ಜಿಲ್ಲೆ

"ಉತ್ತಮ ಆರೋಗ್ಯ, ಉತ್ತಮ ಮನಸ್ಸು, ಉತ್ತಮ ಶರೀರ ಹೊಂದಲು ಕ್ರೀಡೆಗಳು ಅಗತ್ಯ" : ಪ್ರೊ.ಡಾ.ಸುರೇಶ್ ವಿ. ನಾಡಗೌಡರ

Gadag: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡಿದ ಮಾನ್ಯ ಕುಲಪತಿಗಳು(ಪ್ರಭಾರ) ಮತ್ತು ಕುಲಸಚಿವರಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು ಮಾತನಾಡುತ್ತ "ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯ. ಯಾರು ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ ಅವರು ಆರೋಗ್ಯವಂತರಾಗಿರುತ್ತಾರೆ. ಉತ್ತಮ ಮನಸ್ಸು ಮತ್ತು ಶಾರೀರಿಕ ದೃಢತೆ ಹೊಂದಲು ಕ್ರೀಡೆಗಳು ಅತ್ಯಂತ ಸಹಕಾರಿಯಾಗಿವೆ. ಉತ್ತಮ ಆರೋಗ್ಯ ಉತ್ತಮ ಮನಸ್ಸು ಉತ್ತಮ ಶರೀರವನ್ನು ಹೊಂದಿದಾಗ ಮಾತ್ರ ಮನುಷ್ಯ ಚೆನ್ನಾಗಿರುತ್ತಾನೆ. ಅದಕ್ಕೆ ಕ್ರೀಡೆಗಳು ಅಗತ್ಯವಾಗಿ ಬೇಕು. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು" ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಖಾಲೀದ್ ಖಾನ್ ಅವರು "ಕ್ರೀಡೆಗಳಿಂದ ಕಲಿತ ಶಿಸ್ತು ಜೀವನ ಪಾಠವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಮಾಡಲು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕ್ರೀಡೆಗಳಿಂದ ಒಗ್ಗಟ್ಟಿನ ಮಂತ್ರ ಕಲಿಯಲು ಸಾಧ್ಯ" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತ್ ಜೆ ಸಿ, ಡಾ. ಅಬ್ದುಲ್ ಅಜೀಜ್ ಮುಲ್ಲಾ, ಡಾ. ಗಿರೀಶ್ ದಿಕ್ಷಿತ್, ಶ್ರೀ ಉಮೇಶ್ ಬಾರಕೇರ, ಶ್ರೀ ಎಂ.ಬಿ.ಚನ್ನಪ್ಪಗೌಡರ, ಡಾ. ಶರಣು ಗೋಗೇರಿ, ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚಂದ್ರಪ್ಪ ಬಾರಂಗಿ ಅವರು ನಿರೂಪಿಸಿದರೆ, ಡಾ. ವೀರೇಶ್ ಬಿಜಾಪುರ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ದಾವಲಬಿ ಪ್ರಾರ್ಥಿಸಿದರು, ಶ್ರೀ ಎಂ ಎಂ ಮಂಜುನಾಥ್ ಅವರು ವಂದಿಸಿದರು.