇಲೆ ಜನರಲ್ಲಿ ವಿಶ್ವಾಸ ಮೂಡುತ್ತಿದೆ.

ಬಾಕ್ಸ್​:
ಕಮಾಂಡ್​ ಸೆಂಟರ್​ ನಿಂದ ಕೇವಲ ಟ್ರಾಫಿಕ್​ ಮೇಲ್ವಿಚಾರಣೆ ಅಲ್ಲದೇ ಪೊಲೀಸ್​ ಠಾಣೆಗಳ ಮೇಲೂ ನಿಗಾ ವಹಿಸಲಾಗಿದೆ. ಅನಗತ್ಯ ಕಾಯುವಿಕೆಯಿಂದ ದೂರುದಾರರನ್ನು ಮುಕ್ತರನ್ನಾಗಿಸಲು ಕ ಮತ್ತು ನೋಂದವರಿಗೆ ತುರ್ತು ಸೇವೆ ಸಲ್ಲಿಸಲು ಜಿಲ್ಲೆಯ ಪೊಲೀಸ್​ ಠಾಣೆಗಳಲ್ಲಿ ಸಿಸಿ ಕೆಮಾರಾ ಅಳವಡಿಸಲಾಗಿದೆ. ನೋಂದ ಕುಟುಂಬಸ್ಥರು ಕೇವಲ 30 ನಿಮಿಷದಲ್ಲಿ ದೂರು ಸಲ್ಲಿಸಿ ಠಾಣೆಯಿಂದ ಹೊರಬರಬಹುದು. ಠಾಣೆಗಳಲ್ಲಿ ದೂರು ದಾರರನ್ನು ಅನಗತ್ಯ ಕಾಯಿಸಿದರೇ ಸಂಬಂಧಿಸಿದ ಪೊಲೀಸ್​ ಅಧಿಕಾರಿಗೆ ಅಮಾನತು ಶಿೆ ಕಟ್ಟಿಟ್ಟ ಬುತ್ತಿ. ಬಿ.ಎಸ್​. ನೇಮಗೌಡ ಅವರು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ವ್ಯವಸ್ಥೆ ಕಡ್ಡಾಯ ಜಾರಿ ಮಾಡಿದ್ದಾರೆ. ನೋಂದ ವ್ಯಕ್ತಿ ಅಥವಾ ಕುಟುಂಬ ದೂರು ಸಲ್ಲಿಸಲು ಠಾಣೆಗೆ ತೆರಳಿದ ಸಂದರ್ಭದಲ್ಲಿ ಕೇವಲ ಮೂವತ್ತು ನಿಮಿಷದಲ್ಲಿ ಅವರ ಅಜಿರ್ ಸ್ವೀಕರಿಸಿ ಎೈಆರ್​ ದಾಖಲಿಸಬೇಕು. ಈ ವ್ಯವಸ್ಥೆ ಕಡ್ಡಾಯ ಪಾಲನೆ ಆಗುತ್ತಿರುವುದನ್ನು ಗಮನಿಸಲು ವಿಶೇಷ ಸಿಬ್ಬಂದಿ ನೇಮಿಸಲಾಗಿದೆ.

ಬಾಕ್ಸ್​:(ನ.16ರ ವರೆಗೂ)
ಥರ್ಡ್​ ಐ ಮೂಲಕ ದಾಖಲಾದ ಒಟ್ಟಾರೆ ಪ್ರಕರಣ - 4100
ದಂಡ ಕಟ್ಟಿದವರು - 1300 ಕ್ಕೂ ಹೆಚ್ಚು
ಹೆಲ್ಮೆಟ್​ ಧರಿಸದ ಪ್ರಕರಣ - 3433
ತ್ರಿಬಲ್​ ರೈಡಿಂಗ್​ - 560
ಚಾಲನೆ ಸಂದರ್ಭದಲ್ಲಿ ಪೋನ್​ ಬಳಕೆ - 66
ಕಾರಿನಲ್ಲಿ ಸೀಟ್​ ಬೆಲ್ಟ್​ ಹಾಕದಿರುವ ಪ್ರಕರಣ - 50
ಪಾಕಿರ್ಂಗ್​ ನಿಯಮ ಉಲ್ಲಂನೆ - 05
ಆಟೋಗಳಲ್ಲಿ ಸಮವಸ್ತ್ರ ಧರಿಸದ ಪ್ರಕರಣ - 177

ಕೋಟ್​:
ಪಾರದರ್ಶಕ ಆಡಳಿತ ವ್ಯವಸ್ಥೆಗೆ ಥರ್ಡ್​ ಐ ಯೋಜನೆ ಉಪಯುಕ್ತ. ಆಡಳಿತ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ಇಲಅಖೆಯೊಂದಿಗೆ ಕೈ ಜೋಡಿಸಬೇಕು. ಸಂಚಾರ ನಿಯಮ ಪಾಲಿಸಿ ದಂಡ ಕಟ್ಟುವುದರಿಂದ ವಿಮುಕ್ತರಾಗಬೇಕು. - ಬಿ.ಎಸ್​. ನೇಮಗೌಡ, ಎಸ್​ಪಿ, ಗದಗ