ಜಿಲ್ಲೆ

ಖಾಸಗಿ ಅನುಧಾನಿತ ಶಿಕ್ಷಣಸಂಸ್ಥೆಗಳ ಖಾಲಿ ಹುದ್ದೆ ತುಂಬಿಕೊಳ್ಳಲು ಆಡಳಿತ ಮಂಡಳಿಗೆ ಅನುಮತಿ ನೀಡಲು ಒತ್ತಾಯ  -ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಎಸ್.ವ್ಹಿ.ಸಂಕನೂರ

Gadag - Shivanand Hiremath

Gadag:  2015 ರ ನಂತರ ಖಾಸಗಿ ಅನುದಾನಿತ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಧಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಅರ್ಜಿ ಮಾದರಿಯನ್ನು ಸಿದ್ದಪಡಿಸಿ ಅರ್ಜಿ ಸಲ್ಲಿಸಲ್ಲಿಕ್ಕೆ ಅವಕಾಶ ನೀಡಲು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀಮತಿ ಮಂಜುಳಾ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮತ್ತು ಶಾಲಾ ಶಿಕ್ಷಣ ಆಯುಕ್ತರಾದ ತ್ರಿಲೋಕಚಂದ್ರ ಅವರಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವ್ಹಿ ಸಂಕನೂರ ಮತ್ತು ಶಶೀಲ ನಮೋಶಿ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಜ್ಯದ ಖಾಸಗಿ ಅನುಧಾನಿತ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ 2015 ರ ನಂತರ ನಿಧನ, ನಿವೃತ್ತಿ ಇತ್ಯಾಧಿ ಕಾರಣಗಳಿಂದ ತೆರವಾದ ಹುದ್ದಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿ ಎರಡುವರೆ ತಿಂಗಳಾದರೂ ಸಂಬAಧಪಟ್ಟ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಇದುವರೆಗೆ ಸಂಬAಧಪಟ್ಟ ಆಡಳಿತ ಮಂಡಳಿಯವರಿಗೆ ಹುದ್ದೆ ತುಂಬಿಕೊಳ್ಳಲು ಅರ್ಜಿ ಮಾದರಿಯನ್ನು ನೀಡದಿರುವದು ಖೇದಕರ ಸಂಗತಿ. ಆದ್ದರಿಂದ ಶೈಕ್ಷಣಿಕ ಗುಣಮಟ್ಟದ ದೃಷ್ಠಿಯಿಂದ ಕೂಡಲೇ ಖಾಲಿಹುದ್ದೆಗಳನ್ನು ತುಂಬಿಕೊಳ್ಳಲು ಅರ್ಜಿ ಸಲ್ಲಿಸುವ ಮಾದರಿಯನ್ನು ಕೊಡಲೇ ಅನುಮತಿ ನೀಡಬೇಕೆಂದು ಕೊರಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವ್ಹಿ ಸಂಕನೂರ, ಶಶೀಲ ನಮೋಶಿ ಮತ್ತು ಹನುಮಥ ನಿರಾಣಿ ಇದ್ದರು.