ಜಿಲ್ಲೆ

ಅನುದಾನಿತ ಪಿಯು ಕಾಲೇಜು ಸಿಬ್ಬಂದಿಗಳ ಮಾರ್ಚ ಮತ್ತು ಎಪ್ರಿಲ್​ ತಿಂಗಳ ವೇತನ ಬಿಡುಗಡೆ: ಎಸ್​. ವಿ. ಸಂಕನೂರು

ಗದಗ: ಸರ್ಕಾರದ ಶಾಲಾ ಶಿಣ ಇಲಾಖೆಯು 2025&26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿಗಳ ಮಾರ್ಚ್​ ಮತ್ತು ಏಪ್ರಿಲ್​ ತಿಂಗಳ ವೇತನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್​ ಶಾಸಕ ಎಸ್​.ವಿ. ಸಂಕನೂರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ 32 ಜಿಲ್ಲೆಗಳಲ್ಲಿರುವ ಒಟ್ಟು 1,231 ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋದಕ ಮತ್ತು ಬೋಧಕೇತರ ಸಿಬ್ಬಂದಿಯ ಒಟ್ಟು ವೇತನ 153.16 ಕೋಟಿ ಬಿಡುಗಡೆ ಮಾಡಲಾಗಿದೆ. ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಜಿಲ್ಲೆಯ ಉಪನಿರ್ದೇಶಕರನ್ನು ಸಂಪಕಿರ್ಸಿ ವೇತನ ಪಡೆದುಕೊಳ್ಳಬೇಕು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಅವರು ತಿಳಿಸಿದ್ದಾರೆ.