ಜಿಲ್ಲೆ

ಉಪ ತಹಶೀಲ್ದಾರ ಹಾಗೂ ಕಾಂಗ್ರೆಸ್​ ಮುಖಂಡರಿಂದ ಯುವಕನ ಮೇಲೆ ಹಲ್ಲೆ ಆರೋಪ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಗದಗ ತಹಶೀಲ್ದಾರರ ಕಚೇರಿಯಲ್ಲಿಯೇ ಯುವಕನ ಮೇಲೆ ಉಪ ತಹಸೀಲ್ದಾರ ಹಾಗೂ ಅವರ ಸಹಚರು ಮತ್ತು ಸ್ಥಳಿಯ ಕಾಂಗ್ರೆಸ್​ ಮುಖಂಡರಿಂದ ಹಲ್ಲೆ ನಡೆದಿದ್ದು, ಈ ವಿಡಿಯೋ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್​ ಆಗಿದೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ

ವಿಡಿಯೋದಲ್ಲಿ ಸ್ಥಳಿಯ ಕಾಂಗ್ರೆಸ್​ ಮುಖಂಡರು ಮತ್ತು ಉಪ ತಹಸೀಲ್ದಾರ ಹಲ್ಲೆ ಮಾಡುತ್ತಿರುವುದು ಸೆರೆಯಾಗಿದೆ. ಸಾಲದೆಂಬಂತೆ ಉಪತಹಸೀಲ್ದಾರರೇ ಖುಚಿರ್ ಎತ್ತಿಕೊಂಡು ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಈ ವೇಳೆ ಅಲ್ಲಿದ್ದ ಕೆಲವರು ಉಪತಹಸೀಲ್ದಾರ ಕೈಯಲ್ಲಿ ಖುಚಿರ್ಯನ್ನು ಕಸಿದುಕೊಂಡಿದ್ದಾರೆ. ಇದಾದ ನಂತರವೂ ಉಪತಹಸೀಲ್ದಾರರು ಕೈಯಿಂದ ಹಲ್ಲೆ ಮಾಡಲು ಮುಂದಾಗಿರುವುದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿದೆ.

ಬಾಕ್ಸ್​:

ಯಾವ ಕಾರಣಕ್ಕಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಆ ಯುವಕ ಮಾಡಿರುವ ತಪ್ಪಾದರೂ ಏನು?, ಇಷ್ಟೊಂದು ಗಂಭೀರ ಹಲ್ಲೆಗೆ ಯಾವುದಾದರೂ ಹಳೆಯ ದ್ವೇಷ ಇತ್ತೇ? ಅಷ್ಟೊಂದು ತಡವಾಗಿಯೂ ಉಪತಹಸೀಲ್ದಾರ ಕಚೇರಿಯಲ್ಲಿ ಬೇರೆಯವರಿಗೆ ಏನು ಕೆಲಸವಿತ್ತು ಎನ್ನುವ ಬಗ್ಗೆಯೂ ಸಾರ್ವಜನಕಿರಲ್ಲಿ ಸಂಶಯ ಮೂಡುತ್ತಿದೆ. ತಹಸೀಲ್ದಾರ ಕಚೇರಿಯಲ್ಲಿಯೇ ಹಿರಿಯ ಅಧಿಕಾರಿಗಳು ಈ ರೀತಿಯಾಗಿ ವತಿರ್ಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಪೊಲೀಸ್​ ಅಧಿಕಾರಿಗಳು ರಾಜಿ ಸಂಧಾನ ಮಾಡಿದ್ದಾರೆ ಎನ್ನುವುದು ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಕೋಟ್​.

ತಹಸೀಲ್ದಾರ ಕಚೇರಿಯಲ್ಲಿಯೇ ಅಲ್ಲಿನ ಹಿರಿಯ ಅಧಿಕಾರಿಗಳ ವರ್ತನೆಯನ್ನು ಗಮನಿಸಿದಲ್ಲಿ ನಮ್ಮ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಷ್ಟೊಂದು ದಬ್ಬಾಳಿಕೆ ನಡೆಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋಗಳೇ ಸಾಕ್ಷಿಯಾಗಿವೆ ಡಿಸಿ ಅವರು ಕೂಡಲೇ ತಪ್ಪಿತಸ್ಥರ ಮೇಲೆ ತೆಗೆದುಕೊಳ್ಳಬೇಕು.

ರಾಜು ಖಾನಪ್ಪನವರ. ಶ್ರೀರಾಮಸೇನೆಯ ಪ್ರಮುಖ.

ಕೋಟ್​:

ಕಾನೂನು ಸಚಿವ ತವರಲ್ಲೇ ಅಧಿಕಾರಿಗಳು, ಕಾಂಗ್ರೆಸ್​ ಮುಖಂಡರು ಹದ್ದು ಮೀರಿ ವತಿರ್ಸುತ್ತಿದ್ದಾರೆ. ಉಪ ತಹಸೀಲ್ದಾರ ವರ್ತನೆ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರಿಗೆ ತಿಳಿಸಿದ್ದೇನೆ ಮತ್ತು ಖಾಯಂ ಅಮಾನತ್ತಿನಲ್ಲಿ ಇಡಬೇಕು ಎಂದು ಆಗ್ರಹಿಸಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ

ಸಿ. ಸಿ. ಪಾಟೀಲ, ಶಾಸಕ