ಜಿಲ್ಲೆ

ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ - ಡಾ. ರಾಜಶೇಖರ

Gadag: ಬಸವಣ್ಣವರು ನಿರ್ಮಿಸಿದ ಅನುಭವ ಮಂಟಪವು ಯಾವುದೇ ಜಾತಿ, ಧರ್ಮ ಕಟ್ಟುಪಾಡುಗಳಿಗೆ ಒಳಪಟ್ಟದ್ದಲ್ಲ ಅದು ಸಮ ಸಮಾಜದ ಶ್ರೇಯೋ ಅವೃದ್ಧಿಗಾಗಿ ನಿರ್ಮಿಸಲಾದ ಸಂಸತ್ತಾಗಿತ್ತು. ಅಂಚಿಗೆ ತಳ್ಳಲ್ಪಟ್ಟವರಿಗೂ ಸಮಾನ ಅವಕಾಶಗಳನ್ನು ಕೊಡುವ ಒಂದು ವ್ಯವಸ್ಥೆಯನ್ನು ಹೊಂದಿರುವ ಅನುಭಾವಿಗಳ ಕೂಟವಾಗಿತ್ತು ಎಂದು ಡಾ. ರಾಜಶೇಖರ ದಾನರೆಡ್ಡಿ ಅವರು ಹೇಳಿದರು. ಅವರು ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಡಾಕ್ಟರ್ ಎಂ ಎಂ ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಶರಣ ಸಾಹಿತ್ಯ ಸರಣಿ ಉಪನ್ಯಾಸದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
 ಜಾತಿ ಲಿಂಗ ಧರ್ಮ ಭೇದವಿಲ್ಲದೆ ಸಮಾನತೆಯನ್ನು ಅನುಸರಿಸುವವರು, ಯಾರು ಅಂಗದ ಮೇಲೆ ಲಿಂಗವನ್ನು ಧರಿಸುವರೆಲ್ಲರೂ ಅವರು ಲಿಂಗಾಯತರು. ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ-ಇವು ಬಹಿರಂಗ ಅಷ್ಟಾವರಣಗಳು. ಇವುಗಳಲ್ಲಿ ಮೊದಲ ಮೂರು ಪೂಜ್ಯವಾದುವು. ಅನಂತರದ ಮೂರು ಪೂಜಾಸಾಧನವಾದುವು. ಕೊನೆಯ ಎರಡು ಪೂಜಾಪರಿಣಾಮಗಳು. ಆಚಾರ, ಆನಂದ, ಅನುಭವ, ಆಪ್ಯಾಯನ, ಚಿದ್ರಸ, ಚಿದ್ಭಸ್ಮ, ಜ್ಞಾನಪ್ರಕಾಶ, ನಾದಮಂತ್ರ ಎಂಬಿವು ಅಂತರಂಗ ಅಷ್ಟಾವರಣಗಳೆನಿಸಿವೆ. ಬಹಿರಂಗ ಅಷ್ಟಾವರಣಗಳು ಸ್ಥೂಲದೇಹಕ್ಕೂ ಅಂತರಂಗ ಅಷ್ಟಾವರಣಗಳು ಸೂಕ್ಷ್ಮಶರೀರಕ್ಕೂ ಸಂಬಂಧಪಟ್ಟವುಗಳೆಂದು ಅನುಭಾವಿಗಳು ಹೇಳಿದ್ದಾರೆ. ಎಂದು ಹೇಳಿ ವಿದ್ಯಾರ್ಥಿಗಳಿಗೆ ಅವುಗಳ ತಿಳುವಳಿಕೆಯನ್ನು ನೀಡಿದರು. ಜಗತ್ತು ನಾಗರಿಕತೆಯನ್ನು ಕಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಸವಣ್ಣ ನ ಅನುಭವ ಮಂಟಪ ಎಂಬ ಸಂಸತ್ ಭವನವನ್ನೇ ನಿರ್ಮಿಸಿದ್ದರು. ಎಂದು ಹೇಳಿ ಉಪನ್ಯಾಸ ನೀಡಿದರು.
 ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಹಾಗೂ ಸ್ವಾಗತವನ್ನು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ ವಿಶ್ವನಾಥ್ ಅವರು ನೆರವೇರಿಸಿದರು. ಡಾ. ನಾಗರಾಜ ಬಳಿಗೇರ ಅವರು ವಂದಿಸಿದರು. ಉಪನ್ಯಾಸಕರಾದ ಶ್ರುತಿ ಮ್ಯಾಗೇರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು