- ಜಿಲ್ಲೆಗೆ 17ನೇ ಸ್ಥಾನ! ಕಳೆದ ಬಾರಿಯೂ 17 ಸ್ಥಾನದಲ್ಲಿದ್ದ ಗದಗ ಜಿಲ್ಲೆ
- ಜಿಲ್ಲಾ ವ್ಯಾಪ್ತಿಯಲ್ಲಿ ಶಿರಹಟ್ಟಿ ಫಸ್ಟ್! ಗದಗ ಶಹರ ಲಾಸ್ಟ್
ವಿಜಯವಾಣಿ ಸುದ್ದಿಜಾಲ ಗದಗ
ಶುಕ್ರವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆ 67.72 ಶೇ. ಫಲಿತಾಂಶದೊAದಿಗೆ 17ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 7430 ಹೆಣ್ಣು ಮಕ್ಕಳ ಪೈಕಿ 5775(ಶೇ.77.73) ಹಾಗೂ ಪರೀಕ್ಷೆಗೆ ಹಾಜರಾದ 7091 ಗಂಡು ಮಕ್ಕಳ ಪೈಕಿ 4059(ಶೇ.57.23) ಜನರು ಪಾಸಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು ಹಾಜರಾದ 14521 ಅಭ್ಯರ್ಥಿಗಳ ಪೈಕಿ 9834(67.72) ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2023-24ನೇ ಸಾಲಿನಲ್ಲಿಯೂ 74.76 ಶೇ. ಫಲಿತಾಂಶದೊAದಿಗೆ 17ನೇ ಸ್ಥಾನದಲ್ಲೇ ಇತ್ತು ಎಂಬುದು ವಿಶೇಷ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ನಾಲ್ವರು ವಿದ್ಯಾರ್ಥಿನಿಯರೇ ಎಂಬುದು ವಿಶೇಷ. ಅದರಲ್ಲೂ ಜಿಲ್ಲೆಯ ಲಕ್ಷೆ÷್ಮÃಶರ ತಾಲೂಕಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿ ಅಽಕ ಅಂಕ ಗಳಿಸುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಶಿರಹಟ್ಟಿ ತಾಲೂಕು ಪ್ರಥಮ ಸ್ಥಾನ, ಗದಗ ನಗರದ ಕೊನೆ ಸ್ಥಾನಗಳಿಸಿದೆ. ಶಿರಹಟ್ಟಿ ತಾಲೂಕಿನಲ್ಲಿ ಹಾಜರಾದ 2638 ವಿದ್ಯಾರ್ಥಿಗಳ ಪೈಕಿ 2106(79.83) ಪಾಸಾಗಿದ್ದು, ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದ ರೋಣ ತಾಲೂಕು ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ರೋಣ ತಾಲೂಕಿನಲ್ಲಿ 3596 ವಿದ್ಯಾರ್ಥಿಗಳ ಪೈಕಿ 2506(69.69) ವಿದ್ಯಾರ್ಥಿಗಳು ಪಾಸಾಗಿದ್ದು ರೋಣ ತಾಲೂಕು ಎರಡನೇ ಸ್ಥಾನದಲ್ಲಿದೆ. ಗದಗ ಗ್ರಾಮೀಣ ತಾಲೂಕಿ ಶೇ. 65.88 ಫಲಿತಾಂಶದೊದಿಗೆ 3ನೇ ಸ್ಥಾನ, ಮುಂಡರಗಿ ತಾಲೂಕು ಶೇ. 64.40 ಫಲಿತಾಂಶದೊAದಿಗೆ 4ನೇ ಸ್ಥಾನ, ಮುಂಡರಗಿ ತಾಲೂಕು ಶೇ. 63.93 ಫಲಿತಾಂಶದೊದಿಗೆ 5ನೇ ಸ್ಥಾನ ಹಾಗೂ ಗದಗ ನಗರ ಶೇ. 58.60 ಫಲಿತಾಂಶದೊAದಿಗೆ ಕೊನೆಯ 6ನೇ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಸರ್ಕಾರಿ ಐದು ಶಾಲೆಗಳು, ಅನುದಾನಿತ 1 ಶಾಲೆ ಮತ್ತು ಅನುದಾನ ರಹಿತ 5 ಶಾಲೆಗಳು ಸೇರಿ ಒಟ್ಟು 11 ಶಾಲೆಗಳು ಶೇ. 100 ರಷ್ಟು ಫಲಿತಾಂಶ ಸಾಽಸಿವೆ ಮತ್ತು ಸರ್ಕಾರಿ 4 ಶಾಲೆಗಳು, ಅನುದಾನಿತ 25 ಶಾಲೆ, ಅನುದಾನ ರಹಿತ 10 ಶಾಲೆ ಸೇರಿ ಒಟ್ಟು 39 ಶಾಲೆಗಳು ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿವೆ.
