ಜಿಲ್ಲೆ

ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಗಳಿಗೆ ಬಿಳ್ಕೋಡುವ ಸಮಾರಂಭ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಲಾಯನ್ಸ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 2024 25 ನೇ ಸಾಲಿನ 10 ನೇ ತರಗತಿ ವಿದ್ಯಾಥಿರ್ಗಳ ಬಿಳ್ಕೋಡುವ ಸಮಾರಂಭ ನೆರವೇರಿತು.

ಲಾಯನ್ಸ ಕ್ಲಬ್​ ಅಧ್ಯ ನಿತೀಶ ಸಾಲಿ ಮಾತನಾಡಿ, ವಿದ್ಯಾಥಿರ್ಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಅತ್ಯುನ್ನತ ಟ್ಟವಾಗಿದೆ. ನೀವೆಲ್ಲರೂ ಆತ್ಮವಿಶ್ವಾಸದಿಂದ ಪರೀೆಯಲ್ಲಿ ಯಶಸ್ಸು ಪಡೆಯಬೇಕು ಎಂದರು.

ಶಾಲಾ ಆಡಳಿತಾಧಿಕಾರಿ ಜಿ. ಬಿ. ಬೇವಿನಕಟ್ಟಿಯವರು ವಿದ್ಯಾಥಿರ್ಗಳನ್ನು ಕುರಿತು ಮಅತನಾಡಿ, ಮುಂಬರುವ ಪರೀೆಯಲ್ಲಿ ಸಾಧನೆಗೈದು ತಂದೆ, ತಾಯಿ, ಗುರುಗಳ ಹಾಗೂ ಶಾಲೆಯ ಕೀತಿರ್ ತರುವಂತವರಾಗಬೇಕು. ಅಲ್ಲದೇ ತಮ್ಮ ವಿದ್ಯಾಥಿರ್ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ದೇಶದ ಕೀತಿರ್ ಎತ್ತಿ ಹಿಡಿಯಬೇಕು ಎಂದರು.

ಚೇರಮನ್​ ಆನಂದ ಪೋತ್ನಿಸ್​ ವಿದ್ಯಾಥಿರ್ಗಳನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಭವ್ಯವಾದ ಭವಿಷ್ಯಕ್ಕೆ ಹತ್ತನೇ ತರಗತಿಯ ಪರೀೆಗಳು ತಳಹದಿಯಾಗಿದೆ. ಹೀಗಾಗಿ ನಿಮ್ಮ ಅಮೂಲ್ಯ ಸಮಯವನ್ನು ಓದಿನ ಕಡೆಗೆ ಹರಿಸಿ ತಂದೆ ತಾಯಿ, ಗುರುಗಳು ಹೇಳಿದ ಮಾರ್ಗದರ್ಶನದಲ್ಲಿ ಪರೀೆಯಲ್ಲಿ ಯಶಸ್ವಿ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾಥಿರ್ಗಳು 9ನೇ ತರಗತಿ ಸಹೋದರ ಸಹೋದರಿಯರಿಗೆ ದೀಪದಾನ ಮಾಡಿದರು. ಜೆ. ಸಿ. ಶಿರೋಳ, ಜೆ. ಡಿ. ಉತ್ತರಕರ, ಆರ್​. ಕೆ. ಹಬೀಬ, ಎಸ್​. ಬಿ. ಬಾಕಳೆ, ಸಿ. ಯು. ಹುಲಿಕಂತಿಮಠ, ಎಸ್​. ವಿ. ಶಿಗ್ಲಿ ಇತರರು ಇದ್ದರು.