ಜಿಲ್ಲೆ

ಎಸ್‌ಎಸ್‌ಕೆ ಸಮಾಜದಿಂದ ನಮ್ಮೂರು ದಸರಾ-2024

Gadag - Shivanand Hiremath

ಗದಗ: ಎಸ್‌ಎಸ್‌ಕೆ ಸಮಾಜದ ವತಿಯಿಂದ ಜಗದಂಬಾ ಶಿಕ್ಷಣ ಸಂಸ್ಥೆಯ ಮೂಲಕ ಈಗಾಗಲೇ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ನೀಡಲಾಗುತ್ತಿದ್ದು ಮುಂದಿನ ದಿನಮಾನಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನು ತೆರೆದು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜದ ಹಿರಿಯರು ಹಾಗೂ ನಗರದ ಗಣ್ಯ ಉದ್ಯಮಿಗಳಾದ ಆರ್.ಕೆ.ಹಬೀಬ (ಬುಡ್ಡಣ್ಣ) ಅವರು ಅಭಿಪ್ರಾಯ ಪಟ್ಟರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ “ನಮ್ಮೂರು ದಸರಾ-2024” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇದಕ್ಕೂ ಮುನ್ನ ಅವರು ಶ್ರೀ ಜಗದಂಬಾ ದೇವಿ ಹಾಗೂ ಶ್ರೀ ತುಳಜಾಭವಾನಿ ದೇವಿಯ ದರ್ಶನ ಪಡೆದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಶಂಕರಸಾ ಪವಾರ ಅವರು ಮಾತನಾಡಿ, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಶ್ರಮಿಸಬೇಕು. ಸಮಾಜದ ಏಳ್ಗೆಗಾಗಿ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅವರು ವಹಿಸಿದ್ದರು. ವೇದಿಕೆ ಮೇಲೆ ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋಧ ಶಿದ್ಲಿಂಗ, ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್‌ರಾದ ವಿಷ್ಣುಸಾ ಶಿದ್ಲಿಂಗ ಹಾಗೂ ಉದ್ಯಮಿ ವಿರೇಶ ಅಂಗಡಿ ಅವರು ಉಪಸ್ಥಿತರಿದ್ದರು.
ಬಲರಾಮ ಬಸವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚ ಕಮೀಟಿಯ ಸದಸ್ಯರಾದ ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ಮೋಹನಸಾ ಪವಾರ, ವಿಶ್ವನಾಥಸಾ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ರಾಘವೇಂದ್ರ ಬಾಂಡಗೆ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿ. ಎನ್. ಹಬೀಬ ನಿರೂಪಿಸಿದರು. ಸುಧೀರ ಕಾಟೀಗರ ವಂದಿಸಿದರು. ಇದಕ್ಕೂ ಮುನ್ನ ಖ್ಯಾತ ಉದ್ಯಮಿ, ಬಡವರ ಬಂಧು ರತನ ಟಾಟಾ ಅವರ ನಿಧನಕ್ಕೆ ಶೃದ್ದಾಂಜಲಿ ಸಲ್ಲಿಸಲಾಯಿತು.