ಜಿಲ್ಲೆ

ಶರಣರ ವಚನ ಸಾಹಿತ್ಯದಿಂದ ಮನುಕುಲಕ್ಕೆ ಒಳಿತು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಶರಣರ ವಚನ ಸಾಹಿತ್ಯದಿಂದ ಮನುಕುಲಕ್ಕೆ ಒಳಿತಾಗಿದೆ. ಧರ್ಮ, ಸಂಸ್ಕಾರ ಮತ್ತು ಸಂಸತಿಯೊಂದಿಗೆ, ಮಾನವೀಯತೆಯನ್ನು ಪ್ರತಿಪಾದಿಸುವ ಧರ್ಮ ಬಸವಧರ್ಮವಾಗಿದೆ ಶಿರೋಳದ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ನಗರದ ಒಕ್ಕಲಗೇರಿಯಲ್ಲಿ ಶನಿವಾರ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂದ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ವಚನ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣ ಮತ್ತು ಶರಣೆಯರ ವಚನಗಳು ಆದರ್ಶಮಯ ಬದುಕಿಗೆ ಬೆಳಕಾಗಿವೆ. ಎಲ್ಲರನ್ನೂ ಸನ್ಮಾರ್ಗದೆಡೆ ಮುನ್ನಡೆಸುವ ವಚನ ಸಾಹಿತ್ಯವನ್ನು ನಾವಿಂದು ಓದಬೇಕು, ಅರಿತುಕೊಳ್ಳಬೇಕು. ಅದರಂತೆ ನಡೆದುಕೊಳ್ಳಬೇಕು. ಅಂದಾಗ ಜೀವನ ಪಾವನಗೊಳ್ಳುವದು ಎಂದರು.
ಮಂಗಳಾ ಕಾಮಣ್ಣವರ ಅವರು ಶರಣ ಅಲ್ಲಮಪ್ರಭು ದೇವರ ವಚನ ಚಿಂತನೆ ಮಾಡಿದರು. ಶಿವಕುಮಾರ ಪಾಟೀಲ, ಕಿರಣ ತಿಪ್ಪಣ್ಣವರ ಸೇರಿದಂತೆ ಇತರರು ಇದ್ದರು.