ಗದಗ: ಸ್ಪರ್ಶ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ನಲ್ಲಿ ಇತ್ತೀಚಿಗೆ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಅತಿಥಿ ಮಹಿಳೆಯರು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಏಕೆ ಮಾಡುತ್ತೇವೆ ಅದರ ಮಹತ್ವದ ಕುರಿತು ಒಂದಿಷ್ಟು ಹಿತನುಡಿಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾದ ಗದಗ ನಗರದ ಎಲ್. ವೈ. ಡಿ. ಎಂ. ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಪ್ರಭಾ ದೇಸಾಯಿ ರವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡು ಯಾವ ರೀತಿ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಬದುಕಬೇಕು ಹಾಗೆಯೇ ಯಾವ ರೀತಿ ಬದುಕಿನಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಹೇಗೆ ಎದುರಿಸಬೇಕೆಂಬುದನ್ನು ಬಹಳ ಸುಂದರವಾಗಿ ತಮ್ಮ ಅನಿಸಿಕೆ ಮುಖಾಂತರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಾಗೆಯೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಡಾ. ರಶ್ಮಿ ಮನಿ ಅಸಿಸ್ಟೆಂಟ್ ಪ್ರೊಫೆಸರ್ ಎಸ್. ಡಿ. ಎಂ. ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಧಾರವಾಡ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಗಂಡು-ಹೆಣ್ಣು ಎನ್ನುವ ಭೇದಭಾವ ಬೇಡ, ಹೆಣ್ಣು ಮಕ್ಕಳನ್ನು ಓದಿಸಿ ಎಲ್ಲಾ ಪೋಷಕರು ಹೆಣ್ಣು ಮಕ್ಕಳು ಸಾಧನೆ ಮಾಡುವಲ್ಲಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ತಮ್ಮ ಸ್ವಂತ ಅನುಭವ ಕುರಿತು ಹೇಳಿದರು. ಇನ್ನೋರ್ವ ವಿಶೇಷ ಅತಿಥಿಗಳಾದ ಡಾ. ಅನಿತಾ ಕೆಂಭಾವಿ ಪ್ರೊಫೆಸರ್ ಜೈನ್. ಎ. ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹುಬ್ಬಳ್ಳಿ ಇವರು ಮಾತನಾಡಿ ಏನು ಬೇಕಾದರೂ ಸಾಧಿಸಬಹುದು ಹಾಗೆ ಆಯುರ್ವೇದಿಕ್ ಮತ್ತು ಯೋಗ ಎಲ್ಲರ ಜೀವನದಲ್ಲಿ ಎಷ್ಟೊಂದು ಮಹತ್ವ ಇದೆ ಎಂಬುದನ್ನು ತಮ್ಮ ಭಾಷಣದ ಮುಖಾಂತರ ವಿವರಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾದ ಶ್ರೀಮತಿ ಅಕ್ಕಮಹಾದೇವಿ ಬಸವರೆಡ್ಡಿ ವ್ಯವಸ್ಥಾಪಕರು ಮತ್ತು ಸಮಾಜ ಸೇವಕರು ಬಸವರೆಡ್ಡಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಗದಗ ಇವರು ಸಮಾಜದಲ್ಲಿ ಹೆಣ್ಣಿನ ಸ್ಥಾನ ಏನು? ಹಾಗೂ ನಾವು ಸ್ತ್ರೀಯನ್ನು ಗೌರವಿಸಬೇಕು. ಸ್ತ್ರೀ ಶಕ್ತಿ, ಸ್ತ್ರೀ ಸಹನೆ ಕುರಿತು ಒಂದೆರಡು ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು, ವಿಶೇಷ ಅತಿಥಿಗಳನ್ನು ಹಾಗೂ ಎಲ್ಲಾ ಗೌರವಾನ್ವಿತ ಅತಿಥಿಗಳಿಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕು. ಮೇಘ ಜೋಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಕು. ಚೈತ್ರಾ ಹಾಗೂ ಗೌರಿ ನಿರೂಪಿಸಿದರು. ಕು. ಶ್ರೀದೇವಿ ಸ್ವಾಗತಿಸಿದರು. ಕು. ಲತಾ ರವರು ವಂದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶಕುಂತಲಾ ಪಾಟೀಲ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಸಂಸ್ಥಾಪಕರಾದ ವಿಶ್ವನಾಥ್ ಪಾಟೀಲ, ಸಾಕ್ಷಿ ಜನಾಸೇವಾ ಸಂಸ್ಥೆ ಬೀಳಗಿ ಕಾರ್ಯದರ್ಶಿಯರಾದ ಡಾ. ವಿ. ಪಿ. ನಾಗನೂರ, ಪ್ರಾಚಾರ್ಯರಾದ ಶ್ರೀ ಡಿ. ಬಿ. ಮಧುಸೂದನ್ ಹಾಗೂ ಆಡಳಿತ ಅಧಿಕಾರಿಗಳಾದ ಶ್ರೀ ರಂಗನಾಥ ಎಂ.ವಿ. ಮತ್ತು ಸ್ಪರ್ಶ ನರ್ಸಿಂಗ್ ಕಾಲೇಜಿನ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.