ಗದಗ : ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷö್ಮಣಸಾ ಸಭಾಗೃಹದಲ್ಲಿ ಗದಗ ಎಸ್‌ಎಸ್‌ಕೆ ಸಮಾಜ ಪಂಚ ಕಮೀಟಿಯ ಅಧ್ಯಕ್ಷ ಫಕೀರಸಾ ಬಾಂಡಗೆ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ ಇವರ ನೇತೃತ್ವದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಕುರಿತು ಪೂರ್ವಬಾವಿ ಸಭೆ ಜರುಗಿತು.
ಈ ಸಭೆಯಲ್ಲಿ ಇದೇ ನವಂಬರ ೮ ರಂದು ಶುಕ್ರವಾರ ನಡೆಯಲಿರುವ ೨೦೨೪-೨೫ ನೇ ಸಾಲಿನ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಉತ್ಸವ ಸಮಿತಿಗೆ ಈ ಕೆಳಗಿನಂತೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ನೇಮಕ ಮಾಡಲಾಯಿತು. ಎಸ್‌ಎಸ್‌ಕೆ ಸಮಾಜದ ಐತಿಹಾಸಿಕ ಮೂಲ ಪುರುಷರಾದ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವ ಸಮಿತಿಯ ಚೇರಮನ್‌ರಾಗಿ ಸಾಗರ ಪವಾರ, ವೈಸ್ ಚೇರಮನ್‌ರಾಗಿ ಮಾಧುಸಾ ಬದಿ, ಕಾರ್ಯದರ್ಶಿಗಳಾಗಿ ಮೋಹನಸಾ ಪವಾರ, ಸಹ ಕಾರ್ಯದರ್ಶಿಗಳಾಗಿ ಕಸ್ತೂರಿಬಾಯಿ ಬಾಂಡಗೆ, ಖಜಾಂಚಿಯಾಗಿ ಪ್ರದೀಪ ಖಟವಟೆ ಇವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹಸ್ರಾರ್ಜುನ ಮಹಾರಾಜರ ಜಯಂತಿಯು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ವಾದ್ಯಘೋಷಗಳಿಂದ ಮೆರವಣಿಗೆಯನ್ನು ಅದ್ದೂರಿಯಾಗಿ ಜರುಗಿಸಲು ತೀರ್ಮಾನಿಸಲಾಯಿತು.
ನೂತನ ಚೇರಮನ್‌ರಾದ ಸಾಗರ ಪವಾರ ಅವರು ಮಾತನಾಡಿ, ಈ ಬಾರಿ ನಡೆಯುವ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದಲ್ಲಿ ಸುಗಮ ಸಂಗೀತ, ರಸಮಂಜರಿ ಕಾರ್ಯಕ್ರಮ, ಬೆಳಿಗ್ಗೆ ಬೈಕ್ರ‍್ಯಾಲಿ, ಸಂಜೆ ಸಹಸ್ರಾರ್ಜುನ ಮಹಾರಾಜರ ಬೆಳ್ಳಿಯ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆ ನಂತರ ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಗದಗ ಎಸ್‌ಎಸ್‌ಕೆ ಸಮಾಜದ ಪಂಚ ಕಮೀಟಿಯ ಸದಸ್ಯರುಗಳಾದ ಸುರೇಶಕುಮಾರ ಬದಿ, ಮೋತಿಲಾಲಸಾ ಪೂಜಾರಿ, ವಿಷ್ಣುಸಾ ಶಿದ್ಲಿಂಗ, ಅನಿಲ್ ಖಟವಟೆ, ಪರಶುರಾಮ ಬದಿ, ಶ್ರೀನಿವಾಸ ಬಾಂಡಗೆ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಗಣಪತಿ ಜಿತೂರಿ, ಅಂಬಾಸಾ ಖಟವಟೆ, ಜಿ.ಎನ್. ಹಬೀಬ, ವಿಶ್ವನಾಥಸಾ ಸೋಳಂಕಿ, ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ಶ್ರೀಕಾಂತ ಅರಸಿದ್ದಿ, ಭೀಮಾ ಕಾಟಿಗರ, ಸಂತೋಷ ಖಟವಟೆ, ರಾಘು ಬಾಂಡಗೆ, ಜಗದೀಶ ಪವಾರ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಎಂದು ಗದಗ ಎಸ್‌ಎಸ್‌ಕೆ ಸಮಾಜದ ಪಂಚ ಕಮೀಟಿಯ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.