ವಿಜಯವಾಣಿ ಸುದ್ದಿಜಾಲ ಗದಗ
ನಗರದ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ನಿಧಾನ ಗತಿಯ ಕಲಿಕೆಯ ಮಕ್ಕಳಿಗಾಗಿ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ವಿದ್ಯಾದಾನ ಸಮಿತಿಯ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ ಉದ್ಘಾಟಿಸಿ ಮಾತನಾಡಿ, ವಿದ್ಯಾಥಿರ್ನಿಯರ ಶ್ರೇಯೋಭಿವೃದ್ಧಿಗಾಗಿ ವಿದ್ಯಾದಾನ ಸಮಿತಿಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಕ್ರಿಯಾ ಯೋಜನೆಯನ್ನು ಹಾಕಿಕೊಂಡಿದೆ. ಅವುಗಳಲ್ಲಿ ಕಲಿಕಾ ಲ ಆಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಕನ್ನಡ ಪಾಂಡಿತ್ಯವನ್ನು ನಿಮ್ಮ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಡಿ.ಬಿ. ತಳವಾರ ಮಾತನಾಡಿ ಕಲಿಕಾಲ ಆಧಾರಿತ ಬೋಧನೆಯಲ್ಲಿ ಕನ್ನಡಕ್ಕೆ ಸಂಬಂಧಿ-ಸಿದ ವರ್ಣಮಾಲೆ, ಪದರಚನೆ, ಕಾಗುಣಿತ, ಉಕ್ತಿಲೇಖನ ರಚನೆ ಮುಂತಾದ ಮೂಲಭೂತ ಕ್ರಮಗಳನ್ನೊಳಗೊಂಡ ಕನ್ನಡ ವಿಷಯ ಕಲಿಯಬೇಕು. ನಮ್ಮ ಮಾತೃ ಭಾಷೆ ಕನ್ನಡ ಕಲಿಯುವದು ಜೇನು ಸವಿದಂತೆ. ನಮ್ಮದು ಬಹಳ ಸುಂದರ ಸರಳ ಭಾಷೆ ಆಗಿದೆ. ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು. ಗೌರವಿಸಬೇಕು ಎಂದರು.
ಪಿ.ಎಚ್. ಕಡಿವಾಲ, ಆರ್. ಆರ್. ಜಾಲಿಹಾಳ, ಆರ್. ಎಂ. ಪಟ್ಟಣಶೆಟ್ಟಿ, ವಿ. ಕೆ. ಪುರಾಣಿಕ ಇತರರು ಇದ್ದರು.