ಗದಗ ನಗರದ ಪ್ರತಿಷ್ಠಿತ ಸ್ಪರ್ಶ ನರ್ಸಿಂಗ್ ಕಾಲೇಜಿನಲ್ಲಿ ಅತಿಥಿ ಮಹನೀಯರು ಫ್ಲಾರೆನ್ಸ್ ನೈಟಿಂಗಲ್ ಅವರ ಭಾವಚಿತ್ರಕ್ಕೆ ಪುಷ್ಪ, ಹೂಮಾಲೆ ಅರ್ಪಿಸಿ, ಅವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸಲಾಯಿತು.
ನಗರದ ಪ್ರತಿಷ್ಠಿತ ಎಲ್. ವಾಯ್. ಡಿ. ಎಂ. ಸ್ಪರ್ಶ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಧನೇಶ ಎಲ್. ದೇಸಾಯಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ದಾದಿಯರು ಉತ್ತಮ ಸೇವೆ ನೀಡಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು, ವಿದ್ಯಾರ್ಥಿಗಳಿಗೆ ನರ್ಸಿಂಗ್ ಮಹತ್ವ, ದಾದಿಯರ ಕರ್ತವ್ಯ ಪಾಲನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಿಗುವ ಅವಕಾಶಗಳು ಮತ್ತು ರೋಗಿಗಳ ಆರೈಕೆ ಕುರಿತು ಮಾತನಾಡಿ, ಫ್ಲಾರೆನ್ಸ್ ನೈಟಿಂಗಲ್ ಅವರ ಜನ್ಮದಿನವನ್ನೇ ವಿಶ್ವ ದಾದಿಯರ ದಿನವನ್ನಾಗಿ ಆಚರಿಸುವುದು ಅನೇಕರಿಗೆ ತಿಳಿದ ವಿಷಯವಾಗಿದೆ. ದಾದಿಯರು ತಮ್ಮ ನೋವನ್ನು ದೂರವಿಡುತ್ತಾ ಹಗಲಿರಳು ಶ್ರಮಿಸುತ್ತಾ ನಿತ್ಯ ರೋಗಿಯ ಸೇವೆಗೆಯುವ ಲಕ್ಷಾಂತರ ದಾದಿಯರ ಸೇವೆಯನ್ನು ನಾವೆಲ್ಲರೂ ಸ್ಮರಿಸಲೇಬೇಕು. ದೇಶ ರಕ್ಷಣೆಗೆ ಸೈನಿಕರು ಬೇಕು, ಅಂತೆಯೇ ಮನುಕುಲದ ಆರೋಗ್ಯ ರಕ್ಷಣೆಗೆ ದಾದಿಯರ ಸೇವೆ ಬೇಕು. ತಾನು ತನ್ನವರು ತನ್ನ ಕುಟುಂಬ ಅನ್ನೋದನ್ನ ಲೆಕ್ಕಿಸದೆ ರೋಗಿಯ ಸೇವೆಗಾಗಿ ನಿರಂತರವಾಗಿ ಬದುಕನ್ನು ಸವೆಸುವ ದಾದಿಯರ ಕರ್ತವ್ಯವನ್ನು ಕೇವಲ ಪದಗಳಿಂದ ಬಣ್ಣಿಸೋದು ಕಷ್ಟ, ಅವರೆಲ್ಲರೂ ಕೂಡ ಸಮಾನ ಗೌರವಕ್ಕೆ ಅರ್ಹರು ಎಂದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಗಳಾದ ವಿದ್ಯಾದಾನ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಪ್ರತಿಯೊಬ್ಬ ರೋಗಿಗೆ ಇನ್ನೊಬ್ಬ ತಾಯಿಯಂತೆ ಸೇವೆ ಸಲ್ಲಿಸುವ ದಾದಿಯರು ಧನ್ಯರು. ವೈದ್ಯರು ರೋಗಿಯನ್ನು ತಪಾಸಣೆ ಮಾಡುವುದು ಕೆಲವು ಸಮಯ ಮಾತ್ರ, ಆದರೆ ಒಬ್ಬ ದಾದಿಯು ಆ ರೋಗಿಯು ಆಸ್ಪತ್ರೆಗೆ ಬಂದಾಗಿನಿಂದ ಹಿಡಿದು ಆತನು ನಿರೋಗಿಯಾಗಿ ಹೊರ ಹೋಗುವವರೆಗೆ ಆತನನ್ನು ಕಾಳಜಿಯಿಂದ ನೋಡಿಕೊಂಡು ಆತನ ಸಂತೋಷಕ್ಕೆ ಕಾರಣೀಭೂತಳಾಗುತ್ತಾಳೆ. ಒಂದು ವೇಳೆ ದಾದಿಯರು ಇಲ್ಲದೆ ಇದ್ದರೆ ಪ್ರತಿಯೊಬ್ಬ ರೋಗಿಯ ಸ್ಥಿತಿಯು ಊಹಿಸಲು ಸಾಧ್ಯವಾಗದು, ಜೊತೆಗೆ ಫ್ಲಾರೆನ್ಸ್ ನೈಟಿಂಗಲ್ ಅವರ ಜೀವನ ಸಾಧನೆ ಮತ್ತು ಅವರು ರೋಗಿಗಳಿಗೆ ನೀಡಿದ ಆರೈಕೆ ಮತ್ತು ಸೇವೆಯ ಕುರಿತು ಹಾಗೂ ಸಮಾಜದಲ್ಲಿ ದಾದಿಯರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕರ್ತವ್ಯ ಮತ್ತು ಸೇವೆಗಳ ಕುರಿತು ಕಿರುನಾಟಕ ಹಾಗೂ ನೃತ್ಯರೂಪಕಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಉದ್ಘಾಟಕರಾದ ಡಾ. ಧನೇಶ ಎಲ್. ದೇಸಾಯಿ ಅವರಿಗೆ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಗೌರವಾನ್ವಿತ ಅತಿಥಿಗಳಿಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸೌಭಾಗ್ಯ ಸಣ್ಣಮನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ಕು. ಬಸಮ್ಮ ಗೊಲ್ಲರ ನಿರೂಪಿಸಿದರು, ಕು. ಕಾವ್ಯ ಬೀರನೂರ ಸ್ವಾಗತಿಸಿದರು ಹಾಗೂ ಕು. ಸಹನಾ ಮತಗಟ್ಟಿ ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ನಗರದ ಸರಕಾರಿ ಶೂಶ್ರಷ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ರೇಖಾ ಕೆ. ಬಿ. ಹಾಗೂ ಶ್ರೀಮತಿ ಉಷಾ ಎಚ್. ಟಿ, ಶ್ರೀಮತಿ ಶಕುಂತಲಾ ನರ್ಸಿಂಗ್ ಕಾಲೇಜಿನ ಸಂಸ್ಥಾಪಕರಾದ ಶ್ರೀ ವಿಶ್ವನಾಥ ಪಾಟೀಲ, ಸಾಕ್ಷಿ ಜನಸೇವಾ ಸೊಸೈಟಿ ಬೀಳಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀದೇವಿ ಡಿ. ಕರೆನ್ನವರ್, ಕಾರ್ಯದರ್ಶಿಗಳಾದ ಡಾ. ವಿ . ಪಿ. ನಾಗನೂರ, ಪ್ರಾಚಾರ್ಯರಾದ ಡಿ . ಬಿ. ಮಧುಸೂಧನ್ ಹಾಗೂ ಸಮಸ್ತ ಆಡಳಿತ ಮಂಡಳಿಯ ಸದಸ್ಯರು, ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಶ್ರೀ ರಂಗನಾಥ ಎಂ. ವಿ, ಕಾಲೇಜಿನ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.