ಮೂಜುಗುರಕ್ಕೆ ಒಳಗಾದ ಗದಗ ಶಹರ:
ಜಿಲ್ಲಾ ಕೇಂದ್ರದಲ್ಲಿ ಗದಗ ಶಹರವು ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಫಲಿತಾಂಶ ಹೊಂದುತ್ತಿಲ್ಲ ಎಂಬುದು ವಿಪರ್ಯಾಸ ವಿಷಯ. 2024ನೇ ಸಾಲಿನಲ್ಲಿ ಗದಗ ಶಹರ ಶೇ. 66.24 ಫಲಿತಾಂಶದೊದಿಗೆ ಜಿಲ್ಲಾ ವ್ಯಾಪ್ತಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಶೇ. 58.60 ಫಲಿತಾಂಶದೊAದಿಗೆ ಕೊನೆಯ 6ನೇ ಸ್ಥಾನದಲ್ಲಿದೆ. ಜಿಲ್ಲಾ ಶಿಕ್ಷಣ ಕೇಂದ್ರ ಸ್ಥಾನ ಮತ್ತು ಅತೀ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾ ಕೇಂದ್ರದಲ್ಲೇ ಇದ್ದೂ ಕೂಡ ಶಹರದ ಫಲಿತಾಂಶ ಇನ್ನೂಳಿದ ತಾಲೂಕಿನ ಫಲಿತಾಂಶಕ್ಕಿAತ ಕುಸಿದಿರುವುದು ವಿಪರ್ಯಾಸ ಎಂಬುದು ತಜ್ಞರ ಅಭಿಪ್ರಾಯ.
= = =
ಜಿಲ್ಲೆಗೆ ಪ್ರಥಮಸ್ಥಾನ(99.68/623)
ತಾಲೂಕು - ಶಾಲೆ - ಹೆಸರು
Laxmeshwar - ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ - ಸಂಪದ ಕುಲಕರ್ಣಿ
Laxmeshwar - ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ - ಖದೀಜಾ ಸುರಣಗಿ
Laxmeshwar - ಗೋಜುನೂರು, ಮೂರಾರ್ಜಿ - ರಿಹಾನ ಶಿರಬಡಗಿ
ಗದಗ - ಮಹಾವೀರ ಜೈನ್ -ಮಮತಾಜ್ ಬಾಬರಸಾಬ ಅತ್ತರ
= = =
ಜಿಲ್ಲೆಗೆ ದ್ವಿತೀಯ (99.52/622)
ತಾಲೂಕು - ಶಾಲೆ - ಹೆಸರು
Laxmeshwar - ಗೋಜುನೂರು, ಮೂರಾರ್ಜಿ - ಉದಯ ಕಟ್ಟೆಣ್ಣವರ
Laxmeshwar - ಲಿಟಲ್‌ಹಾರ್ಟ ಇಂಟರನ್ಯಾಷನಲ್ - ಸುಮೀತಗೌಡ
Laxmeshwar(ಶಿಗ್ಲಿ) - ಎಸ್.ಎಸ್. ಕುಡ್ಲಮಠ ಆಂಗ್ಲ - ಸೋಹಾ ನದಾಫ
ಮುಂಡರಗಿ(ಕೋರ್ಲಹಳ್ಳಿ) - ಆದರ್ಶ ವಿದ್ಯಾಲಯ - ಕಾವ್ಯಾ ಉಪ್ಪಾರ
===
ಜಿಲ್ಲೆಗೆ ತೃತೀಯ ಸ್ಥಾನ(99.36/621)
ತಾಲೂಕು - ಶಾಲೆ - ಹೆಸರು
Laxmeshwar - ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ - ಜಯಂತ ನವಲಗುಂದ
ಗದಗ - ಸೆಂಟ್ ಜಾನ್ಸ್ ಸ್ಕೂಲ್ - ಜೆಸ್ಸಿಕಾ ಅಪೇಕ್ಷಿತಾ
= = = =
ಬಾಕ್ಸ್:
2023ರ ಫಲಿತಾಂಶ - ಶೇ.85.69
2024ರ ಫಲಿತಾಂಶ - ಶೇ. 74.76
2025ರ ಫಲಿತಾಂಶ - ಶೇ. 67.72
===
ಪ್ರದೇಶವಾರು ಫಲಿತಾಂಶ:
ಪ್ರದೇಶ - ಲಿಂಗ - ಹಾಜರು - ತೇರ್ಗಡೆ - ಶೇ.
ಗ್ರಾಮೀಣ - ಗಂಡು - 4004 - 2385 - 59.57
ಗ್ರಾಮೀಣ - ಹೆಣ್ಣು - 4133 - 3290 - 79.60
ಪಟ್ಟಣ - ಗಂಡು - 3086 - 1674 - 54.24
ಪಟ್ಟಣ - ಹೆಣ್ಣು - 3298 - 2485 - 75.35
======